ಕೈಕಂಬ: ಕಿನ್ನಿಕಂಬಳ ರೋಸಾಮಿಸ್ತಿಕಾ ಫ್ರೌಡ ಶಾಲಾ ವಾರ್ಷಿಕ ಮಹಾಸಬೆಯು ಇತ್ತಿಚೆಗೆ ರೋಸಾ ಮಿಸ್ತಿಕಾ ಸಭಾಂಗಣದಲ್ಲಿ ಜರಗಿತು.
ಸಂಪನ್ಮೂಲವ್ಯಕ್ತಿಯಾಗಿ ಇನ್ನಾ ಶಿಕ್ಷಣ ತಜ್ಝ ರಾಜೇಂದ್ರ ಭಟ್ ಅವರು ಭಾಗವಹಿಸಿದ್ದರು.

ಪ್ರತಿಯೊಬ್ಬ ಪೋಷಕರು ಮಕ್ಕಳಲ್ಲಿ ಪ್ರೀತಿಯಿಂದ ನಂಬಿಕೆಯಿಟ್ಟು ಶಾಲೆಗೆ ಕಳುಹಿಸಿ ಮಕ್ಕಳನ್ನು ಹೆದರಿಸದೆ ಗದರಿಸದೆ ಓದಲು ಪ್ರೇರೆಪಿಸಿದಾಗ ಮಾತ್ರ ಮಕ್ಕಳು ಒಳ್ಳೆಯ ಶಿಕ್ಷಣ ಪಡೆಯುತ್ತಾರೆ. ಅಪ್ಪ ಅಮ್ಮ ಕೇವಲ ರಿಯಾಲಿಟಿ ಷೋ ಅಲ್ಲ ನಿಜವಾದ ಅಪ್ಪ ಅಮ್ಮ ಆಗಲು ಬಹಳ ಕಷ್ಟವಿದೆ.ಎಂದು ಹೆತ್ತವರಿಗೆ ಕಿವಿ ಮಾತು ಹೇಳಿದರು. ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಮೌಲ್ಯಗಳನ್ನು ತುಂಬಿಸಬೇಕು ಎಂದು ಸಂಪನ್ಮೂಲವ್ಯಕ್ತಿಯಾಗಿ ಆಗಮಿಸಿದ ಅವರು ಮಾತನಾಡಿದರು.
ಅವರು ರೋಸಾಮಿಸ್ತಿಕಾ 2015-16ರಶಾಲಿನ ಶಿಕ್ಷಕ ರಕ್ಷಕರ ವಾರ್ಷಿಕ ಮಹಾಸಭೆಯಲ್ಲಿ ವಿದ್ಯಾರ್ಥಿಗಳಲ್ಲಿ ಪೋಷಕರು ಹಾಗೂ ಶಿಕ್ಷಕರ ಒಡನಾಟ ಹೇಗಿರಬೇಕೆಂದು ತಿಳಿ ಹೇಳಿದರು.
ಶಾಲಾ ಮುಖ್ಯಸ್ಥೆ ಕನ್ಸೆಟಾ ಮುಖ್ಯೋಪಧ್ಯಾಯಿನಿ ಭಗಿನಿ ಮೋರಿಸ್, ಕಾನ್ವೆಂಟ್ಭಗಿನಿ ಜುಲಿಯಾನ ಶಿಕ್ಷಕರಕ್ಷಕ ಸಂಘದ ಉಪಾಧ್ಯಕ್ಷ ರಾಜೇಂದ್ರ ಕಿನ್ನಿಕಂಬಳ ಉಪಸ್ಥಿತರಿದ್ದರು.






