ಬಂಟ್ವಾಳ : ರಾಷ್ಟ್ರೀಯ ಹೆದ್ದಾರಿ 234 ರ ವಗ್ಗ ಬಾಂಬಿಲದಲ್ಲಿ ಬಸ್ ಮತ್ತು ಬೈಕ್ ಗಳ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಗಾಯಗೊಂಡ ಘಟನೆ ಶುಕ್ರವಾರ ಸಂಭವಿಸಿದೆ.
1809pkt G1
ಬೆಳಾಲು ಮಾಚಾರಿನ ನಿವಾಸಿ ಯುವರಾಜ (27) ಗಾಯಗೊಂಡವರು. ಬೆಳ್ತಂಗಡಿ ಕಡೆಯಿಂದ ಬರುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್ ಎದುರುಗಡೆಯಿಂದ ಬರುತಿದ್ದ ಬೈಕ್ ಢಿಕ್ಕಿಯಾಗಿದ್ದು ಬಸ್ ಚಾಲಕನ ನಿಯಂತ್ರಣ ತಪ್ಪಿ ಬದಿಯ ಅಂಗಡಿ ಗೋಡೆಗೆ ಗುದ್ದಿದೆ. ಅಪಘಾತದಲ್ಲಿ ಬೈಕ್ ಬಸ್‍ನ ಅಡಿಗೆ ಸಿಲುಕಿದ್ದು ಸವಾರ ಅದೃಷ್ಟವಶಾತ್ ಅಪಾಯವಿಲ್ಲದೆ ಪಾರಾಗಿದ್ದಾರೆ. ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಬೆಳ್ತಂಗಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಬಂಟ್ವಾಳ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By Suddi9

Leave a Reply

Your email address will not be published. Required fields are marked *