ಮುಂಬಯಿ : ಜಿಎಸ್‍ಬಿ ಸಭಾ ಮಲಾಡ್ ಕಾಂದಿವಲಿ ಇದರ ವತಿಯಿಂದ 5ನೇ ವಾರ್ಷಿಕ ಸ್ನೇಹ ಸಮ್ಮೀಲನವು ಕಳೆದ ರವಿವಾರ ಮಲಾಡ್‍ನ ಬಿಎಂಸಿ ಆರೋಗ್ಯ ಧನಾಸಂಪದಾ ಸಭಾಗೃಹದಲ್ಲಿ ವಿಜೃಂಭಣೆಯಲ್ಲಿ ಸತ್ಯನಾರಾಯಣ ಪೂಜೆಯೊಂದಿಗೆ ನಡೆಯಿತು.
GSB Malad-Kandivali-1

 

GSB Malad-Kandivali-3

 

GSB Malad-Kandivali-2ಡಾ| ವಿ.ವಿ. ಶೆಣೈ ಅವರ ನೇತೃತ್ವದಲ್ಲಿ ಸುರೇಶ್ ಪ್ರಭು ಅವರ ಯಜಮಾನತ್ವದಲ್ಲಿ ಪೂಜಾಧಿಗಳು ಹಾಗೂ ಸಮಿತಿ ಸದಸ್ಯ ಬಿ.ಸಿ ಕಾಮತ್, ಪಿ.ಬಿ.ಶೆಣೈ, ಶ್ರೀಮತಿ ಅಂಕಿತಾ ಭಟ್, ವಿ.ಎನ್ ಕುಡ್ವಾ ಮತ್ತು ದತ್ತಾತ್ರೇಯ ಶ್ಯಾನುಭಾಗ್ ಅವರಿಂದ ಕಾರ್ಯಕ್ರಮ ಜರುಗಿತು. ಸಮಾಜದ ಪ್ರಮುಖ ಕಲಾಕಾರರಿಂದ ಭಜನಾ ಕಾರ್ಯಕ್ರಮ ನೇರವೇರಿತು. ಶ್ರೀ ರಾಘವೇಂದ್ರ ಮಲ್ಯರ ನೇತೃತ್ವದಲ್ಲಿ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಕ್ಕಳು ನೃತ್ಯಾವಳಿಗಳನ್ನು ಪ್ರದರ್ಶಿಸಿದರು. ಅಕ್ಷತಾ ಮಲ್ಯ ಅವರು ಮನೆಮದ್ದು ಬಗ್ಗೆ ತಿಳಿಸಿದರು. ಚರಿತಾ ಮಲ್ಯ ಕೊಂಕಣಿ ಗಾದೆಗಳ ಚುಟುಕು ಕಾರ್ಯಕ್ರಮವನ್ನಿತ್ತರು. ಪ್ರಮುಖ ಆಕರ್ಷಣೆಯಾಗಿ ಶ್ರೀಮತಿ ವಸುಧಾ ಪ್ರಭು ಅವರು ಕೊಂಕಣಿ ಕವನಗಳನ್ನು ಪ್ರಸ್ತುತ ಪಡಿಸಿದರು. ಮಹಾ ಆರತಿ, ಮಹಾ ಪ್ರಸಾದದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

By Suddi9

Leave a Reply

Your email address will not be published. Required fields are marked *