ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಳದ ಆಸರೆಯಲ್ಲಿ ಪರಿಸರದ ವಿವಿಧ ಸಂಘ ಸಂಸ್ಥೆಗಳು, ಶಾಲೆಗಳ ಸಹಯೋಗದಲ್ಲಿ ಆಗಸ್ಟ್ 9ರ ಬೆಳಿಗ್ಗೆ 9.30ರಿಂದ ಕಟೀಲು ಸರಸ್ವತೀ ಸದನದಲ್ಲಿ ರಕ್ತದಾನ ಶಿಬಿರ ನಡೆಯಲಿದೆ.
ಕೆ.ಎಂ.ಸಿ. ಆಸ್ಪತ್ರೆ ಹಾಗೂ ವೆನ್ಲಾಕ್ ಆಸ್ಪತ್ರೆಗಳ ಆಶ್ರಯದಲ್ಲಿ ನಡೆಯಲಿರುವ ಈ ಶಿಬಿರವನ್ನು ಶ್ರೀ ಹರಿ ಆಸ್ರಣ್ಣ, ಈಶ್ವರ ಕಟೀಲ್ ಹಾಗೂ ಶಾಲೆಟ್ ಪಿಂಟೋ ಉದ್ಘಾಟಿಸಲಿದ್ದಾರೆ. ಕಟೀಲು ಭ್ರಾಮರಿಯ ಸನ್ನಿಧಿಯಲ್ಲಿ ಎಲ್ಲ ಭಕ್ತರಿಗೂ ರಕ್ತದಾನ ಮಾಡಲು ಅಪೂರ್ವ ಅವಕಾಶವಿದು ಎಂದು ಪ್ರಕಟನೆ ತಿಳಿಸಿದೆ.
