ಬೆಂಗಳೂರು: ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಶ್ರೀಮತಿ ಪ್ರೇಮ ಆರ್ ಶೆಟ್ಟಿ ಮತ್ತು ಮಕ್ಕಳು ಕುತ್ಯಾರು ಇವರ ಸೇವೆಯ ಬಯಾಲಾಟವಾಗಿ ಮದರ್ ಪೌಂಡೇಶನ್ ಬೆಂಗಳೂರು ಅರ್ಪಿಸುವ ಪಟ್ಲ ಸತೀಶ ಶೆಟ್ಟಿ ಅವರ ದಕ್ಷ ನಿರ್ದೇಶನದಲ್ಲಿ ಸೆ.13ರಂದು ಭಾನುವಾರ ಮಧ್ಯಾಹ್ನ 2.30ಕ್ಕೆ
“ಸಂಪೂರ್ಣ ದೇವಿಮಹಾತ್ಮೆ; ಯಕ್ಷಗಾನ ಬಯಲಾಟವು ನಡೆಯಲಿದೆ.

ಗಾನ ಸಾರಥ್ಯದಲ್ಲಿ;
ಪದ್ಯಾಣ ಗಣಪತಿಭಟ್, ಪಟ್ಲ ಸತೀಶ ಶೆಟ್ಟಿ, ಕಡಬ ರಾಮಚಂದ್ರ ರೈ, ಶ್ರೀನಿವಾಸ ಬಳಮಂಜ
ಶ್ರೀ ಕಟೀಲು ಆರು ಮೇಳದ ಕಲಾವಿದರ ಕೂಡುವಿಕೆಯಲ್ಲಿ ಮಹಾನಗರ ಬೆಂಗಳೂರಿನ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಹಲವು ವೈಶಿಷ್ಟ ಪೂರ್ಣ ಆಟ.
ಮಂಗಳೂರಿನ ವಾದ್ಯಘೋಷನೆಯೊಂದಿಗೆ ಆರಾಧನಾ ಕಲೆಯ ವೈಭವ
ವರ್ಣರಂಜಿತ ಪುಷ್ಪಾಲಂಕಾರದ ರಂಗಸ್ಥಳದಲ್ಲಿ ಬೆಳ್ಳಿಯ ಉಯ್ಯಾಲೆಯಲ್ಲಿ ಕದಂಬ ಕೌಸಿಕೆಯ ಸಾಕ್ಷಾತ್ಕಾರ. ಐದು ಮಹಿಷಾಸುರರ ಏಕಕಾಲದಲ್ಲಿ ರಂಗಪ್ರವೇಶ.
ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಯಕ್ಷಗಾನ ಇತಿಹಾಸದಲ್ಲೆ ಪ್ರಪ್ರಥಮವಾಗಿ ಬೆಂಗಳೂರಿನ ಕಲಾಕ್ಷೇತ್ರದ ಹೊರಗೂ ದೊಡ್ಡ ಪರದೆಯಲ್ಲಿ 1.500 ಜನ ಕುಳಿತುಕೊಂಡು ಅಟ ಸವಿಯುವ ವ್ಯವಸ್ಥೆ
ಕಾರ್ಯಕ್ರಮ ಸಂಯೋಜನೆಯನ್ನು .ಕರ್ನೂರು ಸುಭಾಷ್ ರೈ ಮಾಡಿದ್ದಾರೆ ಸಂಪರ್ಕದಲ್ಲಿ ಅಂಪಾರ್ ರತ್ನಾಕರ ಶೆಟ್ಟಿ ;ಮೋಬೈಲ್: 9591754722
