ಕಬಡ್ಡಿಯನ್ನು ವಿಶ್ವ ಮಟ್ಟದಲ್ಲಿ ಬೆಳೆಸಬೇಕು: ಡಿ.ಹೆಚ್ ಶಂಕರಮೂರ್ತಿ
ಮುಂಬಯಿ: ಗ್ರಾಮೀಣ ಪ್ರದೇಶದ ಕ್ರೀಡೆಗೆ ಭಾರತದಲ್ಲೇ ಸ್ಥಾನಮಾನ ಸಿಗದ ಕಾಲವೊಂದಿತ್ತು ಆದರೆ ಅದು ಮರೆಯಾಗಿ ಗ್ರಾಮೀಣ ಕ್ರೀಡೆಗೆ ಪ್ರೋತ್ಸಾಹದ ಸಿಗುವ ಕನಸು ನನಸಾಗುತ್ತಿದೆ. ಇಂತಹ ಪ್ರಯತ್ನ ಮುನ್ನಡೆಯಬೇಕು. ಒಲಿಂಪಿನ್‍ನಲ್ಲಿ ಕಬಡ್ಡಿ ಮಿಂಚಲು ಇಂತಹ ಏಕದಿನದ ವಾರ್ಷಿಕ ಕಬಡ್ಡಿ ಪಂದ್ಯಾಟ ಸ್ಪರ್ಧೆಗಳೇ ಪೂರಕವಾಗಿವೆ. ಕಬಡ್ಡಿಗೆ ಸರಕಾರಗಳ ಪ್ರೋತ್ಸಾಹದ ಬಡ್ಡಿ ಸಿಗಬೇಕು. ಅವಾಗಲೇ ನಮ್ಮ ಕಬಡ್ಡಿ ವಿಶ್ವ ಮಟ್ಟದಲ್ಲಿ ಬೆಳೆಯಲು ಸಾಧ್ಯ ಎಂದು ಕರ್ನಾಟಕ ಸರಕಾರದ ವಿಧಾನ ಪರಿಷತ್ತ್‍ನ ಸಭಾಪತಿ ಡಿ.ಹೆಚ್ ಶಂಕರಮೂರ್ತಿ ಅಭಿಪ್ರಾಯ ಪಟ್ಟರು.

ಇಂದಿಲ್ಲಿ ಭಾನುವಾರ ಮುಲುಂಡ್ ಪೂರ್ವದ ಮುಲುಂಡ್ ಜಿಮ್ಖಾನಾದಲ್ಲಿ ಉಪನಗರದ ಯುವ ಸಂಘಟನೆ ಮುಲುಂಡ್ ಫ್ರೆಂಡ್ಸ್ ಸಂಸ್ಥೆ ಸೌಹಾರ್ದತೆಗಾಗಿ ಆಯೋಜಿಸಿದ್ದ ಏಕದಿನದ ವಾರ್ಷಿಕ ಕಬಡ್ಡಿ `ಪಂದ್ಯಾಟ-2015’ರ ಮುಕ್ತಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿಜೇತ ತಂಡಗಳಿಗೆ ಪಾರಿತೋಷಕಗಳನ್ನು ಪ್ರದಾನಿಸಿ ಶಂಕರಮೂರ್ತಿ ಮಾತನಾಡಿದರು.
