ಬಂಟ್ವಾಳ: ಸಮಾಜದಲ್ಲಿ ಆಡಂಬರದ ಪೂಜೆಗಿಂತಲೂ ನಿಷ್ಕಲ್ಮಶ ಮನಸ್ಸಿನ ಪ್ರಾರ್ಥನೆ ದೇವರಿಗೆ ಹೆಚ್ಚು ಪ್ರಿಯವಾಗುತ್ತದೆ ಎಂದು ಉದ್ಯಮಿ ನಂದಗೋಪಾಲ ಶೆಣೈ ಹೇಳಿದ್ದಾರೆ.
ತಾಲ್ಲೂಕಿನ ಕಲ್ಲಡ್ಕದಲ್ಲಿ ಮಂಗಳವಾರ ನಡೆದ 38ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಧಾರ್ಮಿಕ ಸಭೆಯಲ್ಲಿ ಸ್ಥಳೀಯ ನಾಟಿ ವೈದ್ಯ ಬಾಲಪ್ಪ ಪಂಡಿತ್ ಶಾಂತಿಗುಡ್ಡೆ ಇವರಿಗೆ ರಂಗಕಲಾವಿದ ದಿವಂಗತ ಶಾಂತಾರಾಮ ಕಲ್ಲಡ್ಕ ಇವರ ನೆನಪಿಗಾಗಿ ನೀಡುವ ‘ಶಾಂತಶ್ರೀ ಪ್ರಶಸ್ತಿ’ ಪ್ರದಾನ ಮಾಡಿದ ಬಳಿಕ ಮಾತನಾಡಿದರು.
20btl-Kalldkaಗೋಳ್ತಮಜಲು ಗ್ರಾಮಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮೀ ಎಸ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಶಕ್ತಿಯ ಆರಾಧನೆ ಭಾರತೀಯ ಸಂಸ್ಕøತಿಯ ಒಂದು ಭಾಗವಾಗಿದ್ದು, ಈ ಆಚರಣೆಯಿಂದ ಜೀವನೋತ್ಸಾಹ ಹೆಚ್ಚಿಸುತ್ತದೆ ಎಂದರು. ಇದೇ ವೇಳೆ ನೃತ್ಯ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಗೊಂಡ ಸಜಿತಾ ಇವರನ್ನು ಗೌರವಿಸಲಾಯಿತು.
ಸಮಿತಿ ಗೌರವಾಧ್ಯಕ್ಷ ನರಸಿಂಹ ಕಲ್ಲಡ್ಕ, ಪದಾಧಿಕಾರಿಗಳಾದ ಚಿ.ರಮೇಶ್ ಕಲ್ಲಡ್ಕ, ಸತೀಶ್ ರಾಮನಗರ, ಗಣೇಶ್ ಶೆಟ್ಟಿ, ವಜ್ರನಾಥ ಮಡ್ಲಮಜಲು, ಶಿವರಾಮ ಕೊಳಕೀರು, ಗೋಪಾಲ ಕಲ್ಲಡ್ಕ, ಸವ್ಯರಾಜ್, ವಿಕ್ರಮ ಪ್ರಭು, ದಿನೇಶ್ ರಾಮನಗರ ಮತ್ತಿತರರು ಉಪಸ್ಥಿತರಿದ್ದರು.
ಸಮಿತಿ ಅಧ್ಯಕ್ಷ ನಾಗರಾಜ ರಾಮನಗರ ಸ್ವಾಗತಿಸಿ, ಮಾಜಿ ಅಧ್ಯಕ್ಷ ಯತಿನ್ ಕುಮಾರ್ ವಂದಿಸಿದರು. ಜತೆ ಕೋಶಾಧಿಕಾರಿ ರಾಜೇಶ್ ಕಲ್ಲಡ್ಕ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *