ಬಂಟ್ವಾಳ: ದ.ಕ.ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 14 ವರ್ಷಗಳ ಕಾಲ ಮುಖ್ಯೋಪಾಧ್ಯಾಯರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಬಾಬು ಮಾಸ್ತರ್ರವರಿಗೆ ವಿದಾಯ ಸಮಾರಂಭ ಮಂಗಳವಾರ ಶಾಲೆಯ ರಾಣಿ ಅಬ್ಬಕ್ಕ ರಂಗ ಮಂದಿರದಲ್ಲಿ ನಡೆಯಿತು.
BTW_SEP1_1
ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ನಿವೃತ್ತ ಶಿಕ್ಷಕ ಬಾಬು ಮಾಸ್ತರ್ ಅವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿ ಒಂದು ಗ್ರಾಮದ ಅಭಿವೃದ್ದಿಯನ್ನು ಅಲ್ಲಿನ ಶಾಲೆಯನ್ನು ನೋಡಿದಾಗ ಅರಿವಿಗೆ ಬರುತ್ತದೆ. ಶಾಲೆ ಉತ್ತಮವಾಗಿರ ಬೇಕಾದರೆ ಅಲ್ಲಿನ ಶಿಕ್ಷಕ ವರ್ಗವೂ ಉತ್ತಮವಾಗಿರ ಬೇಕು. ಆಗ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ. ಇಂತಹ ಸೇವೆಯನ್ನು ಬಾಬು ಮಾಸ್ತರ್ ಕೊಟ್ಟಿದ್ದಾರೆ ಎಂದು ಹೇಳಿದರು.
ಜಿ.ಪಂ.ಸದಸ್ಯೆ ಮಮತಾಗಟ್ಟಿ ಮಾತನಾಡಿ ಶಿಕ್ಷಕ ವೃತ್ತಿ ಅತ್ಯಂತ ಪಾವಿತ್ರವಾದುದು. ಒಂದು ಮಗುವಿಗೆ ಶಿಕ್ಷಣ ನೀಡಿ ಆತನನ್ನು ಪರಿಪೂರ್ಣಗೊಳಿಸುವುದು ಶಿಕ್ಷಕರು. ಅಂತೆಯೇ ತನ್ನ ಸೇವಾವಧಿಯಲ್ಲಿ ಬಾಬು ಮಾಸ್ತರ್ ಅದೆಷ್ಟೋ ವಿದ್ಯಾರ್ಥಿಗಳ ಪಾಲಿಗೆ ಬೆಳಕಾಗಿದ್ದಾರೆ ಎಂದರು.
ತುಂಬೆ ಗ್ರಾಮಪಂಚಾಯಿತಿ ಅಧ್ಯಕ್ಷೆ ಹೇಮಲತಾ ಜಿ.ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಉಪಾದ್ಯಕ್ಷ ಪ್ರವೀಣ್ ಬಿ., ತಾ.ಪಂ.ಸದಸ್ಯೆ ಅನಿತಾ ಮಾಧವ, ಕ್ಷೇತ್ರ ಶಿಕ್ಷಣಾದಿಕಾರಿ ಶೇಷಶಯನ ಕಾರಿಂಜ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅಭಿನಂದನೆ ಸಲ್ಲಿಸಿದರು. ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಅಶೋಕ್, ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ರಮೇಶ್ ನಾಯಕ್ ರಾಯಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಕ್ಷಕಿ ಪ್ರಮೀಳಾ ಡಾಸ್ನಿ ಸ್ವಾಗತಿಸಿ, ಪ್ರಸನ್ನ ವಂದಿಸಿದರು. ರೂಬಿ ಕಾರ್ಯಕ್ರಮ ನಿರ್ವಹಿಸಿದರು.

By Suddi9

Leave a Reply

Your email address will not be published. Required fields are marked *