ಪಂದ್ಯಾಟದ ಸಮಾಪನಾ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿsಯಾಗಿ ಕರ್ನಾಟಕ ಸರಕಾರದ ವಿಧಾನ ಪರಿಷತ್ತ್‍ನ ಮುಖ್ಯ ಸಚೇತಕ ಆರ್.ವಿ ವೆಂಕಟೇಶ್ ಮತ್ತು ಗೌರವ ಅತಿಥಿಗಳಾಗಿ ಸ್ಥಾನೀಯ ಶಾಸಕ ಸರ್ದಾರ್ ತಾರಾ ಸಿಂಗ್, ಕನ್ನಡ ಸಾಹಿತ್ಯ ಪರಿಷತ್‍ನ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಎಪಿಸಿಸಿ ಪರಿಸರ ವಿಭಾಗೀಯ ಅಧ್ಯಕ್ಷ ಅಶೋಕ್‍ರಾವ್ ಮೋರೆ, ಎಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಜನ್ ಭೋಸ್ಲೆ, ಕಾಂಗ್ರೆಸ್ ನೇತಾರ ಜಯಪ್ರಕಾಶ್ ಶೆಟ್ಟಿ, ಸಮಾಜ ಸೇವಕರುಗಳಾದ ಶಿವ ಮೂಡಿಗೆರೆ, ಕಳತ್ತೂರು ವಿಶ್ವನಾಥ ಶೆಟ್ಟಿ, ನಿಲೇಶ್ ಬಿ.ಪೂಜಾರಿ ಪಲಿಮಾರು, ಕ್ರೀಡಾಪಟು ಜಿತೇಶ್ ಶಿರ್ವಾಡ್ಕರ್, ಪತ್ರಕರ್ತರಾದ ಅಫುಲ್ ಇರಾ, ಸುಪ್ರೀತ್ ಶೆಟ್ಟಿ ಮಂಗಳೂರು ಉಪಸ್ಥಿತರಿದ್ದರು.
ಕಬಡ್ಡಿ ಪಂದ್ಯಾಟವೆಂಬ ಕ್ರೀಡಾಚಕ್ರವ್ಯೂಹದೊಳಗೆ ಸರ್ವ ಸಂಪನ್ನ ಚಿಂತಕರನ್ನು ಒಗ್ಗೂಡಿಸುವ ಸಾಧನೆ ಅಭಿನಂದನೀಯ. ಸೌಹಾರ್ದಯುತ ಬದುಕಿಗೆ ಇದು ಪೂರಕವಾಗಿದೆ. ಈ ಮೂಲಕ ಮುಂಬಯಿ ಮಹಾನಗರ ಸಹಬಾಳ್ವೆಗೆ ಪ್ರೇರಕ ಮತ್ತು ಪ್ರೇರಣಾಶಕ್ತಿಯಾಗಿದೆ ಎಂದು ಪ್ರದೀಪ್ ಕುಮಾರ್ ಕಲ್ಕೂರ ತಿಳಿಸಿದರು.
ಕೋಚ್ ರವಿ ಶೆಟ್ಟಿ ಮಾತನಾಡಿ ಇದು ಅಂತರ್‍ರಾಜ್ಯ ಕ್ರೀಡಾಪಟುಗಳ ಬೆಸುಗೆಯ ಪಂದ್ಯಾಟವಾಗಿದೆ. ಇಲ್ಲಿ ಸ್ಪರ್ಧೆಕ್ಕಿಂತ ಸಾಮರಸ್ಯತ್ವವೇ ಎದ್ದು ಕಾಣುತ್ತಿರುವುದು ಸ್ತುತ್ಯರ್ಹ ಎಂದರು.
ವಿಶ್ವಮಾನ್ಯತಾ ಕ್ರೀಡಾತಾರೆಯರ ಸೇರುವಿಕೆಯಿಂದ ಈ ಪಂದ್ಯಾಟ ಜಗತ್ಪ್ರಸಿದ್ಧವಾಗಿದೆ. ಕಬಡ್ಡಿ ಎಂದರೆ ಮುನ್ನುಗ್ಗುವ, ಸಾಮರ್ಥ್ಯ ಪ್ರದರ್ಶನದ ಗ್ರಾಮೀಣ ಕ್ರೀಡೆಯಾಗಿದೆ. ಇದನ್ನು ಉಳಿಸಿ ಬೆಳೆಸುವಲ್ಲಿ ನಾವೆಲ್ಲರೂ ಶ್ರಮಿಸಬೇಕಾಗಿದೆ ಎಂದು ದೇವಿಪ್ರಸಾದ್ ಶೆಟ್ಟಿ ಕರೆಯನ್ನೀಡಿದರು.
