ಬಂಟ್ವಾಳ: ಕಾಂಗ್ರೇಸ್ನ ಯುಪಿಎ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ 24 ಲಕ್ಷ ಕೋಟಿ ರೂ ಸಾಲ ಮಾಡಿತ್ತು, ಆದ್ರೆ ಆಗ ಯಾವ ಎಂ.ಪಿ., ಎಂ.ಎಲ್.ಎ ಗಳು ಆತ್ಮಹತ್ಯೆ ಮಾಡಿಕೊಂಡಿಲ್ಲ, 22 ಕೋಟಿ ವೈಯುಕ್ತಿಕ ಸಾಲ ಇರೋ ವಿಜಯ ಮಲ್ಯಾ ಕೂಡ ಈಗಲೂ ಹೆಲಿಕಾಫ್ಟರ್ ನಲ್ಲಿ ತಿರುಗಾಡ್ತಾ ಇದ್ದಾರೆ, ಆದರೆ ಸಾಲದ ಹೊರೆಯಿಂದ ಮಾನ ಮರ್ಯಾದೆಗೆ ಅಂಜಿ ರೈತ ಆತ್ಮಹತ್ಯೆ ಮಾಡಿಕೊಳ್ತಾ ಇದ್ದಾನೆ , ಅದಕ್ಕಾಗಿ ಬಿಜೆಪಿ ರಾಜ್ಯದಾದ್ಯಂತ ರೈತ ಚೈತನ್ಯ ಯಾತ್ರೆ ಯ ಮೂಲಕ ರೈತರಿಗೆ ಸಾಂತ್ವಾನ ಮತ್ತು ಧೈರ್ಯ ತುಂಬುವ ಕಾರ್ಯಮಾಡುತ್ತಿದೆ ಎಂದು ಕರ್ನಾಟಕ ರಾಜ್ಯ ಬಿಜೆಪಿ ಅಧ್ಯಕ್ಷ , ಸಂಸದ ಪ್ರಹ್ಲಾದ ಜೋಷಿ ಹೇಳೀದ್ದಾರೆ.
ಅವರು ರಾಜ್ಯ ಬಿಜೆಪಿ ವತಿಯಿಂದ ನಡೆಯುತ್ತಿರುವ ರೈತ ಚೈತನ್ಯ ಯಾತ್ರೆಯ ಅಂಗವಾಗಿ ಬಿ.ಸಿರೋಡು ಸಮೀಪದ ಗಾಣದಪಡ್ಪು ವಿನ ವಿಶಾಲ ಮೈದಾನದಲ್ಲಿ ದ.ಕ.ಜಿಲ್ಲಾ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ರೈತರ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು.
5 (1)

6 (1)

021

06

07

010

011

014

16

019

020

01

02

03

05

09

015

017

018

ಕರ್ನಾಟಕದಲ್ಲಿ ಕಳೆದ ನಾಲ್ಕು ತಿಂಗಳಿನಲ್ಲಿ 440ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು,ರೈತರ ಹೆಸರು ಹೇಳಿ ಅಧಿಕಾರಕ್ಕೆ ಬಂದ ಕರ್ನಾಟಕ ಸರ್ಕಾರದಿಂದ ರೈತಪರವಾದ ಯಾವುದೇ ಯೋಜನೆಯನ್ನು ನಿರೀಕ್ಷಿಸುವಂತಿಲ್ಲ ಎಂದರು. ರೈತರು ಕೃಷಿ ಮಾಡಬೇಕಾದ ವಾತಾವರಣ ನಿರ್ಮಿಸಬೇಕಾದ್ದು ಸರ್ಕಾರ ಮತ್ತು ಸಮಾಜದ ಜವಬ್ದಾರಿಯಾಗಿದೆ ಎಂದ ಅವರು, ಆದರೆ ಸರ್ಕಾರ ರೈತರ ಪ್ರಾಣದ ಜೊತೆಗೆ ಚೆಲ್ಲಾಟ ವಾಡ್ತಾ ಇದೆ, ರೈತ ಬೆಳೆಸಿದ ಭತ್ತ ರಬ್ಬರ್, ಕಬ್ಬು, ಅಡಿಕೆ ಬೆಳೆಗೆ ಸಂಬಂಧಿಸಿದ ನಷ್ಟದಿಂದ ರೈತ ಗಂಭೀರಾವಸ್ಥೆ ತಲುಪಿದ್ದರೂ ಸಿದ್ದರಾಮಯ್ಯ ಸರ್ಕಾರ ನಿದ್ರಾವಸ್ಥೆಯಲ್ಲಿದೆ ಎಂದು ಆರೋಪಿಸಿದರು.
ಬಡವರಿಗೆ ಮನೆಕಟ್ಟಲು ಮರಳು ಸಿಗ್ತಾ ಇಲ್ಲಾ.. ಆದರೆ ವಿದೇಶಕ್ಕೂ ಅಕ್ರಮ ಮರಳು ಸಾಗಾಟವಾಗುತ್ತಿದೆ. ದ.ಕ.ಜಿಲ್ಲಾ ಉಸ್ತುವಾರಿ ಸಚಿವರು ಸಹಿತ ಅವರ ಗೂಂಡಾ ಪಡೆ, ಬೆಂಬಲಿಗರು ಈ ದಂಧೆಯಲ್ಲಿ ಶಾಮೀಲಾಗಿದ್ದಾರೆ, ರೈ ಈ ದಂಧೆಯಲ್ಲಿ ಇಲ್ಲಾ ಅನ್ನೋದಾದ್ರೆ ತಾನು ರಾಜಕೀಯ ಸನ್ಯಾಸ ಸ್ವೀಕರಿಸುವುದಾಗಿ ಈಶ್ವರಪ್ಪ ಸವಾಲೆಸೆದರು.
ಅನ್ನಭಾಗ್ಯದ ಅಕ್ಕಿಯೂ ತಮಿಳುನಾಡಿಗೆ ಅಕ್ರಮವಾಗಿ ರವಾನೆಯಾಗುತ್ತಿದ್ದು, ತಮಿಳುನಾಡಿನ ಅಮ್ಮ ಇಡ್ಲಿಗೆ ಸಿದ್ದರಾಮಯ್ಯರ ಅಕ್ಕಿ ಯನ್ನು ಪೂರೈಸಲಾಗುತ್ತಿದೆ ಎಂದು ವ್ಯಂಗ್ಯವಾಡಿದರು.

