ಬಜ್ಪೆ: ಕಳೆದ ಹಲವಾರು ವರ್ಷಗಳಿಂದ ಗಬ್ಬೆದ್ದು ನಾರುತ್ತಿದ್ದ ಬಜ್ಪೆಯ ಸುಮಾರು 15 ಬಸ್ಸ್ಟ್ಯಾಂಡ್ಗಳಿಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಬಜರಂಗದಳ ಬಜ್ಪೆ ವಲಯ ಹಾಗೂ ಬಿಜೆಪಿ ಯುವಮೋರ್ಛಾ ಬಜ್ಪೆ ಇದರ ಜಂಟಿ ಕಾರ್ಯಾಚರಣೆಯಲ್ಲಿ ಸ್ವಚ್ಛ ಭಾರತ ಪರಿಕಲ್ಪ್ಪನೆಯಡಿ ಬಸ್ಸ್ ತಂಗುದಾನಗಳನ್ನು ಸ್ವಚ್ಛಗೊಳಿಸಲಾಯಿತು.
ಸ್ವಚ್ಛಗೊಳಿಸುತ್ತಿರುವ ಬಿಜೆಪಿ ಯುವಮೋರ್ಛಾ ಹಾಗೂ ಬಜರಂಗದಳದ ಕಾರ್ಯಕರ್ತರು

ಸುಮಾರು 35ಕ್ಕೂ ಅಧಿಕ ಮಂದಿ ಕಾರ್ಯಕರ್ತರು ಬಜ್ಪೆಯ ಸುತ್ತಮುತ್ತಲಿನ ಬಸ್ಸ್ ತಂಗುದಾನವನನ್ನು ನೀರು ಹಾಯಿಸಿ, ಗುಡಿಸಿ, ಸಾರಿಸಿ ಸ್ವಚ್ಛಗೊಳಿಸಿದರು. ರಿಪೇರಿ ಕಾಣದೆ ಇದ್ದ ಬಸ್ಸ್ಟ್ಯಾಂಡ್ಗಳಿಗೆ ರಿಪೇರಿ ಭಾಗ್ಯ ದೊರಕಿತು. ಪೈಂಟ್ ಇಲ್ಲದೆ ಸೊರಗುತ್ತಿದ್ದ ಬಸ್ನಿಲ್ದಾಣಕ್ಕೆ ಸೊಗಸಾದ ಬಣ್ಣ ಕೊಡಲಾಯಿತು. ದೂರದೂರಿನಿಂದ ನೀರು ತಂದು ಕಾರ್ಯಕರ್ತರು ಸಾಕಷ್ಟು ಶ್ರಮ ವಹಿಸಿದ್ದಾರೆ. ಗಿಡಗಂಟಿ ಬೆಳೆದು ಪೊದೆಯಂತಾಗಿದ್ದ ಪ್ರದೇಶವನ್ನು ಕಡಿದು ಸ್ವಚ್ಛಗೊಳಿಸಲಾಯಿತು. ನರೇಂದ್ರ ಮೋದಿಯವರ ಸ್ವಚ್ಛ ಭಾರತ ಪರಿಕಲ್ಪನೆಯಡಿ ಈ ಎಲ್ಲಾ ಕಾರ್ಯವನ್ನು ನಡೆಸಲಾಯಿತು.
ಪ್ರಮುಖವಾಗಿ ಬಜರಂಗ ದಳ ಬಜ್ಪೆ ಇದರ ಸುಧಾಕರ್ ಕಾಮತ್, ಲೋಕೇಶ್ ಪೂಜಾರಿ, ಬಜರಂಗದಳ ಬಜ್ಪೆ ಪ್ರಖಂಡ ಸಹಸಂಚಾಲಕ ಸುಶಾಂತ್, ಬಜ್ಪೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪ್ರದೀಪ್ ಸುವರ್ಣ, ಸುಕೇಶ್ ಶೆಟ್ಟಿ ಮುಂಡಾರು, ಕೃಷ್ಣ ಕಜೆಪದವು ಹಾಗೂ ಹಲವು ಮಂದಿ ಬಿಜೆಪಿ, ಬಜರಂಗದಳದ ಕಾರ್ಯಕರ್ತರು ಉಪಸ್ಥಿತರಿದ್ದರು