ಆರ್.ವಿ ವೆಂಕಟೇಶ್ ಮಾತನಾಡಿ ಕಬಡ್ಡಿ ನಶಿಸಿ ಹೋಗುವ ದುಃಖ ಇದೀಗ ದೂರವಾಗುತ್ತಿದ್ದು, ಪ್ರೊ ಕಬಡ್ಡಿ ಮುಖೇನ ಪುರಾತನ ಕಬಡ್ಡಿ ಬಲವರ್ಧನೆ ಗೊಂಡಿದೆ. ಆ ಮೂಲಕ ಮರುಜೀವವನ್ನೂ ಪಡೆದಿದೆ. ಇದು ಇನ್ನೂ ಹೆಚ್ಚಿನ ಸ್ಪರ್ಧೆಯಾಗಿ ಪರಿಣಮಿಸಿ ಕ್ರಿಕೇಟ್ ಮಟ್ಟಕ್ಕೆ ಬೆಳೆಯಲಿ ಎಂದು ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಪ್ರೊ ಕಬಡ್ಡಿ ಲೀಗ್ ಟೂರ್ನಿ ಪಂದ್ಯಾಟದಲ್ಲಿ ಚಾಂಪಿಯಾನ್ ವಿಜೇತ ಯು ಮುಂಬಯಿ ತಂಡದ ಕನ್ನಡಿಗ ಕೋಚ್ ರವಿ ಶೆಟ್ಟಿ, ಶಭೀರ್ ಬಾಬು, ರಿಶಾಂಕ್ ದೇವಾಡಿಗ, ಜೀವ ಕುಮಾರ್, ವಿಶಾಲ್ ಪ್ರಭಾಕರ್ ಮಾಣೆ ಮತ್ತು ಕಾಶೀನಾಥ್ ಅಢೆ ಅವರನ್ನು ಅತಿಥಿsವರ್ಯರನ್ನೊಳಗೊಂಡು ಸಭಾಪತಿ ಶಂಕರಮೂರ್ತಿ ಸನ್ಮಾನಿಸಿ ಅಭಿನಂದಿಸಿದರು.
ವಿವಿಧ ವಿಭಾಗಗಳಲ್ಲಿ ಜಯಶೀಲ ಕ್ರೀಡಾಪಟುಗಳನ್ನು ಗೌರವವಿಸಿ ಅಭಿನಂದಿಸಿದರು. ಹಾಗೂ ಅತಿಥಿಗಳು ಸಂದರ್ಭೋಚಿತವಾಗಿ ಮಾತನಾಡಿ ಕರ್ಮಭೂಮಿಯಲ್ಲೂ ಸಾಂಘಿಕತೆ ಸಾರುವ ಸಂಘಟಕರ ಕ್ರೀಡಾ ಪ್ರೋತ್ಸಾಹ, ಸೌಹಾರ್ದತಾ ಪ್ರೇರಣೆಯನ್ನು ಪ್ರಶಂಸಿಸಿ ಶುಭಕೋರಿದರು.
ಇದೇ ಸಂದರ್ಭದಲ್ಲಿ ಅತಿಥಿವರ್ಯರು ಬೆಳಪು ಗ್ರಾಮ ಪಂಚಾಯತ್‍ನ ಅಧ್ಯಕ್ಷ ಡಾ| ದೇವಿಪ್ರಸಾದ್ ಶೆಟ್ಟಿ ಅವರಿಗೆ `ಮಹಾರಾಷ್ಟ್ರ ಭೂಷಣ’ ಬಿರುದು ಪ್ರದಾನಿಸಿ ಮತ್ತು ಪುಣೆಯ ಉದ್ಯಮಿ ಉಮೇಶ್ ಶೆಟ್ಟಿ ಅವರಿಗೆ `ಸಮಾಜ ರತ್ನ’ ಬಿರುದು ಪ್ರದಾನಿಸಿ ಗೌರವಿಸಲಾಯಿತು.
