ಕೈಕಂಬ: ಶ್ರೀ ರಾಜರಾಜೇಶ್ವರೀ ದೇವಸ್ಥಾನ ಪೊಳಲಿ ನವರಾತ್ರಿ ಮಹೋತ್ಸವವು ಅ.13ರಿಂದ 21ರವರೆಗೆ ಶ್ರೀ ದೇವಿ ಸನ್ನಿಧಿಯಲ್ಲಿ ನಡೆಯಲಿದೆ.
13.10.2015 ಮಂಗಳವಾರ ಸಂಜೆ 6ರಿಂದ ಶರತ್ ಹಳೆಯಂಗಡಿ ಮತ್ತು ಬಳಗದವರಿಂದ ಗಿಟಾರ್ ವಾದನ.
14-10-2015 ಬುಧವಾರ ಸಂಜೆ 5ರಿಂದ -ಯಕ್ಷಗಾನ ತಾಳಮದ್ದಳೆ “ಬಹ್ಮಶ್ರೀ ವಿಶ್ವಾಮಿತ್ರ”.
15-10-2015 ಗುರುವಾರ ಸಂಜೆ 5ರಂದ – ಶಿವರಂಜನಿ ಮ್ಯೂಸಿಕಲ್ಸ್ ಪೊಳಲಿ ಇವರಿಂದ “ಗಾನ ನೃತ್ಯ ಸಂಭ್ರಮ.
16-10-2015 ಶುಕ್ರವಾರ ಸಂಜೆ 5ರಿಂದ -ಸುಶೀಲ್ ರಾವ್ ಮತ್ತು ಬಳಗ ಮಂಗಳೂರು ಇವರಿಂದ ಸುಗಮ, ಭಕ್ತಿ ಸಂಗೀತ ಕಾರ್ಯಕ್ರಮ, ರಾತ್ರಿ 8.30ರಿಂದ ರಾಜಶ್ರೀ ಮೋಕೆದ ಕಲಾವಿದೆರ್ ಪೊಳಲಿ ಇವರ ನೇತೃತ್ವದಲ್ಲಿ ನಮ್ಮ ಕಲಾವಿದೆರ್ ಬೆದ್ರ ಇವರಿಂದ ಬೈಲ ಕುರಲ್ ತುಳು ಸಾಮಾಜಿಕ ಹಾಸ್ಯಮಯ ನಾಟಕ ನಡೆಯಲಿದೆ.
17-10-2015 ಶನಿವಾರ ಸಂಜೆ 6ರಿಂದ -“ಪೊಳಲಿ ಯಕ್ಷೋತ್ಸವ” ಯಕ್ಷಕಲಾ ಪೊಳಲಿ ಇದರ 20ನೇ ವಾರ್ಷಿಕೋತ್ಸವದ ಅಂಗವಾಗಿ ಯಕ್ಷ-ಗಾನ-ವೈಭವ, ಸನ್ಮಾನ, ಬಯಲಾಟ, ರಾತ್ರಿ 9.30ರಿಂದ ಜಿಲ್ಲೆಯ ಪ್ರಸಿದ್ಧ ಕಲಾವಿದರ ಯಕ್ಷಗಾನ ಬಯಲಾಟ ರಕ್ಮಾಂಗದ ಚರಿತ್ರೆ -ಮಯಾ ತಿಲೋತ್ತಮೆ.
18-10-2015 ಆದಿತ್ಯವಾರ ಸಂಜೆ 6ರಿಂದ- ಗಾನ ನೃತ್ಯ ಆಕಾಡೆಮಿ ಮಂಗಳೂರು ಇದರ ನಿರ್ದೇಶಕಿ ವಿದುಶಿ ವಿದ್ಯಾಶ್ರೀ ರಾಧಕೃಷ್ಣ ಇವರ ಶಿಷ್ಯೆ ತ್ವಿಷಾ ಶೆಟ್ಟಿ ಇವರಿಂದ ಭರತನಾಟ್ಯ ಕಾರ್ಯಕ್ರಮ. ರಾತ್ರಿ 8ರಿಂದ ರಾಜೇಶ್ವರೀ ಮಹಿಳಾ ಮಂಡಳಿ ಪೊಳಲಿ ಇವರಿಂದ ಕೆ.ಅಸೋಕ್ ಕುಮಾರ್ ಪೂಂಜಾಲಕಟ್ಟೆ ಮಲಾಡಿ ವಿರಚಿತ “ದಾರೆದ ಸೀರೆ” ತುಳು ಸಾಂಸಾರಿಕ ನಾಟಕ.
19-10-2015 ಸೋಮವಾರ ಸಂಜೆ 6ರಿಂದ- ಕಲಾಸ್ಪರ್ಶ ಡ್ಯಾನ್ಸ್ ಅಕಾಡೆಮಿ ಗಂಜಿಮಠ-ಕೊಂಪದವು ಇವರಿಂದ “ನೃತ್ಯ ವೈಭವ”.
20-10-2015 ಮಂಗಳವಾರ ಸಂಜೆ 6ರಿಂದ-ನೃತ್ಯಲೋಕ ಬೆಂಗಳೂರು ಮತ್ತು ಝೇಂಕಾರ ಗಾನ ಕಲಾ ಕೇಂದ್ರ ಮಂಗಳೂರು ಇವರಿಂದ “ಶಾಸ್ತ್ರೀಯ ನೃತ್ಯ ಮತ್ತು ಸಂಗೀತ ವೈವಿಧ್ಯ”.
21-10-2015 ಬುಧವಾರ-ಮಹಾನವಮಿ ಪ್ರಯುಕ್ತ ಚಂಡಿಕಾಹೋಮ, ಸಂಜೆ5ರಿಂದ-ನವರಾತ್ರಿ ವೇಷಗಳ ವೈಭವ.
ಮುಂತಾದ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಲಿದೆ.
