ಕೈಕಂಬ: ವಿಶ್ವಛಾಯಗ್ರಹಣ 176ನೇ ವರ್ಷಾಚರಣಾ ಸಂಭ್ರಮದ ಶುಭದಿನದಂದು ಸೌತ್ ಕೆನರಾ ಫೋಟೋಗ್ರಾಫರ್ಸ್ ಮೂಡಬಿದ್ರೆ ವಲಯದ ವತಿಯಿಂದ ತೀರ ಬಡಕುಟುಂಬದ ಐದು ಕುಟುಂಬದವರಿಗೆ ಆರ್ಥಿಕ ಸಹಾಯವನ್ನು ನೀಡಲಾಯಿತು. ವೀಲ್ ಚೆಯರ್ ಹಾಗೂ ನಗದು ರೂಪದಲ್ಲಿ ಸಹಾಯ ಮಾಡಲಾಯಿತು.
ಈ ಸಂಧರ್ಭದಲ್ಲಿ ಸೌತ್ ಕನರಾ ಫೊಟೋಗ್ರಾಫರ್ ಯಸೋಸಿಯನ್ಸ್ ಇದರ ಅಧ್ಯಕ್ಷ ವಾಸುದೇವ ರಾವ್, ಮೂಡಬಿದ್ರೆ ವಲಯದ ಅಧ್ಯಕ್ಷ ವಿಲ್ಸನ್ ಮೆಂಡೋನ್ಸ್ , ಉಪಾಧ್ಯಕ್ಷ ರಾಜೇಶ್ ಎಸ್ ಅಮೀನ್ ಎಡಪದವು, ಮಣೀಂದ್ರ ಕೋಟೆಬಾಗಿಲು , ಸುನೀಲ್ , ಮನೋಜು ,ಪದ್ಮನಾಭ, ಕಿಶೋರ್ ಪೆರಿಂಜೆ, ಸಂತೋಷ್ ಶೆಟ್ಟಿ, ಸುಕುಮಾರ್,ಪ್ರದೀಪ್, ಭಾಸ್ಕರ್, ಹರೀಶ, ಇಕ್ಬಾಲ್, ಮತ್ತು ರಾಮನ್ನ ಉಪಸ್ಥಿತರಿದ್ದರು.