ಸಂಸ್ಥೆಯು ಸುರೇಶ್ ಶೆಟ್ಟಿ ಯೆಯ್ಯಾಡಿ ಮುಂದಾಳುತ್ವದಲ್ಲಿ ಆಯೋಜಿಸಲಾಗಿದ್ದ ಏಕದಿನದ ಕಬ್ಬಡಿ ಪಂದ್ಯಾಟವನ್ನು ಬೆಳಿಗ್ಗೆ ಯಕ್ಷಮಾನಸ ಸಂಸ್ಥೆಯ ಅಧ್ಯಕ್ಷ ಶೇಖರ್ ಆರ್.ಶೆಟ್ಟಿ ಕಲ್ಪವೃಕ್ಷ ಹೊಡೆದು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿüಯಾಗಿ ಹಾಗೂ ಗೌರವ ಅತಿಥಿüಗಳಾಗಿ ಭಾರತ್ ಬ್ಯಾಂಕ್‍ನ ನಿರ್ದೇಶಕ ಅಶೋಕ್ ಎಂ.ಕೋಟ್ಯಾನ್, ಕಾಂಗ್ರೇಸ್ ನೇತಾರ ಮಧುಕರ್ ಮ್ಹಾತ್ರೆ, ಉದ್ಯಮಿ ಗುಣಪಾಲ್ ಶೆಟ್ಟಿ, ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ, ರಾಮಣ್ಣ ದೇವಾಡಿಗ ಚೆಂಬೂರು ಉಪಸ್ಥಿತರಿದ್ದು ಸಂಘಟಕರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಭಾಗವಹಿಸಿದ ತಂಡಗಳಿಗೆ ಶುಭಶಂಸನೆಗೈದರು.
ಮುಲುಂಡ್ ಫ್ರೆಂಡ್ಸ್‍ನ ಅಧ್ಯಕ್ಷ ಸುರೇಶ್ ಶೆಟ್ಟಿ ಯೆಯ್ಯಡಿ ಸ್ವಾಗತಿಸಿದರು. ಅಶೋಕ್ ಪಕ್ಕಳ, ದಿನೀಶ್ ಇರಾ ಕಾರ್ಯಕ್ರಮ ನಿರೂಪಿಸಿದರು. ದಿವಾಕರ್ ಶೆಟ್ಟಿ ಮಂಗಳ್ಪಾಡಿ ಬಹುಭಾಷೆಗಳಲ್ಲಿ ನಿಳರ್ಗವಾಗಿ ಕಮೆಂಟ್ರಿಗೈದು ಕ್ರೀಡಾಭಿಮಾನಿಗಳ ಮೆಚ್ಚುಗೆ ಪಾತ್ರರಾದರು. ಚಿತ್ರನಟ ರೂಪೇಶ್ ಶೆಟ್ಟಿ ಅವರು ಮಂಗಳೂರಿನಿಂದ ಆಗಮಿಸಿದ್ದ ಗಂಡು ಕಲೆ ಯಕ್ಷಗಾನ, ತುಳುನಾಡ ಸಂಸ್ಕೃತಿ ಸಾರುವ ಹುಲಿವೇಷಧಾರಿಗಳನ್ನು ಕಬ್ಬಡಿ ಮೈದಾನಕ್ಕೆ ಬರಮಾಡಿಕೊಂಡರು. ಗೌರವ ಕಾರ್ಯದರ್ಶಿ ಸುಂದರ್ ಶೆಟ್ಟಿ ವಾಮದಪದವು ಅಭಾರ ಮನ್ನಿಸಿದರು.
