ಬಜ್ಪೆ: ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡುವ ಹೇಳಿಕೆ ನೀಡಿದ ಕೆ.ಎಸ್. ಭಗವಾನ್ ವಿರುದ್ಧ ಪೆರ್ಮುದೆ ನಿವಾಸಿ ಸುಶಾಂತ್ ಸುವರ್ಣ ಅವರು ಬಜ್ಪೆ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಕೆ.ಎಸ್. ಭಗವಾನ್ ಅವರು ಹಿಂದೂ ಧರ್ಮೀಯರ ಭಾವನೆಗಳಿಗೆ ದಕ್ಕೆ ಉಂಟು ಮಾಡುವ ಉದ್ದೇಶದಿಂದ ರಾಮ ತನ್ನ ತಂದೆಗೆ ಹುಟ್ಟಿಲ್ಲ. ಕೃಷ್ಣ ಮತ್ತು ರಾಮ ದೇವರ ದೇವಸ್ಥಾನಗಳಿಗೆ ಯಾರೂ ಹೋಗಬಾರದು, ಮಹಾಭಾರತದಿಂದ ಅತ್ಯಾಚಾರಗಳು ಹೆಚ್ಚಾಗುತ್ತಿದೆ. ದೇವಾಲಯಗಳು ಹಣ ಮಾಡುವ ವ್ಯವಸ್ಥೆ, ಭಗವದ್ಗೀತೆ ಓದುವವರು ಭಯೋತ್ಪಾದಕರಾಗುತ್ತಾರೆ. ಉಪನಿಷತ್ ಕೆಟ್ಟ ಗ್ರಂಥ ಎಂಬ ಪ್ರಚೋದನಕಾರಿ ಮಾತುಗಳನ್ನು ಹೇಳಿದ್ದು, ಇದು ಹಿಂದೂ ಧರ್ಮೀಯರಿಗೆ ತುಂಬ ನೋವಾಗಿದೆ ಹೇಳಿ ಹಿಂದೂ ಧಾರ್ಮಿಕ ಭಾವನೆಯನ್ನು ಅವಹೇಳನ ಮಾಡಿದ್ದಾರೆ.
ನಾನು ಹಿಂದೂ ಧರ್ಮೀಯನಾಗಿದ್ದು, ಶ್ರೀರಾಮ, ಶ್ರೀ ಕೃಷ್ಣನನ್ನು ಭಗವಂತನೆಂದು ಪೂಜಿಸುತ್ತೇನೆ. ಅದೇ ರೀತಿಯಲ್ಲಿ ರಾಮಾಯಣ ಮತ್ತು ಭಗವದ್ಗೀತೆಯನ್ನು ನಮ್ಮ ಹಿಂದೂಗಳು ಪವಿತ್ರ ಗ್ರಂಥವೆಂದು ಅನಾದಿ ಕಾಲದಿಂದ ನಂಬಿದ್ದು, ಭಾರತ ಸಂವಿಧಾನವು ಧಾರ್ಮಿಕ ಹಕ್ಕನ್ನು ಹೊಂದಿದೆ. ಹಿಂದೂ ಧಾರ್ಮಿಕ ಭಾವನೆಯನ್ನು ಅವಹೇಳನಕಾರಿಯಾಗಿ ಹೇಳಿದ ಪ್ರೊ. ಭಗವಾನ್ ವಿರುದ್ಧ ತಕ್ಷಣವೇ ಕಾನೂನು ಕ್ರಮ ಜರುಗಿಸಬೇಕೆಂದು ಸುಶಾಂತ್ ಸುವರ್ಣ ದೂರಿನಲ್ಲಿ ವಿವರಿಸಿದ್ದಾರೆ
