ಭಾರತ್ ಬ್ಯಾಂಕ್ ಸರ್ವರ ಸಮೃದ್ಧಿಗೆ ಪೂರಕವಾಗಿದೆ: ಧರ್ಮಪಾಲ್ ದೇವಾಡಿಗ
ಮುಂಬಯಿ: ಮಹಾರಾಷ್ಟ್ರ ರಾಜ್ಯದ ಥಾಣೆ ಜಿಲ್ಲೆಯ ಕಲ್ಯಾಣ್ ಅಲ್ಲಿನ ಶಿವನೆಲೆಯ ಅಂಬರ್‍ನಾಥೇಶ್ವರ ಶಿವ ದೇವಸ್ಥಾನ ಪ್ರಸಿದ್ಧಿ ಪುಣ್ಯಕ್ಷೇತ್ರವೆಂದೇ ಪ್ರಸಿದ್ಧಿಯ ಅಂಬರ್‍ನಾಥ್ ಪೂರ್ವದಲ್ಲಿ ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ನಿಯಮಿತ ತನ್ನ 73ನೇ ಶಾಖೆಯನ್ನು ಇಂದಿಲ್ಲಿ ಶುಭಾರಂಭ ಗೊಳಿಸಿತು.

ಅಂಬರ್‍ನಾಥ್ ಪೂರ್ವದ ವಾಡಾವ್ಲಿ ಅಲ್ಲಿನ ಬಾಜಿಪ್ರಭು ದೇಶ್‍ಪಾಂಡೆ ಮಾರ್ಗದಲ್ಲಿನ ಗೋದಾವರಿ ಹೈಟ್ಸ್ ಕಟ್ಟಡದಲ್ಲಿ ಇಂದಿಲ್ಲಿ ಶನಿವಾರ ಬೆಳಿಗ್ಗೆ ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ, ಬ್ಯಾಂಕ್‍ನ ಕಾರ್ಯಾಧ್ಯ ಕ್ಷ ಜಯ ಸಿ.ಸುವರ್ಣ ಅವರು ರಿಬ್ಬನ್ ಕತ್ತರಿಸಿ ಬ್ಯಾಂಕ್‍ನ ನೂತನ ಶಾಖೆ ಸೇವಾರ್ಪಣೆಗೊಳಿಸಿದರು.

