ಬಂಟ್ವಾಳ: ವಿಟ್ಲ ರೋಟರಿ ಕ್ಲಬ್ 2015-16 ನೇ ಸಾಲಿನ ಅಧ್ಯಕ್ಷರು ಮತ್ತು ಇತರ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಸಂಗೀತ ಮತ್ತು ನೃತ್ಯ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ವಿಠಲ ಪದವಿ ಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿನಿ ವೈಷ್ಣವಿ ಅಡಿಗ ವಿ ಇವರನ್ನು ನೂತನ ಅಧ್ಯಕ್ಷ ಡಿ ಬಿ ಅಬೂಬಕ್ಕರ್ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ನಿವೃತ್ತ ಐಎಎಸ್ ಅಧಿಕಾರಿ ವಿ ವಿ ಭಟ್ ಉಪಸ್ಥಿತರಿದ್ದರು. ವೈಷ್ಣವಿ ಅಡಿಗರವರು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸಾಂಸ್ಕøತಿಕ ತರಬೇತಿಗಳಲ್ಲಿ ಶಾಲೆಯಿಂದ ಆಯ್ಕೆಗೊಂಡು ಭಾಗವಹಿಸಿರುತ್ತಾಳೆ.ಭರತನಾಟ್ಯ, ಜಾನಪದ, ಕತಕ್ ಹಾಗೂ ಇತರೆ ಪಾಶ್ಚಾತ್ಯ ನೃತ್ಯಗಳಲ್ಲಿ ತೊಡಗಿಸಿಕೊಂಡಿದ್ದು ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಟೀಮ್ `ಶ್ರೀ ಸಾಯಿ ಗಾನಸುಧಾ ಬಳಗ’ ಕಟ್ಟಕೊಂಡಿದ್ದಾರೆ.

