ಬಂಟ್ವಾಳ : ಟಿಪ್ಪುವಿನ ಹೆಸರಿನಲ್ಲಿ ಕರ್ನಾಟಕ ಸರ್ಕಾರ ಬೆಂಕಿ ಹಚ್ಚುವ ಕೆಲಸ ಮಾಡಿದ್ದು, ಕೊಡಗು ಬಂಟ್ವಾಳದಲ್ಲಾಗಿರುವ ಕೊಲೆ ಪ್ರಕರಣ ಸಹಿತ ಇಡೀ ಘಟನೆಯ ಕುರಿತು ಉನ್ನತಮಟ್ಟದ ನ್ಯಾಯಾಂಗ ತನಿಖೆ ನಡೆಸಬೇಕೆಂದು ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ ರಾಜ್ಯಸರ್ಕಾರವನ್ನು ಒತ್ತಾಯಿಸಿದ್ದಾರೆ.
ಗುರುವಾರ ಕೊಲೆಗೀಡಾದ ನಾವೂರು ಗ್ರಾಮದ ಹಳೆಗೇಟು ನಿವಾಸಿ ಹರೀಶ್ ಪೂಜಾರಿಯವರ ನಿವಾಸಕ್ಕೆ ಭಾನುವಾರ ಭೇಟಿ ನೀಡಿ, ಅವರ ತಂದೆ,ತಾಯಿ, ತಂಗಿ ಹಾಗೂ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಪ್ಪುವಿನ ಕುರಿತು ಸಾರ್ವಜನಿಕ ವಲಯದಲ್ಲಿ ಗಂಭೀರವಾದ ಚರ್ಚೆ ನಡೆಯುತ್ತಿರುವಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ವಿಚಾರದಲ್ಲಿ ಸ್ವಯಂಕೃತ ಅಪರಾಧ ವೆಸಗಿದ್ದಾರೆ ಎಂದು ಆರೋಪಿಸಿದರು.

8 (1)

1

2 (1)

4 (1)

