ಕೈಕಂಬ: ಪ್ರಜ್ಞಾ ಸಲಹಾಕೇಂದ್ರ ಕಂಕನಾಡಿ ಈ ಸಂಸ್ಥೆಯ ಈಆರ್‍ಡಬ್ಲ್ಯೂಸಿ ಯೋಜನೆಯ ಅಡಿಯಲ್ಲಿ ಕೈಕಂಬ ವಲಯ ವತಿಯಿಂದ ಸ್ವ ಸಹಾಯ ಸಂಘಗಳ ಸಮ್ಮಿಲನ ಕಾರ್ಯಕ್ರಮ ಅಡ್ಡೂರಿನ ನವದುರ್ಗಾ ಯುವಕ ಮಂಡಲದಲ್ಲಿ ಇತ್ತೀಚೆಗೆ ನಡೆಯಿತು.

ಮಹಿಳೆಯರು ಸ್ವಉದ್ಯೋಗ ಮಾಡುವ ಮೂಲಕ ಪ್ರಗತಿಯನ್ನು ಹೊಂದಬೇಕು. ಮತ್ತು ಮಹಿಳೆಯರ ಮೇಲೆ ದಿನನಿತ್ಯ ನಡೆಯುವ ಶೋಷಣೆ , ದೌರ್ಜನ್ಯ ಅದರ ಮುಂಜಾಗ್ರತೆ, ಸುರಕ್ಷತೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಯೋಜನೆಯ ಸಂಯೋಜಕರಾದ ವಿಲಿಯಂ ಸ್ಯಾಮುವೆಲ್ ನೀಡಿದರು. ಮತ್ತು ಪಿನಾಯಿಲ್ ತಯಾರಿಕೆ ವಿಧಾನವನ್ನು ಪ್ರಾತ್ಯಕ್ಷತೆ ಮೂಲಕ ತೋರಿಸಿ ವಿವರಿಸಿದರು. ಕೊನೆಯಲ್ಲಿ ಪ್ರಾಥಮಿಕ ಆರೋಗ್ಯ ಚಿಕಿತ್ಸೆ ಬಗ್ಗೆ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಯೋಜನೆಯ ಮೇಲ್ವಿಚಾರಕಿ ರೇಶ್ಮಾ, ವಲಯ ಸಂಯೋಜಕರಾದ ಸಾತ್ವಿಕ್ ಮತ್ತು ವಲಯ ಕಾರ್ಯಕರ್ತೆ ಪಾಲಾಕ್ಷಿ , ಸೀತುಲಕ್ಷ್ಮೀ ಉಪಸ್ಥಿತರಿದ್ದರು. ಸಂಘದ ಸದಸ್ಯರಾದ ನಳಿನಕ್ಷಿ ಸ್ವಾಗತಿಸಿ, ಸುಮಿತ್ರ ವಂದಿಸಿದರು.
