ಮೂಡುಬಿದರೆ: ಜಿಲ್ಲಾಡಳಿತದ ಅಸಮರ್ಪಕತೆಯಿಂದ ಜಿಲ್ಲೆಯಲ್ಲಿ ಜನರು ಭಯ ಪಡುವ ವಾತಾವರಣ ನಿರ್ಮಾಣವಾಗಿದೆ.ಜೈಲಿನಲ್ಲಿ ನಡೆದ ಹತ್ಯೆ ಪ್ರಕರಣವು ನಮ್ಮ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಯಾವ ರೀತಿ ಕಾರ್ಯನಿರ್ವಹಿಸುತ್ತಿದೆ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಸಾರ್ವಜನಿಕವಾಗಿ ಕೊಲ್ಲುವ, ಹಲ್ಲೆ ನಡೆಸುವ ಕೃತ್ಯಗಳು ಹೆಚ್ಚಾಗುತ್ತಿದ್ದು, ಜಿಲ್ಲಾಡಳಿತ, ಪೊಲೀಸ್ ಇಲಾಖೆ ನಿಷ್ಕ್ರಿಯವಾಗಿದೆ. ಸಮಾಜಘಾತಕ ಚಟುವಟಿಕೆಗಳ ವಿರುದ್ಧ ರಾಜ್ಯ ಸರ್ಕಾರ ಇನ್ನಾದರೂ ಎಚ್ಚೆತ್ತು ಸೂಕ್ತ ಕ್ರಮ ಕೈಗೊಳ್ಳುವಂತಾಗಬೇಕು. ರಾಜಕೀಯಗೋಸ್ಕರ ಇಲ್ಲಸಲ್ಲದ ಹೇಳಿಕೆ ನೀಡುವುದನ್ನು ಜನಪ್ರತಿನಿಧಿಗಳು ನಿಲ್ಲಿಸಬೇಕೆಂದು ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್ ಹೇಳಿದರು.
mbd_nov3_3 (1)
ಇತ್ತೀಚೆಗೆ ಹತ್ಯೆಗೀಡಾಗಿದ್ದ ಬಜರಂಗ ಕಾರ್ಯಕರ್ತ ಪ್ರಶಾಂತ್ ಮನೆಗೆ ಮಂಗಳವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ನೀಡಿ ಸುದ್ದಿಗಾರರ ಜೊತೆ ಮಾತನಾಡಿದರು. ಪ್ರಶಾಂತ್ ಕುಟುಂಬಕ್ಕೆ ರೂ.50 ಸಾವಿರ ಧನ ಸಹಾಯ ಮಾಡಿದರು.
ಪಲೇಮಾರ್ 50 ಸಾವಿರ ಸಹಾಯಧನವನ್ನು ಪ್ರಶಾಂತ್ ತಂದೆ ಆನಂದ ಪೂಜಾರಿ-ತಾಯಿ ಯಶೋಧ ಅವರಿಗೆ ಹಸ್ತಾಂತರಿಸಿದರು. ಬಿಜೆಪಿ ಮುಖಂಡರಾದ ಉಮಾನಾಥ ಕೋಟ್ಯಾನ್, ಸುದರ್ಶನ್ ಎಂ, ಅಜಯ್ ರೈ, ರಂಜಿತ್ ಪೂಜಾರಿ, ಭರತ್ ಕುಮಾರ್ ಶೆಟ್ಟಿ, ಉಮೇಶ್ ಆಚಾರ್ಯ, ಸೂರಜ್ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *