ಮುಂಬಯಿ : ನಮ್ಮ ತುಳುನಾಡಿನಲ್ಲಿ ಅಂದರೆ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲೆಯಲ್ಲಿ `ಆಟಿ’ ತಿಂಗಳು, ತುಂಬಾ ಮಹತ್ವವನ್ನು ಹೊಂದಿದೆ. ನಮ್ಮ ಬಾಲ್ಯದ ದಿನಗಳಲ್ಲಿನಾವು ಕಂಡಿದ್ದೇವೆ. ಆ ತಿಂಗಳಲ್ಲಿ ಎಷ್ಟು ಕಷ್ಟ ಇತ್ತು ಎಂದು, ಇದು ನಮ್ಮ ನಾಡಿನ ಸಂಸ್ಕ್ರತಿಯನ್ನು ಬಿಂಬಿಸಿದ ಕಾರ್ಯಕ್ರಮ ಆ ದಿನಗಳನ್ನು ನೆನಪಿಸುವ ಕಾರ್ಯಕ್ರಮವನ್ನು ನಾವು ಸಂಘ ಸಂಸ್ಥೆಯವರು ಅಲ್ಲಲ್ಲಿ ಹಮ್ಮಿಕೊಂಡು, ಆ ದಿನಗಳ ಮಹತ್ವವನ್ನು ಯುವ ಪೀಳಿಗೆಗೆ ತಿಳಿಸುವ ಕಾರ್ಯ, ಬಹಳಷ್ಟು ಮಹತ್ವ ಹೊಂದಿದೆ. ಈ ನಿಟ್ಟಿನಲ್ಲಿ ಈ ಸಂಘದಸದಸ್ಯರು ಪ್ರತಿವರ್ಷ ಈ ಕಾರ್ಯಕ್ರಮವನ್ನು ಆಚರಿಸುವುದು ಶ್ಲಾಘನೀಯ. ನಾನು ನಿಮ್ಮನೆಲ್ಲ ಅಭಿನಂದಿಸುತ್ತೇನೆ ಎಂದು ಬಂಟರ ಸಂಘ ಮುಂಬಯಿ ಇದರ ಅಂಧೇರಿ-ಬಾಂದ್ರ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಉದ್ಯಮಿ ಐಕಳ ಗುಣಪಾಲ ಶೆಟ್ಟಿನುಡಿದರು. ಕನ್ನಡ ಸೇವಾ ಸಂಘ ಪೊವಾಯಿ ಇತ್ತೀಚೆಗೆ ಸಂಘದ ಪೊವಾಯಿ ಅಲ್ಲಿನ ಸೊಲಾರಿಸ್‍ನ ಆಡಳಿತ ಕಚೇರಿಯಲ್ಲಿ ಆಚರಿಸಿದ `ಆಟಿಡೊಂಜಿ ದಿನ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಸಭೆಯನ್ನುದ್ದೇಶಿಸಿ ಗುಣಪಾಲ ಶೆಟ್ಟಿಮಾತನಾಡಿದರು.

Kannda Seva Sangha Powai-1

Kannda Seva Sangha Powai-2

 

