ಉಳ್ಳಾಲ: ಕಲ್ಲಿನ ಕ್ವಾರಿಯಲ್ಲಿ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಇರಾ ಸಮೀಪದ ಚೇಳೂರು ಗ್ರಾಮದ ಬಾವಲಿಗುರಿ ಕೆಐಎಡಿಬಿ ಸೈಟಿನಲ್ಲಿ ಭಾನುವಾರ ಮಧ್ಯಾಹ್ನ ವೇಳೆ ಸಂಭವಿಸಿದೆ.
ಚೇಳೂರು ಗ್ರಾಮದ ಮಜಿ ನಿವಾಸಿಗಳಾದ ಜಯಪ್ರಕಾಶ್ (22) ಮತ್ತು ದೀಕ್ಷಿತ್ (18) ಮೃತ ಯುವಕರು. ಭಾನುವಾರದ ರಜೆಯನ್ನು ಕಳೆಯಲು ಇಬ್ಬರು ಸೇರಿದಂತೆ ಅಕ್ಷಯ್, ನರೇಶ್, ಸುದೇಶ್, ಶೇಖರ್, ಸಂತೋಷ್ ಎಂಬವರ ತಂಡ ಮೂರು ಬೈಕುಗಳಲ್ಲಿ ಇರಾ ಕೆಐಎಡಿಬಿ ಸೈಟಿಗೆ ಸುತ್ತಾಡಲು ಬೆಳಿಗ್ಗೆ ತೆರಳಿದ್ದರು.
05

06

07 (1)

07

02
ಮಧ್ಯಾಹ್ನದ ಹೊತ್ತಿಗೆ ಬಾವಲಿಗುರಿಯಲ್ಲಿರುವ ಕಲ್ಲಿನಕ್ವಾರೆಯ ಬಳಿ ಕುಳಿತಿದ್ದು, ಈ ವೇಳೆ ಜಯಪ್ರಕಾಶ್ ಏಕಾಏಕಿ ನೀರಿಗೆ ಇಳಿದಿದ್ದರು. ಇದನ್ನು ಕಂಡು ದೀಕ್ಷಿತ್ ಕೂಡಾ ನೀರಿಗೆ ಇಳಿದಿದ್ದರು. ಆದರೆ 40 ಫೀಟ್ ಆಳದಲ್ಲಿ ನೀರಿದ್ದ ಹಿನ್ನೆಲೆಯಲ್ಲಿ ಇಬ್ಬರೂ ಮುಳುಗಿದ್ದರು. ಅವರನ್ನು ರಕ್ಷಿಸಲು ಶೇಖರ್ ಕೂಡಾ ಹಾರಿದ್ದು ಆತನೂ ಮುಳುಗುವುದನ್ನು ಕಂಡು ಸಂತೋಷ್ ಕೈಯಿಂದ ಎಳೆದು ರಕ್ಷಿಸಿದ್ದಾನೆ. ಮುಳುಗಿದ್ದ ಇಬ್ಬರಿಗೆ ಹಲವು ರೀತಿಯಲ್ಲಿ ಮೇಲಕ್ಕೆತ್ತಲು ಪ್ರಯತ್ನಿಸಿದರೂ ಫಲಕಾರಿಯಾಗಲಿಲ್ಲ. ದೀಕ್ಷಿತ್ ಅಸೈಗೋಳಿ ಐಟಿಐನ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದರೆ, ಜಯಪ್ರಕಾಶ್ ಟೈಲ್ಸ್ ಕೆಲಸ ನಿರ್ವಹಿಸುತ್ತಿದ್ದರು. ಜಯಪ್ರಕಾಶ್ ಸಹೋದರಿ ಹಾಗೂ ಹೆತ್ತವರನ್ನು ಮತ್ತು ದೀಕ್ಷಿತ್ ಸಹೋದರ ಹಾಗೂ ಹೆತ್ತವರನ್ನು ಅಗಲಿಕೊಂಡಿದ್ದಾರೆ. ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಡೆಬೇಲಿಯಿಲ್ಲದ ಕ್ವಾರಿ: ಜಿಲ್ಲಾಧಿಕಾರಿಗಳ ಆದೇಶದಂತೆ ಮುಡಿಪು ಭಾಗಗಳಲ್ಲಿ ಖಾಸಗಿ ಕ್ವಾರಿಗಳಿಗೆ ತಡೆಬೇಲಿಯನ್ನು ನಿರ್ಮಿಸಲಾಗಿದೆ . ಆದರೆ ಕೆಐಎಡಿಬಿ ಸೈಟಿನಲ್ಲಿರುವ ಕ್ವಾರಿಗೆ ತಡೆಗೋಡೆ ಇಲ್ಲದೇ ಇರುವುದರ ಪರಿಣಾಮ ಯುವಕರು ಸಾವನ್ನಪ್ಪಿದ್ದಾರೆ. ಇದರ ವಿರುದ್ಧ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ದೂರು ನೀಡುವುದಾಗಿ ಜಿಲ್ಲಾ ಪಂಚಾಯಿತಿ ಸದಸ್ಯ ಸಂತೋಷ್ ಕುಮಾರ್ ರೈ ಬೋಳಿಯಾರು ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *