ಬಂಟ್ವಾಳ: ಕಲ್ಲಡ್ಕದ ಅಮ್ಟೂರು ನಿವಾಸಿ, ನಿವೃತ್ತ ಪ್ರಿನ್ಸಿಪಾಲ್ ಪ್ರೊ. ಎಂ.ಕೃಷ್ಣಪ್ಪಯ್ಯ [74] ಅ. 6ರಂದು ಹೃದಯಾಘಾತದಿಂದ ನಿಧನಹೊಂದಿದರು. ಅವರು ಮೂವರು ಸಹೋದರರು ಹಾಗೂ ನಾಲ್ವರು ಸಹೋದರಿಯರು ಮತ್ತು ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.
DSC_1668
ಅವಿವಾಹಿತರಾಗಿದ್ದ ಅವರು ನಿವೃತ್ತಿಯ ಬಳಿಕ ಅಮ್ಟೂರಿನ ಸ್ವಗೃಹದಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದರು. 1965ರಲ್ಲಿ ಶೃಂಗೇರಿಯ ಜೆಸಿಬಿಎಂ ಕಾಲೇಜಿನಲ್ಲಿ ಭೌತಶಾಸ್ತ್ರ ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು, ಮುಂದೆ ಅದೇ ಕಾಲೇಜಿನಲ್ಲಿ ಪ್ರಿನ್ಸಿಪಾಲರಾಗಿ 30ವರ್ಷಗಳಿಗೂ ಅಧಿಕ ಕಾಲ ಸೇವೆ ಸಲ್ಲಿಸಿದ ಬಳಿಕ 1996ರಲ್ಲಿ ನಿವೃತ್ತರಾದರು. ಕಾಲೇಜಿನಲ್ಲಿ ಸೇವೆಯಲ್ಲಿದ್ದ ಅವಧಿಯಲ್ಲಿ ಶಿಸ್ತುಬದ್ಧ, ಕರ್ತವ್ಯ ನಿಷ್ಟೆಗಳಿಂದ ಶೃಂಗೇರಿ ಜಗದ್ಗುರುಗಳು ಹಾಗೂ ಆಡಳಿತ ಮಂಡಳಿಯವರ ಗಮನಸೆಳೆದಿದ್ದರು. ಕಾಲೇಜಿನ ಅಪಾರ ವಿದ್ಯಾರ್ಥಿ ಸಮುದಾಯ ಅಚ್ಚುಮೆಚ್ಚಿನ ಪ್ರೊಫೆಸರ್ ಆಗಿದ್ದರು. ಅಮ್ಟೂರು ಗ್ರಾಮದ ಕೆದ್ಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ, ಬಂಟ್ವಾಳದ ಶ್ರೀ ಎಸ್ವಿಎಸ್ ಹೈಸ್ಕೂಲಿನಲ್ಲಿ ಮಾಧ್ಯಮಿಕ, ಮಂಗಳೂರಿನ ಸಂತ ಎಲೋಶಿಯಸ್ ಕಾಲೇಜಿನಲ್ಲಿ ಬಿಎಸ್ಸಿ, ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಭೌತಶಾಸ್ತ್ರದಲ್ಲಿ ಎಂಎಸ್ಸಿ ಸ್ನಾತಕೋತ್ತರ ಪದವಿ ಪೂರೈಸಿದ್ದರು.

By Suddi9

Leave a Reply

Your email address will not be published. Required fields are marked *