ಮೂಡುಬಿದಿರೆ: ಪೇಟೆಯ ಸಮಾಜಮಂದಿರ ಗೇಟ್ ಬಳಿಯಿರುವ ಹೂವಿನ ಅಂಗಡಿ ವ್ಯಾಪಾರಿಯೊಬ್ಬರ ಮೇಲೆ ಶುಕ್ರವಾರ ಬೆಳಿಗ್ಗೆ ಅಪರಿಚಿತ ತಂಡದಿಂದ ಕೊಲೆ ನಡೆದಿದೆ.
ಹೂವಿನ ವ್ಯಾಪಾರಿ, ಹೊಸಬೆಟ್ಟು ಗ್ರಾಮ ನಿವಾಸಿ ಪ್ರಶಾಂತ್(29) ಎಂಬವರೇ ಘಟನೆಯಿಂದ ಮೃತರಾದವರು. ಶುಕ್ರವಾರ ಬೆಳಿಗ್ಗೆ ಸುಮಾರು 7 ಗಂಟೆಯ ಹೊತ್ತಿಗೆ ಪ್ರಶಾಂತ್ ಎಂದಿನಂತೆ ಹೂವುಗಳನ್ನು ತಮ್ಮ ಅಂಗಡಿಗೆ ತರುವಾಗ, ಪಕ್ಕದಲ್ಲಿರುವ ಆಟೋ ಪಾರ್ಕ್ ಹಿಂದುಗಡೆ ಅಪರಿಚಿತ ತಂಡ ಮಾರಕಾಯುಧಗಳಿಂದ ಹಲ್ಲೆ ನಡೆಸಿದೆ. ಗಂಭೀರವಾಗಿ ಗಾಯಗೊಂಡ ಪ್ರಶಾಂತ್ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆಗೆ ಸ್ಪಂದಿಸದೆ ಮೃತರಾಗಿದ್ದಾರೆ.
ಪ್ರಶಾಂತ್ ಹಿಂದೂ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು.