Bharat Bank Ambarnath East-1

Bharat Bank Ambarnath East-6

Bharat Bank Ambarnath East-12

Bharat Bank Ambarnath East-13

Bharat Bank Ambarnath East-15

Bharat Bank Ambarnath East-16

Bharat Bank Ambarnath East-17

Bharat Bank Ambarnath East-18

Bharat Bank Ambarnath East-19

Bharat Bank Ambarnath East-20

Bharat Bank Ambarnath East-26

Bharat Bank Ambarnath East-28

Bharat Bank Ambarnath East-36

Bharat Bank Ambarnath East-A1

Bharat Bank Ambarnath East-A2
ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಮತ್ತು ಕೈಗಾರಿಕೋದ್ಯಮಿ ಧರ್ಮಪಾಲ್ ಯು.ದೇವಾಡಿಗ ಮತ್ತು ಬಿಲ್ಲವರ ಅಸೋಸಿಯೇಶನ್ ವಿಕ್ರೋಲಿ ಸ್ಥಳಿಯ ಕಛೇರಿಯ ಕಾರ್ಯಧ್ಯಕ್ಷ ರಾಘವ ಕುಂದರ್ ಅವರು ಜ್ಯೋತಿ ಬೆಳಗಿಸಿ ಶಾಖೆಗೆ ವಿಧ್ಯುಕ್ತವಾಗಿ ಚಾಲನೆಯನ್ನಿತ್ತರು. ಶ್ರೀ ದುರ್ಗಾಕಾಳಿ ದೇವಸ್ಥಾನ ಅಂಬರ್‍ನಾಥ್ ಇದರ ಧರ್ಮದರ್ಶಿ ಶ್ರೀ ಬಾಲಗಂಗಾಧರ ಸ್ವಾಮೀಜಿ ಪಾದಾರ್ಪಣೆಗೈದು ರಿಬ್ಬನ್ ಕತ್ತರಿಸಿ ಎಟಿಎಂ ಕೊಠಡಿಯನ್ನು ಉದ್ಘಾಟಿಸಿ ಶುಭನುಡಿಗಳನ್ನಿತ್ತು ಆಶೀರ್ವಚಿಸಿದರು. ಬ್ಯಾಂಕ್‍ನ ಉಪ ಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಜೆ. ಸಾಲ್ಯಾನ್ ಎಟಿಎಂ ಹಾಗೂ ಬ್ಯಾಂಕ್‍ನ ನಿರ್ದೇಶಕ ಜ್ಯೋತಿ ಕೆ.ಸುವರ್ಣ ಲಾಕರ್ ಸೇವೆ ಹಾಗೂ ಬ್ಯಾಂಕ್‍ನ ಎಂಡಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್ ಮೂಲ್ಕಿ ಅವರು ಕಂಪ್ಯೂಟರೀಕೃತ ಸೇವೆಗಳಿಗೆ ಚಾಲನೆಯನ್ನಿತ್ತರು.

ಗೌರವ್ವಾನಿತ ಗಣ್ಯರುಗಳಾಗಿ ಶಾರದಾ ಮಂಜುನಾಥ ಬಿಲ್ಡರ್ಸ್ ಮತ್ತು ಶಿಕ್ಷಣ ಸಂಸ್ಥೆಗಳ ಕಾರ್ಯಾಧ್ಯಕ್ಷ ಆರ್.ಬಿ ಹೆಬ್ಬಳ್ಳಿ, ಕಟ್ಟಡ ಮಾಲೀಕ ಸೂರ್ಯಕಾಂತ್ ಗಾಂಗಲ್ ಮತ್ತು ಹೇಮಲತಾ ಗಾಂಗಲ್ ದಂಪತಿ, ಮಾಜಿ ನಗರಸೇವಕಿ ಸುಮತಿ ಪಾಟೀಲ್, ಸದಾನಂದ ಪೂಜಾರಿ, ರಾಘವ ಕುಂದರ್, ಕೆ.ಎಂ ಮಾಬಿಯಾನ್, ಬ್ಯಾಂಕ್‍ನ ನಿರ್ದೇಶಕರುಗಳಾದ ಸಿ.ಟಿ ಸಾಲ್ಯಾನ್, ನ್ಯಾ| ಎಸ್.ಬಿ ಅವಿೂನ್, ಅಶೋಕ್ ಎಂ.ಕೋಟ್ಯಾನ್, ಆರ್.ಡಿ.ಪೂಜಾರಿ, ಸೂರ್ಯಕಾಂತ್ ಜೆ.ಸುವರ್ಣ, ಗಂಗಾಧರ್ ಜೆ.ಪೂಜಾರಿ, ಮಾಜಿ ನಿರ್ದೇಶಕ ಎನ್.ಎಂ ಸನೀಲ್, ಮತ್ತು ಸ್ಥಳಿಯ ನೂತನ ಗ್ರಾಹಕರು, ನೂರಾರು ಹಿತೈಷಿಗಳು ಉಪಸ್ಥಿತರಿದ್ದು ಶಾಖೆಯ ಶ್ರೇಯೋಭಿವೃದ್ಧಿಗೆ ಶುಭ ಹಾರೈಸಿದರು.

