ಬಂಟ್ವಾಳ,ಅ.13: ಬೆಂಜನಪದವು ಸ.ಪ.ಪೂ. ಕಾಲೇಜಿನ ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಬಂಟ್ವಾಳ ರೋಟರೀ ಕ್ಲಬ್ ಪ್ರಾಯೋಜಕತ್ವದಲ್ಲಿ ಸಂಸ್ಥೆಯ ಇಂಟರಾಕ್ಟ್ ಕ್ಲಬ್, ಹಾಗು ಇಂಗ್ಲಿಷ್ ಕ್ಲಬ್ಗಳ ಸಹಭಾಗಿತ್ವದಲ್ಲಿ ಸ್ಪೋಕನ್ ಇಂಗ್ಲೀಷ್ ತರಗತಿಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು.1610bteph8

ಕ್ಲಬ್ ಕಾರ್ಯದರ್ಶಿ ರೋ| ರಿತೇಶ್ ಬಾಳಿಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ ವಿದ್ಯಾರ್ಥಿಗಳಲ್ಲಿ ಯಾವುದೇ ಅಳುಕು ಹಿಂಜರಿಕೆ ಇಲ್ಲದೆ ಇಂಗ್ಲಿಷ್ ಭಾಷೆ ಬಳಸುತ್ತಾ ಹೋದಂತೆ ಅದು ನಮ್ಮದಾಗುತ್ತದೆ ಎಂದರು.
ಸಂಪನ್ಮೂಲ ವ್ಯಕ್ತಿ ಶಿವಾನಿ ಬಾಳಿಗ , ಆಂಗ್ಲ ಭಾಷೆ ಇಂಗ್ಲಿಷ್ನಲ್ಲಿ ಭಾಷಾ ಸಂವಹನ ಕುಶಲತೆ ಇಂದಿನ ಅಗತ್ಯ. ಎಲ್ಲಾ ರಂಗಗಳಲ್ಲೂ ಇಂಗ್ಲೀಷ್ ಮಾಧ್ಯಮ ಭಾಷೆಯಾಗಿದೆ. ಎಂದರು. ರೋ| ದಿವ್ಯ ಕರುಣಾಕರ ರೈ ಕಾರ್ಯಗಾರಕ್ಕೆ ಶುಭ ಹಾರೈಸಿದರು.
ಇಂಟರಾಕ್ಟ್ ಸಂಯೋಜಕಿ ಹೇಮಾ ಕೆ. ಸ್ವಾಗತಿಸಿ, ವಂದಿಸಿದರು., ಇಂಗ್ಲಿಷ್ ಕ್ಲಬ್ನ ನಿರ್ದೇಶಕಿ ಮರ್ಲಿನ್ಮೇಬಲ್ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *