ಕಲಡ್ಕ: ಕಲ್ಲಡ್ಕ ಪೇಟೆ ಪರಿಸರದಲ್ಲಿ ಅಕ್ಟೋಬರ್ 2 ರಂದು ಗಾಂಧಿ ಜಯಂತಿ ಮತ್ತು ಲಾಲ್‍ಬಹದ್ದುರ್ ಶಾಸ್ತ್ರಿಗಳ ಜನ್ಮ ದಿನದ ಅಂಗವಾಗಿ ಸ್ವಚ್ಛತಾ ಕಾರ್ಯವನ್ನು ನೆರವೇರಿಸಲಾಯಿತು.
ಶ್ರೀರಾಮ ಪ್ರೌಢಶಾಲೆಯ 872 ವಿದ್ಯಾರ್ಥಿಗಳು ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ, ವಿಟ್ಲ ರಸ್ತೆ ಸೇರಿದಂತೆ ಬೇರೆ ಬೇರೆ ತಂಡಗಳಲ್ಲಿ ಸ್ವಚ್ಛತೆ ,ಮಾಡಿದರು . ಪ್ಲಾಸ್ಟಿಕ್ ವಸ್ತುಗಳು ಸೇರಿದಂತೆ ವಿವಿಧ ಕಸಕಡ್ಡಿಗಳನ್ನು ಸಂಗ್ರಹಿಸಿ ಲಾರಿಯಲ್ಲಿ ತುಂಬಿಸಿದರು. ಶ್ರೀರಾಮ ವಿದ್ಯಾಕೇಂದ್ರದ ಪರಿಸರದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು. ಅಂಗಡಿಗಳಿಗೆ ಸಾರ್ವಜನಿಕರಿಗೆ ಹಸ್ತಲಿಖಿತ ಕರಪತ್ರಗಳನ್ನು ನೀಡಿ ಸ್ವಚ್ಛತೆಯನ್ನು ಕಾಪಾಡುವಂತೆ ಹಾಗೂ ಪ್ಲಾಸ್ಟಿಕ್ ಬಳಸದಂತೆ ವಿನಂತಿಸಿದರು. ಕಲ್ಲಡ್ಕ ಗ್ರಾಮ ಸೇವಾ ಸಮಿತಿಯ ಮೂಲಕ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಲಾಯಿತು.
ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಪರಿಸರ ರಕ್ಷಣೆಯ ಜಾಗೃತಿಯನ್ನು ಮೂಡಿಸುವ ಮೂಲಕ ಸ್ವಚ್ಛಭಾರತ್ ಶ್ರೇಷ್ಠಭಾರತ್ ಎಂಬ ಘೋಷಣೆ ಹಾಕಿ ಪ್ರಧಾನಮಂತ್ರಿಯವರ ಕರೆಗೆ ಸ್ಪಂದಿಸಿದರು.