ಧರ್ಮಪಾಲ್ ದೇವಾಡಿಗ ಮಾತನಾಡಿ ಭಾರತ್ ಬ್ಯಾಂಕ್ ಸರ್ವರ ಸಮೃದ್ಧಿಗೆ ಪೂರಕವಾಗಿದ್ದು, ಬಾದ್ರಪದ ಶುಕ್ಲಪಾತದ ಬಲರಾಮ ಜಯಂತಿಯ ಶುಭಾವಸರದಲ್ಲಿ ಭಾರತ್ ಬ್ಯಾಂಕ್ ತನ್ನ 73ನೇ ಶಾಖೆಯನ್ನು ಶಿವನ ನಾಡಿನಲ್ಲಿ ಆರಂಭ ಗೊಳಿಸಿರುವುದು ಶುಭ ಸಂಕೇತವಾಗಿದೆ. ಯಾವಾಗನೇ ಭಾರತ್ ಬ್ಯಾಂಕ್ ಇಲ್ಲಿಗೆ ಬರಬೇಕಿತ್ತು ಆದರೆ ಎಲ್ಲಕ್ಕೂ ಕಾಲಕೂಡಿ ಬರಬೇಕಾಗುತ್ತದೆ. ಕಾಲವಿನಃ ಏನೂ ಆಸಾಧ್ಯ. ಈ ಶಾಖೆಯು ಸುವಿಸ್ತಾರವಾಗಿ ಬೆಳೆದು ಸರ್ವರ ಉದ್ಧಾರವಾಗಲಿ ಎಂದರು.

ಬ್ಯಾಂಕ್‍ಗೆ ಶ್ರೀ ಮಂಜುನಾಥ ದೇವರ ಅನುಗ್ರಹ ಸದಾವಿರಲಿ. ಅವರ ಕೃಪೆಯಿಂದ ಎಲ್ಲಾ ವ್ಯವಹಾರಗಳು ವ್ಯವಸ್ಥಿತ ಮತ್ತು ಸುಲಲಿತವಾಗಿ ಸಾಗಲಿ ಎಂದು ಹೆಬ್ಬಳ್ಳಿ ಶುಭಾರೈಸಿದರು.

ಭಾರತ್ ಬ್ಯಾಂಕ್‍ನಲ್ಲಿ ನಮ್ಮದು ಮನೆತನದ ಬಾಂಧವ್ಯವಿದೆ. ಅಂಬರ್‍ನಾಥ್ ಪ್ರದೇಶವು ನಮ್ಮ ವ್ಯವಹಾರ ವಾಹಿವಾಟಿನ ಕೇಂದ್ರವಾಗಿದೆ. ಶೀಘ್ರವೇ ಅಂಬರ್‍ನಾಥ್ ಪಶ್ಚಿಮದಲ್ಲೂ ಶಾಖೆ ತೆರೆಯಿರಿ. ನಮ್ಮದು ಸೇರಿದಂತೆ ನಮ್ಮ ಎಲ್ಲಾ ನೌಕರರಿಗೂ ನಾವು ಭಾರತ್ ಬ್ಯಾಂಕ್‍ನಲ್ಲೇ ಖಾತೆ ತೆರೆಸಿ ವ್ಯವಹಾರಿಸುತ್ತಿದ್ದೇವೆ. ಕಾರಣ ಅಷ್ಟು ವಿಶ್ವಾಸ ನಮಗೆ ಈ ಬ್ಯಾಂಕ್‍ನಲ್ಲಿದೆ ಎಂದು ಸುಮತಿ ಪಾಟೀಲ್ ತಿಳಿಸಿದರು.

ಉಳ್ಳೂರು ಧನಂಜಯ್ ಶಾಂತಿ ವಾಸ್ತುಪೂಜೆ, ಉಳ್ಳೂರು ದಿನೇಶ್ ಶಾಂತಿ ಗಣಹೋಮ, ಶ್ರೀ ಶೇಖರ ಶಾಂತಿ ಉಳ್ಳೂರು ದ್ವಾರಪೂಜೆ ನೆರವೇರಿಸಿ ಹರಸಿದರು. ಗಂಗಾಧರ ಕಲ್ಲಾಡಿ ತೀರ್ಥಪ್ರಸಾದ ವಿತರಿಸಿದರು. ಶ್ರೀಮತಿ ರಶ್ಮೀ ಪ್ರಶಾಂತ್ ಪೂಜಾರಿ ದಂಪತಿ ಪೂಜಾಧಿಗಳ ಯಜಮಾನತ್ವ ವಹಿಸಿದ್ದರು.

