ಜೀವನೋಲ್ಲಾಸ, ಹೃದಯವಂತಿಕೆ ನಿಜವಾದ `ಯುವ’ ಶಕ್ತಿ
ಮೂಡುಬಿದಿರೆ: ಸಾಮಾಜಿಕ ಬದಲಾವಣೆಯನ್ನು ಮಾಡುವ ಮೊದಲು ನಮ್ಮೊಳಗೆ ಜಾಗೃತಿ ಮೂಡಬೇಕು. ಸಕಾರತ್ಮಕ ಚಿಂತನ, ಉತ್ತಮ ವಿಚಾರಗಳ ಮಂಥನ ಸಾಧನೆಗೆ ಚೇತನವಾಗುತ್ತದೆ. ಯುವ ಎನ್ನುವುದನ್ನು ಯುವಜನತೆ ಎಂದು ಅರ್ಥೈಸುವುದಕ್ಕಿಂತ ಹೃದಯವಂತಿಕೆ, ಜೀವನೊಲ್ಲಾಸ, ಉತ್ತಮ ಬದಲಾವಣೆ ಪ್ರೇರಣೆ ನೀಡಬಲ್ಲ ಶಕ್ತಿ ಎಂದು ಭಾವಿಸಿದರೆ, ವೈಯಕ್ತಿಕ ಹಾಗೂ ರಾಷ್ಟ್ರ ಅಭಿವೃದ್ಧಿ ಸಾಧ್ಯ ಎಂದು ರಾಜ್ಯ ಜ್ಞಾನ ಆಯೋಗದ ನಿವೃತ್ತ ನಿರ್ದೇಶಕ ಪ್ರೊ.ಎಂ.ಕೆ ಶ್ರೀಧರ್ ಅಭಿಪ್ರಾಯಪಟ್ಟರು.

5mood alvas rostrum (1)
5mood alvas rostrum (3)

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ರೋಸ್ಟ್ರುಮ್ ಸ್ಪೀಕರ್ಸ್ ಕ್ಲಬ್ ಮಿಜಾರಿನ ಕ್ಯಾಂಪಸ್‍ನ ಸಭಾಂಗಣದಲ್ಲಿ ಶನಿವಾರ ನಡೆದ `ಯುವ ಹಾಗೂ ಯುವಜನತೆ’ ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಷಣ ಹಾಗೂ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು.
ನ್ಯೂನತೆಗಳಿಗೆ ಸಮಯ ಪೋಲು ಮಾಡದೆ ನಮ್ಮಲ್ಲಿರುವ ಸಾಮಥ್ರ್ಯವನ್ನು ಅನಾವರಣಗೊಳಿಸಬೇಕು. ಸಾಮಥ್ರ್ಯದ ಜೊತೆಗೆ ಸಕಾರತ್ಮಕ ಸಾಮಾಜಿಕ ಚಿಂತನೆ ಬೆರೆತರ ಎಲ್ಲರು ಅಭಿವೃದ್ಧಿ ಹೊಂದಲು ಸಾಧ್ಯ.
ಚುನಾವಣೆಗೆ ಸ್ಪರ್ಧಿಸುವ ವಯಸ್ಸನ್ನು 25ರಿಂದ 21ಕ್ಕೆ ಇಳಿಸಿದರೆ ಯುವಜನರಿಗೆ ಹೆಚ್ಚಿನ ಅವಕಾಶ ಸಿಗಲಿದೆ. ರಾಜಕೀಯದಲ್ಲಿ ಯುವಜನರು ಸಮರ್ಥ ನಾಯಕತ್ವದೊಂದಿಗೆ ಬದಲಾವಣೆ ತರಬೇಕು ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಅವರು ಪ್ರೊ.ಎಂ.ಕೆ ಶ್ರೀಧರ್ ಅವರನ್ನು ಗೌರವಿಸಿದರು.
ಸಂಸ್ಥೆಯ ಸಲಹಾ ಸಮಿತಿಯ ದೇವಿ ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು. ಕ್ಲಬ್‍ನ ಸಂಚಾಲಕ ರವೀಂದ್ರ ಶೆಣೈ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *