ಬಂಟ್ವಾಳ, : ಸಜೀಪಮುನ್ನೂರು ಗ್ರಾಮ ಮುದೆಲ್‍ಮುಟ್ಟಿ ಶ್ರೀ ನಾಲ್ಕೈತ್ತಾಯ ದೈವ ಪರಿವಾರದ ಜುಮಾದಿ ಬಂಟ ದೈವಸ್ಥಾನದ ಪಂಚಾಂಗದ ಕೆಲಸಕ್ಕೆ ಹಿರಿಯ ಪತ್ರಕರ್ತರು, ನರಿಕೊಂಬು ಗ್ರಾಮ ಏರಮಲೆ ಶ್ರೀ ಕಾಡೆದಿ ಭದ್ರಕಾಳಿ ದೇವಸ್ಥಾನದ ಆಡಳಿತ ಸಮಿತಿ ಕಾರ್ಯದರ್ಶಿ ರಾಜಾ ಬಂಟ್ವಾಳ ನ. 8ರಂದು ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎ.ಸಿ.ಭಂಡಾರಿ ಪೂರ್ವಭಾವಿ ಮಾಹಿತಿ ನೀಡಿ ನ. 29ರಂದು ದೈವಸ್ಥಾನ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಲಾಗುವುದು. ದೈವಸ್ಥಾನದ ಗರ್ಭಗುಡಿಯನ್ನು ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಸಂಪೂರ್ಣ ಶಿಲಾಮಯವಾಗಿ ನಿರ್ಮಿಸುವುದಾಗಿ ವಿವರಿಸಿದರು.

0811bteph1
ಸ್ಥಳೀಯರು, ಮಾಗಣೆಯ ದೈವಭಕ್ತರ ಸಂಪೂರ್ಣ ಸಹಕಾರದಲ್ಲಿ ಇಂತಹ ಒಂದು ಕಾರ್ಯ ಆಗುತ್ತಿದೆ. ಇಂದು ದೈವಸ್ಥಾನ ನಿರ್ಮಾಣ ಉದ್ದೇಶಿತ ಕೆಲಸಕ್ಕೆ ಮೂಲದಲ್ಲಿ ನೆಲವನ್ನು ಸಮತಟ್ಟು ಮಾಡವುದು, ಸ್ವಚ್ಚಗೊಳಿಸುವುದು, ಶಿಲಾನ್ಯಾಸ ಪೂರ್ವಭಾವಿ ಶ್ರಮದಾನದ ಕೆಲಸಕ್ಕೆ ಚಾಲನೆ ನೀಡಿದ್ದಾಗಿ ನುಡಿದರು. ನಿರ್ದಿಷ್ಟ ಅವ„ಯಲ್ಲಿ ಇದರ ಕೆಲಸ ಮುಗಿಸಿ ಬ್ರಹ್ಮಕಲಶೋತ್ಸವ ಧಾರ್ಮಿಕ ವಿದಿಗಳನ್ನು ಕ್ಲಪ್ತ ಸಮಯದಲ್ಲಿ ಮಾಡಲು ಸಂಕಲ್ಪಿಸಿ ದಿನ ನಿಗದಿ ಮಾಡಿದ್ದಾಗಿ ಇದೇ ಸಂದರ್ಭ ಪ್ರಕಟಿಸಿದರು.
ದೈವಸ್ಥಾನದ ಸಂಪರ್ಕ ರಸ್ತೆಗೆ ಸ್ಥಳದ ಅಭಾವ ಉಂಟಾದಾಗ ಸ್ಥಳೀಯರಾದ ಪಿ. ಧನಂಜಯ ಶೆಟ್ಟಿ, ಪಿ.ಪ್ರವೀಣ ಕುಮಾರ್ ಶೆಟ್ಟಿ ಸ್ಥಳದಾನ ನೀಡಿದ್ದರು. ಅದೇ ರೀತಿಯಲ್ಲಿ ಜುಮಾದಿಬಂಟ ದೈವಸ್ಥಾನದ ಸಂಪರ್ಕ ರಸ್ತೆ ನಿರ್ಮಿಸಲು ಅಬ್ದುಲ್ ರಹಿಮಾನ್, ಸಂಜೀವ ಪೂಜಾರಿ, ಕೊರಗ ಪೂಜಾರಿ ಸ್ಥಳದಾನ ನೀಡಿದ್ದು ಅವರಿಗೆ ಕೃತಜ್ಞರಾಗಿರುವುದಾಗಿ ಹೇಳಿದರು.
ಗುದ್ದಲಿಪೂಜೆ ಸಂದರ್ಭ ಸಮಿತಿ ಉಪಾಧ್ಯಕ್ಷ ಎಂ. ಪರಮೇಶ್ವರ ಮುನ್ನೂರು, ಪ್ರ.ಕಾರ್ಯದರ್ಶಿಗಳಾದ ಎ. ದಿನೇಶ್ ಭಂಡಾರ ಆಳ್ವರಪಾಲು, ಎನ್.ಕೆ. ಶಿವ ಖಂಡಿಗ, ಕೋಶಾ„ಕಾರಿ ಎಂ. ಸುಬ್ರಹ್ಮಣ್ಯ ಭಟ್ ಮಂಜಿನಡ್ಕ, ಕಾರ್ಯದರ್ಶಿಗಳಾದ ಮನೋಜ್ ಆಳ್ವ ದಳಂದಿಲ, ಪ್ರವೀಣ್ ಕುಮಾರ್ ಶೆಟ್ಟಿ ಪರಾರಿಗುತ್ತು, ಉಮಾಕರ ಮಾರ್ತಾಜೆ, ಧನಂಜಯ ಶೆಟ್ಟಿ ಪರಾರಿಗುತ್ತು, ಸಂಘಟನಾ ಕಾರ್ಯದರ್ಶಿ ತಿಮ್ಮಪ್ಪ ಗಟ್ಟಿ ಕೇಕುನಾರಬೆಟ್ಟು, ಜೊತೆ ಕಾರ್ಯದರ್ಶಿ ಪ್ರಸಾದ್ ಕುಮಾರ್ ಪರಾರಿಗುತ್ತು, ಹರಿಪ್ರಸಾದ್ ಭಂಡಾರಿ ಆಳ್ವರಪಾಲು, ಚಂದ್ರಶೇಖರ ಗಟ್ಟಿ ಅಂದಾಡಿ, ನರೇಂದ್ರ ಆಳ್ವ ಗುವೆಲ್‍ಮಾರು, ಗೌರವ ಸಲಹೆಗಾರರಾದ ಶಿವರಾಮ ಬಾಸ್ರಿತ್ತಾಯ ಅದ್ರುಕ್ಕು, ಗಂಗು ಗಟ್ಟಿ, ಜಯಂತ ಗಟ್ಟಿ, ಕೊರಗ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಶ್ರಮದಾನದ ಕೆಲಸದಲ್ಲಿ ಶ್ರೀ ಷಣ್ಮುಖ ಯುವಕ ಸಂಘ ಮುಗುಳ್ಯ, ಆಲಾಡಿ ಯುವಕ ಸಂಘದ ಸದಸ್ಯರುಗಳು, ಗುತ್ತು ಮನೆಯವರು, ದೈವದ ಚಾಕರಿದಾರರು ಪಾಲ್ಗೊಂಡಿದ್ದರು.
0811bಣeಠಿh1

By Suddi9

Leave a Reply

Your email address will not be published. Required fields are marked *