ಬ್ಯಾಂಕ್‍ನ ಮುಖ್ಯ ಪ್ರಧಾನ ಪ್ರಬಂಧಕ ಅನಿಲ್‍ಕುಮಾರ್ ಆರ್.ಅವಿೂನ್, ಮಹಾ ಪ್ರಂಬಧಕಿ ಶ್ರೀಮತಿ ಶೋಭಾ ದಯಾನಂದ್, ಉಪ ಪ್ರಧಾನ ವ್ಯವಸ್ಥಾಪಕರುಗಳಾದ ಸುರೇಶ್ ಎಸ್.ಸಾಲ್ಯಾನ್, ವಿವೇಕ್ ಎಸ್.ಶ್ಯಾನ್‍ಭಾಗ್, ದಿನೇಶ್ ಬಿ.ಸಾಲ್ಯಾನ್, ಬ್ಯಾಂಕ್‍ನ ಅಭಿವೃದ್ಧಿ ಇಲಾಖೆಯ ಅಭಿವೃದ್ಧಿ ವಿಭಾಗದ ಸುನೀಲ್ ಗುಜರನ್, ಅವೀಶ್ ಪೂಜಾರಿ, ವಿಜಯ ಪಾಲನ್, ಭಾರತ್ ಬ್ಯಾಂಕ್ ಎಂಪ್ಲಾಯಿಸ್ ಯೂನಿಯನ್ ಅಧ್ಯಕ್ಷ ರಮೇಶ್ ಟಿ.ಪೂಜಾರಿ ಮತ್ತು ಬ್ಯಾಂಕ್‍ನ ಹಲವಾರು ಉನ್ನತಾಧಿಕಾರಿಗಳು ಸೇರಿದಂತೆ ವಿವಿಧ ಶಾಖೆಗಳ ಮುಖ್ಯಸ್ಥರು ಹಾಜರಿದ್ದು ಶಾಖೆಯ ಪ್ರಗತಿಗೆ ಶುಭಕೋರಿದರು.

ಉಪ ಪ್ರಧಾನ ಪ್ರಬಂಧÀಕ ಹಾಗೂ ಅಭಿವೃದ್ಧಿ ಇಲಾಖಾ ಮುಖ್ಯಸ್ಥ ಮೋಹನ್‍ದಾಸ್ ಹೆಜ್ಮಾಡಿ ಸ್ವಾಗತಿಸಿದರು. ಮಹಾ ಪ್ರಂಬಧಕ ನಿತ್ಯಾನಂದ್ ಡಿ.ಕೋಟ್ಯಾನ್ ಕಾರ್ಯಕ್ರಮ ನಿರ್ವಹಿಸಿದರು. ಶಾಖೆಯ ಅಧಿಕಾರಿಗಳಾದ ಕಸ್ತೂರಿ ಪೂಜಾರಿ, ಜಯನಂದ್ ಪೂಜಾರಿ, ಲವಿನಾ ಸೋನಿ, ರೀನಾ ಸುವರ್ಣ, ಗಾಯತ್ರಿ ಅವಿೂನ್ ಅತಿಥಿüಗಳಿಗೆ ಪುಷ್ಫಗುಪ್ಚವನ್ನೀಡಿ ಗೌರಸಿದರು. ಶಾಖೆಯ ಮುಖ್ಯಸ್ಥ ದಿನೇಶ್ ಕರ್ಕೇರ ಧನ್ಯವದಿಸಿದರು.

By Suddi9

Leave a Reply

Your email address will not be published. Required fields are marked *