ಇಡೀ ದೇಶವನ್ನು ಒಗ್ಗೂಡಿಸಲು ಬಾಲಗಂಗಾಧರ ತಿಲಕ್ ಗಣೇಶೋತ್ಸವ ಆರಂಭಿಸಿದ್ರು. ಆದರೆ ಈ ಹಬ್ಬಕ್ಕೂ ಕರೆಂಟೇ ಕೊಡೋದಿಲ್ಲ ಎನ್ನುವ ಮೂಲಕ ಹಿಂದೂ ಸಮಾಜದ ಭಾವನೆಗೆ ಧಕ್ಕೆ ತಂದಿದ್ದಾರೆ ಇವರಿಗೆ ತಾಕತ್ತಿದ್ದರೆ ಮುಸಲ್ಮಾನ ಅಥವಾ ಕ್ರಿಶ್ಚನ್ ಹಬ್ಬಗಳಿಗೆ ವಿದ್ಯುತ್ ಕೊಡೋದಿಲ್ಲ ಎಂದು ಹೇಳಲಿ ಎಂದು ಈಶ್ವರಪ್ಪ ಸವಾಲೆಸೆದರು.
ಬಿಜೆಪಿ ಆಡಳಿತದ ರಾಜ್ಯಗಳಲ್ಲಿನ ಬರ ಅಧ್ಯಯನಕ್ಕೆ ಹೋಗುವ ಕಾಂಗ್ರೇಸ್ ನ ಯುವ ನಾಯಕ ರಾಹುಲ್ ಗಾಂಧಿ ಗೆ ಕರ್ನಾಟಕದಲ್ಲಿ 440 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೂ ಒಮ್ಮೆಯೂ ಭೇಟಿ ನೀಡಲಿಲ್ಲ ಯಾಕೆ ಎಂದು ಮಾಜಿ ಸಂಸದೆ ತೇಜಸ್ವಿನಿ ರಮೇಶ್ ಪ್ರಶ್ನಿಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಪ್ರತಾಪ್ ಸಿಂಹ ನಾಯಕ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಬಿಜೆಪಿ ರಾಜ್ಯ ರೈತ ಮೋರ್ಚಾ  ಮುಖಂಡ ಅರಗ ಜ್ಞಾನೇಂದ್ರ , ಶಾಸಕರಾದ ಸುನಿಲ್ ಕುಮಾರ್, ಎಸ್. ಅಂಗಾರ, ವಿ.ಪ.ಸದಸ್ಯರಾದ ಸೋಮಣ್ಣ ಬೇವಿನಮರ, ಕ್ಯಾಗಣೇಶ್ ಕಾರ್ಣಿಕ್, ಮಾಜಿ ಶಾಸಕರುಗಳಾದ ಯೋಗೀಶ್ ಭಟ್, ರುಕ್ಮಯ ಪೂಜಾರಿ, ಕೃಷ್ಣಪಾಲೆಮಾರ್, ಲಾಲಾಜಿ ಮೆಂಡನ್, ಪದ್ಮನಾಭ ಕೊಟ್ಟಾರಿ, ನಾಗರಾಜ ಶೆಟ್ಟಿ, ಪ್ರಭಾಕರ ಬಂಗೇರ, ಕೆ.ಜಯರಾಮ ಶೆಟ್ಟಿ, ರಾಜ್ಯ ಉಪಾಧ್ಯಕ್ಷೆ ಸುಲೋಚನಾ ಭಟ್, ಜಿ.ಪಂ.ಅಧ್ಯಕ್ಷೆ ಆಶಾತಿಮ್ಮಪ್ಪ ಗೌಡ, ಉಪಾಧ್ಯಕ್ಷೆ ಸತೀಶ್ ಕುಂಪಲ,ಪ್ರಮುಖರಾದ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಎಸ್.ಶಿವಪ್ರಸಾದ್ , ಶ್ಯಾಮಲಾ ಕುಂದರ್, ರಂಜನ್ ಗೌಡಬೆಳ್ತಂಗಡಿ, ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ಜಿ.ಆನಂದ, ವಿಕಾಸ್ ಪುತ್ತೂರು, ನೇಮಿರಾಜ್ ರೈ, ಕುಮಾರ ಸ್ವಾಮಿ, ರಾಮದಾಸ್ ಬಂಟ್ವಾಳ, ದಿನೇಶ್ ಭಂಡಾರಿ, ಆನಂದ ಕುಲಾಲ್ ಎಡ್ತೂರು, ದೇವಪ್ಪ ಪೂಜಾರಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿ.ಪ. ಮಾಜಿ ಸದಸ್ಯ ಮೋನಪ್ಪ ಭಂಡಾರಿ ಸ್ವಾಗತಿಸಿದರು, ದ.ಕ.ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ  ಸಂಜೀವಮಠಂದೂರು ವಂದಿಸಿದರು. ಪುರಸಭಾ ಸದಸ್ಯ ದೇವದಾಸ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

 

 

By Suddi9

Leave a Reply

Your email address will not be published. Required fields are marked *