ಬಂಟ್ವಾಳ : ಇಲ್ಲಿನ ಖ್ಯಾತ ಶಿಲ್ಪಿ ಬಸ್ತಿ ಸದಾಶಿವ ಶೆಣೈ ಅವರು ಆರ್ಯಭಟ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅ.9ರಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯುವ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.
sadashivaಖ್ಯಾತ ಕಲಾಕಾರ ದಿ|ಬಸ್ತಿ ಸುರೇಂದ್ರ ಶೆಣೈ ಅವರ ಪುತ್ರರಾಗಿರುವ ಬಸ್ತಿ ಸದಾಶಿವ ಶೆಣೈ ಅವರು ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರೂ ಆಗಿದ್ದು ಜಿಲ್ಲೆಯ ವಿವಿಧ ಕಡೆಗಳಲ್ಲಿ ಸಾರ್ವಜನಿಕವಾಗಿ ಆರಾ„ಸಲ್ಪಡುವ ಶ್ರೀ ಗಣೇಶ ಮತ್ತು ಶ್ರೀ ಶಾರದಾ ಮಾತೆಯ ಮಣ್ಣಿನ ವಿಗ್ರಹದ ರಚನೆಕಾರರೂ ಆಗಿದ್ದಾರೆ. ತನ್ನ ತಂದೆಯ ಕಾಲದಿಂದಲೂ ಕಲಾಕೃತಿಗಳಲ್ಲಿ ತೊಡಗಿಸಿಕೊಂಡಿರುವ ಇವರು ಈಗಾಗಲೇ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದುಕೊಂಡಿದ್ದು ಇದೀಗ ಆರ್ಯಭಟ ಪ್ರಶಸ್ತಿಗೂ ಪಾತ್ರರಾಗಿದ್ದಾರೆ. ಶಿಲ್ಪಕಲೆ ಮಾತ್ರವಲ್ಲದೆ ಮರದ ಕೆತ್ತನೆ, ಗೋಪುರಗಳಲ್ಲೂ ಶಿಲ್ಪ ಕೆತ್ತನೆಗಳು ಮೆಚ್ಚುಗೆಗೆ ಪಾತ್ರವಾಗಿದೆ.

By Suddi9

Leave a Reply

Your email address will not be published. Required fields are marked *