ಬಂಟ್ವಾಳ : ಮುಖ್ಯ ಮಂತ್ರಿಗಳ ವಿಶೇಷ ಯೋಜನೆಯಡಿಯಲ್ಲಿ ಪುರಸಭೆಯ ಮೊಡಂಕಾಪು ಪಾ ವುಲ್ ಡಿಸೋಜರ ಮನೆಯ ಎದುರುಗಡೆ 2ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಯ ಶಿಲಾನ್ಯಾಸವನ್ನು ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೆರವೇರಿಸಿದರು.
ಬೂಡಾ ಅಧ್ಯಕ್ಷ ಪಿಯೂಸ್ ಎಲ್. ರೋಡ್ರಿಗಸ್ , ಪುರಸಭಾ ಅಧ್ಯಕ್ಷೆ ವಸಂತಿ ಚಂದಪ್ಪ , ಉಪಾಧ್ಯಕ್ಷೆ ಯಾಸ್ಮಿನ್, ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಅಬ್ಬಾಸ್ ಆಲಿ, ಪುರಸಭಾ ಸದಸ್ಯರಾದ ಮಹಮ್ಮದ್ ನಂದರಬೆಟ್ಟು, ರಾಮಕೃಷ್ಣ ಆಳ್ವ , ಸದಾಶಿವ ಬಂಗೇರಾ, ಪ್ರವೀಣ್ ಬಿ. , ಜಗ ದೀಶ್ ಕುಂದರ್, ಗಂಗಾಧರ ಮಂಡಾಡಿ, ಪ್ರಭಾ ಸಾಲ್ಯಾನ್ , ಮಹಮ್ಮದ್ ಶರೀಫ್ , ಚಂಚಲಾಕ್ಷಿ, ಸಂಜೀವಿನಿ, ಜೆಸಿಂತಾ, ನಾಮ ನಿರ್ದೇಶಿತ ಸದಸ್ಯ ಲೋಲಾಕ್ಷ ಮುಖ್ಯಾಧಿಕಾರಿ ಸುಧಾಕರ ಭಟ್ , ಇಂಜಿನಿಯರ್ ಡೊಮಿನಿಕ್ ಡಿಮೆಲ್ಲೋ ಮತ್ತಿತರರು ಉಪಸ್ಥಿತರಿದ್ದರು.