Kannda Seva Sangha Powai-4

Kannda Seva Sangha Powai-5

ಶ್ರೀಮತಿ ಆಶಾ ಮನೋಹರ ಹೆಗ್ಡೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅತಿಥಿ ಗಣ್ಯರಾಗಿ ಎನ್.ಸಿ.ಶೆಟ್ಟಿ, ಡಾ| ಬಾಸ್ಕರ ಶೆಟ್ಟಿ, ಸತೀಶ್ ಶೆಟ್ಟಿಪೆನಿನ್ಸುಲಾ, ಕಾಂತಿ ಸತೀಶ್ ಶೆಟ್ಟಿ, ವಿಜಯಲಕ್ಷ್ಮಿ, ಮಹೇಶ್ ಎಸ್.ಶೆಟ್ಟಿ, ಹಿರಿಯರಾದ, ಶ್ರೀಮತಿ ಕುಸುಮ ದೇರಣ್ಣ ರೈ ಕಯ್ಯಾರು, ಶ್ರೀಮತಿ ಲೀಲಾ ಶೆಟ್ಟಿ ಕುಂಜೂರು ಗೆರಪಾಯಿ ಮನೆ ದಿವಾಕರ ಎಂ.ಶೆಟ್ಟಿ, ಸುಭಾಶ್ಚಂದ್ರ ಶೆಟ್ಟಿ, ಪ್ರಕಾಶ್ ಆಳ್ವ, ಕುಸುಮ ದೇರಣ್ಣ ರೈ ಕಯ್ಯಾರು ಉಪಸ್ಥಿತರಿದ್ದು, ಮುಂಬಯಿ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದ ಹೆಮ್ಮೆಯ ಕನ್ನಡಿತಿ, ಶ್ರೀಮತಿ ಡಾ| ಪೂರ್ಣಿಮ ಸುಧಾಕರ ಶೆಟ್ಟಿ ಅವರನ್ನು ಗಣ್ಯರು ಸನ್ಮಾನಿಸಿ ಅಭಿನಂದಿಸಿದ್ದರು. ಡಾ| ಪೂರ್ಣಿಮ ಸನ್ಮಾನಕ್ಕೆ ಉತ್ತರಿಸಿ ಮಾತನಾಡಿ ಡಾಕ್ಟರೇಟ್ ಪದವಿಗೇರಲು ಪಟ್ಟ ಶ್ರಮದ ಬಗ್ಗೆ ಸವಿಸ್ತಾರವಾಗಿ ವರ್ಣಿಸುತ್ತಾ “ಆಟಿ ತಿಂಗೊಲ್ದ್ ಒಂಜಿ ದಿನ” ಎಂಬ ಕವನವನ್ನು ವಾಚಿಸಿ ಎಲ್ಲರ ಮನ ಗೆದ್ದರು. ಮಾಜಿ ಅಧ್ಯಕ್ಷ ನ್ಯಾಯವಾದಿ ಆರ್.ಜಿ ಶೆಟ್ಟಿ, ಉಪಾಧ್ಯಕ್ಷ ದಿವಾಕರ ಎಮ್ ಶೆಟ್ಟಿ, ಪ್ರಭಾಕರ ಎಸ್ ಶೆಟ್ಟಿ, ಜ್ಯೋತಿ ಆರ್.ಶೆಟ್ಟಿ, ಸುಧಾಕರ ಜಿ. ಪೂಜಾರಿ, ಮಹಾಬಲ ಪೂಜಾರಿ, ಸಾಂತೂರು ಆಶೋಕ್ ಶೆಟ್ಟಿ, ಸಂಘದ ಕಾರ್ಯದರ್ಶಿ, ಸಂದೇಶ್ ಆರ್.ಶೆಟ್ಟಿ ಮೂಡುಬೆಳ್ಳೆ, ಡಿ.ಕೆಶೆಟ್ಟಿ, ರಾಜೇಶ್ ಆರ್ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಹಿಳಾ ವಿಭಾಗದ ಕಾರ್ಯಾದ್ಯಕ್ಷೆ ಯಶೋದ ಎಸ್.ಪೂಜಾರಿ ಹಾಗೂ ಸಾಂಸ್ಕೃತಿಕ ಸಮಿತಿ ಕಾಯಾಧ್ಯಕ್ಷೆ ಪ್ರಶಾಂತಿ ಡಿ.ಶೆಟ್ಟಿಯವರ ನೇತೃತ್ವದಲ್ಲಿ ಮಹಿಳಾ ಸದಸ್ಯರು “ಆಟಿ ತಿಂಗಳಲ್ಲಿ” ಮಾಡುವ ವಿವಿಧ ಬಗೆಯ ಅಡುಗೆಯನ್ನು ತಯಾರಿಸಿ ತಂದಿದ್ದರು. ಸವಿತಾ ಕೆ.