ಬಂಟ್ವಾಳ: ಪ್ರಗತಿಪರ ಕೃಷಿಕ ರಾಜೇಶ್ನಾಯ್ಕ್ ಉಳೀಪಾಡಿಗುತ್ತು ಅವರ ಕೃಷಿಕ್ರಾಂತಿಯ ಪ್ರೇರಣೆಯಂತೆ ಮುತ್ತೂರು ಮಾರ್ಗದಂಗಡಿ ಅಮರ ಜ್ಯೋತಿ ಫ್ರೆಂಡ್ಸ್ ಸರ್ಕಲ್ ಇದರ ಆಶ್ರಯದಲ್ಲಿ ಫಲ್ಗುಣಿ ನದಿ ತೀರದ ಮುತ್ತೂರು ದೋಣಿ ಕರಿಯದ ಬಾಕಿಮಾರು ಗದ್ದೆಯಲ್ಲಿ ಎರಡನೇ ವರ್ಷದ ಕೆಸರ್ಡೊಂಜಿ ದಿನ ಕ್ರೀಡಾ ಕೂಟ ಭಾನುವಾರ ನಡೆಯಿತು.

 

BTW_0CT11_2 - Copy

6 (1)

1 (2)

4 (2)

3 (3)

5 (1)

ಪ್ರಗತಿಪರ ಕೃಷಿಕ ರಾಜೇಶ್ನಾಯ್ಕ್ ಉಳಿಪಾಡಿಗುತ್ತು ಬೆಳಿಗ್ಗೆ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಕೃಷಿಯತ್ತ ಯುವ ಸಮುದಾಯವನ್ನು ಆಕರ್ಷಿಸಿಸಲು ಕೆಸರುಗದ್ದೆ ಕ್ರೀಡೆಗಳನ್ನು ನಡೆಸುವ ಅನಿವಾರ್ಯತೆ ಇದೆ. ಆದರೆ ಅದಕ್ಕಿಂತಲೂ ಹೆಚ್ಚಾಗಿ ಬರಡಾಗುತ್ತಿರುವ ಬತ್ತದ ಗದ್ದೆಗಳನ್ನು ಉಳಿಸುವ, ಅದರಲ್ಲಿ ಕೃಷಿ ಬೆಳೆಸುವ ಮಹತ್ತರ ಜವಬ್ದಾರಿ ಯುವ ಸಮೂಹದ ಮೇಲಿದೆ ಎಂದರು. ಕ್ರೀಡಾ ಕೂಟಕ್ಕೆ ನೀಡುವ ಪ್ರಾಮುಖ್ಯತೆಯನ್ನು ಕೃಷಿಯ್ತತವೂ ಕೇಂದ್ರೀಕರಿಸಿದರೆ ದ.ಕ.ಜಿಲ್ಲೆಯಲ್ಲಿ ಹಡಿಲು (ಪಡೀಲ್) ಬಿದ್ದ ಗದ್ದೆಗಳು ಮತ್ತೆ ಸಂಪದ್ಭರಿತವಾಗಿ ನಳನಳಿಸಲಿದೆ ಎಂದು ತಿಳಿಸಿದರು.
ಮುತ್ತೂರು ಗ್ರಾಮಪಂಚಾಯಿತಿ ಅಧ್ಯಕ್ಷೆ ನಾಗಮ್ಮ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೃಷ್ಣ ರಾಜ ಮಾರ್ಲ ಮುತ್ತೂರು, ಉದ್ಯಮಿ ಗಿರೀಶ್ ಆಳ್ವ, ಜಗದೀಶ ಪಾಕಜೆ, ಪ್ರವೀಣ್ ಆಳ್ವ, ನೌಶದ್, ಪತ್ರಕರ್ತ ಸಂದೀಪ್ ಸಾಲ್ಯಾನ್, ಹರಿಯಪ್ಪ ಮುತ್ತೂರು, ಪಂಚಾಯಿತಿ ಸದಸ್ಯರಾದ ಜೆರಾಲ್ಡ್ ಪಿಂಟೋ, ತಾರಾನಾಥ ಕುಲಾಲ್, ದೈಹಿಕ ಶಿಕ್ಷಣ ಶಿಕ್ಷಕ ದರ್ಶನ್ ನಾಯ್ಕ್ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಸುಶಾಂತ್ ಕೋಟ್ಯಾನ್ ವೇದಿಕೆಯಲ್ಲಿದ್ದರು.
ಸೂರಜ್ ಸ್ವಾಗತಿಸಿ, ನವೀನ್ ಆಳ್ವ ವಂದಿಸಿದರು. ಅವಿನಾಶ್ ಕಡೇಶ್ವಾಲ್ಯ ಕಾರ್ಯಕ್ರಮ ನಿರೂಪಿಸಿದರು. ಪವನ್ ಕುಮಾರ್ ಶೆಟ್ಟಿ ಸಹಕರಿಸಿದರು.
ನಿಧಿಶೋಧ, ಕಬಡ್ಡಿ, ವಾಲಿಬಾಲ್, ಅಡಿಕೆ ಹಾಳೆ ಓಟ ಮೊದಲಾದ ಕ್ರೀಡಾಕೂಟಗಳು ಕೆಸರುಗದ್ದೆಯಲ್ಲಿ ನಡೆದವು. ಕ್ರೀಡಾಕೂಟದ ಬಳಿಕ ಗದ್ದೆಯಲ್ಲಿ ಬತ್ತದ ಬೀಜ ಬಿತ್ತನೆ ನಡೆಯಲಿದೆ.

By Suddi9

Leave a Reply

Your email address will not be published. Required fields are marked *