ಕೈಕಂಬ: ಗುರುಪುರ ಕೈಕಂಬದ ಪೊಂಪೈ ಮಾತೆಯ ದೇವಾಲಯದ ಸಭಾ ಭವನದಲ್ಲಿ ಕೊಂಕಣಿ ಮಾನ್ಯತಾ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಂ? ಪೌಲ್ ಪಿಂಟೋ ಅವರು ವಹಿಸಿದ್ದರು. ಮುಖ್ಯ ಅತಿ ಥಿಯಾಗಿ ಲುವೀಸ್ ಪಿಂಟೋ , ವಂ/ ಚಾಲ್ಸ್ ಮಿನೇಜಸ್ ಉಪಸ್ಥಿತರಿದ್ದರು.
ಕೊಂಕಣಿ ಭಾಷೆಯಲ್ಲಿ ವಿವಿಧ ವಿನೋಧವಳಿಗಳು ಪ್ರದರ್ಶಿಸಿದರು. ಹತ್ತು ಪಾಳಯಗಳಲ್ಲಿ ಆಯಾ ಪಾಳಯದ ಎಲ್ಲರು ಒಟ್ಟು ಸೇರಿ ಅರಸಿನ ಗಿಡದ ಎಲೆಗಳಿಂದ ತಯಾರಿಸಲ್ಪಟ್ಟ ತಿಂಡಿ ತಿನಸ್ಸನ್ನು ಹಂಚಿ ಸಂತೋಷ ಪಟ್ಟರು. ಇಗರ್ಜಿಯ ಪಾಲನಾ ಸಮಿತಿಯ ಉಪಾದ್ಯಕ್ಷ ಜಾನ್ಸನ್ ಲೋಬೋ ಸ್ವಾಗತಿಸಿ ಡೆಲ್ಸಿ ರೋಡ್ರಿಗಸ್ ನಿರೂಪಿಸಿದರು. ಅನಿತ ಪೆರ್ನಾಂಡಿಸ್ ಧನ್ಯವಾದವಿತ್ತರು.





