ಶೆಟ್ಟಿ, ಶೈಲಾ ಸುಬಾಶ್ ಶೆಟ್ಟಿ, ಶೋಭಾ ಆರ್ ರೈ, ಜ್ಯೋತಿ ಆರ್.ಶೆಟ್ಟಿ, ಅನಿತಾ ಶೆಟ್ಟಿ, ಇಂದಿರಾ ಎಂ.ಪೂಜಾರಿ, ಪ್ರವೀಣ್ ಡಿ.ಸಾಲ್ಯಾನ್, ಭಾರತಿ ಬಿ.ಶೆಟ್ಟಿ, ಉಷಾ ಆರ್.ಸಾಲ್ಯಾನ್, ನಳಿನಿ ಪೂಜಾರಿ, ವಸಂತಿ ಕೊಟ್ಯಾನ್, ಸರೋಜ ಹೆಚ್.ಪೂಜಾರಿ, ಗೀತಾ ಎಸ್.ಪೂಜಾರಿ, ಗೀತಾ ಪಿ.ಸುವರ್ಣ, ನತಾಶಾ ಎಸ್.ಶೆಟ್ಟಿ, ಸುಜಾತ ಎ.ಶೆಟ್ಟಿ, ಸುಗುಣ ಶೆಟ್ಟಿ, ಕುಶಾಲ ಎ.ಬಂಗೇರ, ಜಯಂತಿ ಡಿ.ಶೆಟ್ಟಿ, ರೇಷ್ಮ ರಾಜೇಶ್ ಪೂಜಾರಿ, ಪ್ರಮೀಳಾ ಸಂದೇಶ್ ಶೆಟ್ಟಿ, ಮೋಹಿನಿ ಆನಂದ ಪೂಜಾರಿ, ಸುಲೋಚನ ಉಮೇಶ್ ಆಚಾರ್ಯ ಮತ್ತಿತರರು ಅಡುಗೆ ತಯಾರಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಕನ್ನಡ ಸೇವಾ ಸಂಘ ಪೊವಾಯಿ ಅಧ್ಯಕ್ಷ ರಮೇಶ್ ಡಿ.ರೈ ಕೈಯ್ಯಾರು ಸ್ವಾಗತಿಸಿ ಗಣ್ಯರನ್ನು ಗೌರವಿಸಿದರು. ಹಾಗೂ ಕಾರ್ಯಕ್ರಮಕ್ಕೆ ಸಹಕರಿಸಿದ ಉಮೇಶ್ ಜಿ.ಆಚಾರ್ಯ, ಆನಂದ ಆರ್.ಪೂಜಾರಿ, ದಾಬಾ ಜೆ.ಕೊಟ್ಯಾನ್, ಆಶೋಕ್ ಮೆಂಡನ್, ಜಿ.ಕೆ ಪಿಲೈ, ಅಶೋಕ್ ಎನ್.ಶೆಟ್ಟಿ, ಹರೀಶ್ ಪೂಜಾರಿ,ಅಡುಗೆ ತಯಾರಿಸಿದ ಮಹಿಳೆಯರಿಗೆ ಗೌರವಿಸಿದರು. ಪ್ರಶಾಂತಿ ಡಿ.ಶೆಟ್ಟಿಪ್ರಾರ್ಥನೆಯನ್ನಾಡಿದರು. ಅನಿತಾ ಎಸ್ ಶೆಟ್ಟಿ, ಹಾಗೂ ಪ್ರವೀಣ ಡಿ ಸಾಲ್ಯಾನ್ ಅಡುಗೆ ತಯಾರಿಸಿದ ಮಹಿಳೆಯ ಯಾದಿಯನ್ನು ಓದಿದರು.ಕಾರ್ಯದರ್ಶಿ ಸಂದೇಶ ಶೆಟ್ಟಿ ಕಾರ್ಯಕ್ರಮದ ಮಾಹಿತಿ ನೀಡಿದರು. ಸಾಂಸ್ಕ್ರತಿಕ ಸಮಿತಿ ಕಾರ್ಯಾಧ್ಯಕ್ಷ ನಾಗರಾಜ ಗುರುಪುರ ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಯಶೋಧ ಪೂಜಾರಿ ವಂದಿಸಿದರು. ಕಾರ್ಯಕ್ರಮದ ನಂತರ ಉಪಸ್ಥಿತರು ಆಟಿ ವೈವಿಧ್ಯತೆಯ ಭೋಜನಸವಿದರು.

By Suddi9

Leave a Reply

Your email address will not be published. Required fields are marked *