ಈ ಬಾರಿ ಸುಮಾರು ಹದಿನಾರು ತಂಡಗಳು ಭಾಗವಹಿಸಿದ್ದ ಪಂದ್ಯಾಟದಲ್ಲಿ ಅತ್ತ್ಯುತ್ತಮ ಸ್ಪರ್ಧೆ ನೀಡಿದ ಬಂಟ್ಸ್ ಮೀರಾಭಯಂದರ್-ಬಿ ತಂಡ ವಿಜೇತರೆಣಿಸಿ `ಮುಲುಂಡ್ ಫ್ರೆಂಡ್ಸ್ ಕಬಡ್ಡಿ-2015′ ಟ್ರೋಫಿ ಪ್ರಾಪ್ತಿಸಿ ಕೊಂಡಿತು. ಬಂಟ್ಸ್ ಮೀರಾಭಯಂದರ್-ಸಿ ತಂಡ ದ್ವಿತೀಯ ಹಾಗೂ ಆಶೀರ್ವಾದ್ ಮಾಫೆ ತೃತೀಯ ಸ್ಥಾನಗಳನ್ನು ತನ್ನದಾಗಿಸಿ ಕೊಂಡವು.
ಪಂದ್ಯಾಟದ ಪ್ರಥಮ ವಿಜೇತ ತಂಡಕ್ಕೆ ರೂಪಾಯಿ 33,333/- ನಗದು, ದ್ವಿತೀಯ ತಂಡಕ್ಕೆ 22,222/- ನಗದು, ತೃತೀಯ ತಂಡಕ್ಕೆ 11,111/- ನಗದು ಮತ್ತು ಪ್ರಶಸ್ತಿ ಫಲಕ ಪ್ರದಾನಿಸಿ ಗೌರವಿಸಲಾಯಿತು. ಉತ್ತಮ ಶಿಸ್ತುಬದ್ಧ ತಂಡವಾಗಿ ಕಲ್ವಾ ಫ್ರೆಂಡ್ಸ್ ತಂಡ ಆಯ್ಕೆಗೊಂಡಿದ್ದು ಈ ತಂಡಕ್ಕೆ 5,555/- ನಗದು, ಪ್ರಶಸ್ತಿ ಫಲಕ ಪ್ರದಾನಿಸಲಾಯಿತು. ಮಾಫೆ ತಂಡದ ಮನೋಜ್‍ಕುಮಾರ್ ಭಟ್ಕಳ್ ಅವರು ಉತ್ತಮ ಹಿಡಿತಗಾರ, ರಹೀಂ ಉತ್ತಮ ದಾಳಿಗಾರ ಹಾಗೂ ಜೆ.ಪಿ ಬೋಳ ಅವರು ಸವ್ಯಸಾಚಿ (ಆಲ್‍ರೌಂಡರ್) ಕ್ರೀಡಾಪಟು ಆಗಿ ಆಯ್ಕೆಗೊಂಡಿದ್ದು, ಈ ಮೂರೂ ಕ್ರೀಡಾಪಟುಗಳಿಗೆ ತಲಾ ರೂಪಾಯಿ 1,111/- ನಗದು ಹಾಗೂ ಪ್ರಶಸ್ತಿಫಲಕ ಪ್ರದಾನಿಸಿ ಗಣ್ಯರು ಅಭಿನಂದಿಸಿದರು. ಪಂದಾಟ್ಯದ ತೀರ್ಪುಗಾರರಿಗೂ ಸತ್ಕರಿಸಿ ಅಭಿವಂದಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕೋಶಾಧಿಕಾರಿ ವೇಣುಗೋಪಾಲ್ ಶೆಟ್ಟಿ ಇರಾ, ಜತೆ ಕಾರ್ಯದರ್ಶಿ ಯುವರಾಜ್ ಶೆಟ್ಟಿ, ಜತೆ ಕೋಶಾಧಿಕಾರಿ ನವೀನ್ ಆರ್.ಹೆಗ್ಡೆ, ಸಲಹೆದಾರ ಸುಭಾಷ್ ಆಳ್ವ, ಸಂಘಟನಾ ಕಾರ್ಯದರ್ಶಿ ಉದಯ ಶೆಟ್ಟಿ ಕಾಂತವರ ಹಾಗೂ ಸದಸ್ಯರು ಹಾಜರಿದ್ದು ಪಂದ್ಯಾಟದ ಯಶಸ್ಸಿಗೆ ಸಹಕರಿಸಿದರು.



