5

6
ಕರ್ನಾಟಕದಲ್ಲಿ ಗೃಹ ಇಲಾಖೆ ಸಂಪೂರ್ಣ ವೈಫಲ್ಯದಿಂದ ಮೆರೆದಿದೆ. ಪ್ರತಿನಿತ್ಯ ಮುಂಜಾನೆ ಇಂಟಲಿಜೆನ್ಸಿ ಐಜಿ ಯವರು ಮುಖ್ಯಮಂತ್ರಿಯವರನ್ನು ಭೇಟಿಯಾಗಿ ರಾಜ್ಯದ ವಿದ್ಯಮಾನಗಳ ಬಗ್ಗೆ ವರದಿ ಒಪ್ಪಿಸುತ್ತಾರೆ. ಅದಕ್ಕೆ ತಕ್ಕಂತೆ ಕಾರ್ಯಚರಣೆ ನಡೆಸಬೇಕು. ಆದರೆ ಇತ್ತೀಚೆಗಿನ ದಿನಗಳಲ್ಲಿ ಇಂಟೆಲೆಜೆನ್ಸಿ ವಿಭಾಗ ಇದೆಯೇ ಇಲ್ಲವೇ ಎಂಬ ಬಗ್ಗೆ ಅನುಮಾನ ವ್ಯಕ್ತವಾಗಿದೆ ಎಂದು ಟೀಕಿಸಿದರು. ಕರ್ನಾಟಕ ಸರ್ಕಾರದ ಆಡಳಿತ ವೈಫಲ್ಯವೇ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಡಲು ಕಾರಣವಾಗಿದೆ. ಎಲ್ಲಾ ಘಟನೆಗೆ ಮುಖ್ಯಮಂತ್ರಿ ಹಾಗೂ ಗೃಹ ಇಲಾಖೆಯೇ ಕಾರಣವಾಗಿದೆ ಎಂದ ಅವರು ಅಮಾಯಕರನ್ನು ಬಲಿಕೊಟ್ಟು ಅದರಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ಇಂತಹಾ ಘಟನೆಗಳು ಇಂದಿಗೇ ಕೊನೆಯಾಗಬೇಕು. ಮುಂದಿನ ಎರಡು ವರ್ಷಗಳಲ್ಲಿ ಕಾನೂನು ಸುವ್ಯವಸ್ಥೆಯನ್ನು ಸರಿದಾರಿಗೆ ತರುವಲ್ಲಿ ಗೃಹಸಚಿವ ಡಾ.ಪರಮೇಶ್ವರ್ ಅವರು ಪ್ರಯತ್ನಿಸಬೇಕು ಎಂದು ಡಿ.ವಿ.ಎಸ್. ಸಲಹೆ ನೀಡಿದರು.
ತಿರುಚುವ ಪ್ರಯತ್ನ..
ಕಾಂಗ್ರೇಸ್ ಸರ್ಕಾರ ತನ್ನ ಆಡಳಿತ ವೈಫಲ್ಯವನ್ನು ಮರೆಮಾಚುವ ನಿಟ್ಟಿನಲ್ಲಿ ಎಲ್ಲವನ್ನೂ ಬಿಜೆಪಿ ಹಾಗೂ ಸಂಘಪರಿವಾರದ ಮುಖಂಡರು, ಕಾರ್ಯಕರ್ತರ ಮೇಲೆ ಹೇರಲು ಯತ್ನಿಸುತ್ತಿದೆ ಎಂದು ಆರೋಪಿಸಿದ ಅವರು, ಇಂತಹಾ ಪ್ರಯತ್ನಗಳು ನಡೆದರೆ ಗಂಭೀರ ಪರಿಣಾಮ ಅನುಭವಿಸಬೇಕಾದೀತು ಎಂದು ಎಚ್ಚರಿಸಿದರು. ರಾಜ್ಯದ ಆಡಳಿತದಲ್ಲಿ ಕೇಂದ್ರ ದಿಂದ ಯಾವುದೇ ರೀತಿಯ ಹಸ್ತಕ್ಷೇಪ ನಡೆಸುತ್ತಿಲ್ಲ, ಕಾನೂನು ಸುವ್ಯವಸ್ಥೆ ಕಾಪಾಡುವುದು ಆಯಾಯಾ ರಾಜ್ಯ ಸಕರ್ಾರಕ್ಕೆ ಸಂಬಂಧಿಸಿದ ವಿಚಾರವಾಗಿದ್ದು, ಪರೋಕ್ಷವಾಗಿ ರಾಜ್ಯ ಸರ್ಕಾರಗಳಿಗೆ ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತದೆ, ಬಿಜೆಪಿ ಮಾತ್ರವಲ್ಲ ಕಾಂಗ್ರೇಸ್ ಆಡಳಿತವಿರುವ ರಾಜ್ಯವನ್ನೂ ನರೇಂದ್ರ ಮೋದಿ ನೇತೃಥ್ವದ ಕೇಂದ್ರ ಸರ್ಕಾರ ಸಮಾನವಾಗಿ ಕಾಣುತ್ತದೆ ಎಂದರು.
ಈ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲು, ವಿ.ಪ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಜಿಲ್ಲಾಧ್ಯಕ್ಷ ಪ್ರತಾಪ ಸಿಂಹ ನಾಯಕ್, ಬಿಜೆಪಿ ಮುಖಂಡರಾದ ಉಳಿಪಾಡಿಗುತ್ತು ರಾಜೇಶ್ ನಾಯ್ಕ್, ಸುಲೋಚನಾ ಜಿ ಕೆ ಭಟ್, ಸಂಜೀವ ಮಠಂದೂರು, ಜಿ.ಆನಂದ, ದೇವದಾಸ ಶೆಟ್ಟಿ, ದಿನೇಶ್ ಭಂಡಾರಿ, ಗೋವಿಂದ ಪ್ರಭು, ರಾಮದಾಸ ಬಂಟ್ವಾಳ, ತುಂಗಪ್ಪ ಬಂಗೇರ, ಕೃಷ್ಣಪ್ಪ ಪೂಜಾರಿ ದೋಟ, ಅಶೋಕ್ ಕುಮಾರ್ ರೈ ಪುತ್ತೂರು, ಜಿ.ಪಂ.ಸದಸ್ಯ ಗಿರಿಜ, ತಾ.ಪಂ. ಉಪಾಧ್ಯಕ್ಷೆ ವಿಲಾಸಿನಿ, ವಿ.ಹಿ.ಪಂ.ತಾಲೂಕು ಘಟಕದ ಅಧ್ಯಕ್ಷ ಸರಪಾಡಿ ಅಶೋಕ್ ಶೆಟ್ಟಿ,ಹಿ.ಯು. ಸೇ. ಪ್ರಮುಖರಾದ ಪದ್ಮನಾಭ ನಾವೂರ, ಶಿವಪ್ರಸಾದ ಬಂಟ್ವಾಳ, ನಾವೂರು ಪಂ.ಸದಸ್ಯ ಸದಾನಂದ ಮೊದಲಾದವರು ಹಾಜರಿದ್ದರು. ಇದೇ ವೇಳೆ ಸಚಿವ ಡಿ.ವಿ.ಎಸ್ ಅವರು ವೈಯುಕ್ತಿಕವಾಗಿ 50 ಸಾವಿರ ರೂ ಆರ್ಥಿಕ ನೆರವನ್ನು ಹರೀಶ್ ಕುಟುಂಬಕ್ಕೆ ಹಸ್ತಾಂತರಿಸಿದರು.
ಇದಕ್ಕೂ ಮೊದಲು ಸಚಿವರು ಬಿಜೆಪಿ ಮುಖಂಡ ಉದಯಕುಮಾರ್ ರಾವ್ ಬಂಟ್ವಾಳ ಇವರ ನಿವಾಸದಲ್ಲಿ ಉಪಹಾರ ಸೇವಿಸಿ, ಆರ್ ಎಸ್ಎಸ್ ಪ್ರಮುಖರಾದ ಕಲ್ಲಡ್ಕ ಡಾ,ಪ್ರಭಾಕರ ಭಟ್ ಹಾಗೂ ಪಕ್ಷದ ಸ್ಥಳೀಯ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದರು

By Suddi9

Leave a Reply

Your email address will not be published. Required fields are marked *