ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆ ಸಮೀಪದ ಕಲ್ಕುರಿಪದವು ಎಂಬಲ್ಲಿ ವರದಕ್ಷಿಣೆ ತರುವಂತೆ ಆಗ್ರಹಿಸಿ ಪತ್ನಿ ಮೇಲೆ ಹಲ್ಲೆ ಮತ್ತು ನಿರಂತರ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ತನ್ನ ಪತಿ ಮತ್ತು ಅತ್ತೆ ವಿರುದ್ಧ ದೂರು ಸಲ್ಲಿಸಲು ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ಸೋಮವಾರ ನಡೆದಿದೆ.
ಆರೋಪಿಯನ್ನು ಪುತ್ತೂರಿನ ರಿಕ್ಷಾ ಚಾಲಕ ಮಹಮ್ಮದ್ ರಫೀಕ್ ಎಂದು ಗುರುತಿಸಲಾಗಿದ್ದು, ಈತನ ಹುಡುಕಾಟಕ್ಕೆ ಪುಂಜಾಲಕಟ್ಟೆ ಪೊಲೀಸರು ಬಲೆ ಬೀಸಿರುವುದಾಗಿ ತಿಳಿಸಿದ್ದಾರೆ.
ಕಳೆದ 12 ವರ್ಷಗಳ ಹಿಂದೆಯಷ್ಟೇ ಪುತ್ತೂರಿನ ಮಹಮ್ಮದ್ ರಫೀಕ್ ಎಂಬಾತನು ಇಲ್ಲಿನ ಕಲ್ಕುರಿಪದವು ನಿವಾಸಿ ಸಫಿಯಾ ಎಂಬಾಕೆಯನ್ನು ವಿವಾಹವಾಗಿದ್ದು, ಮೂವರು ಮಕ್ಕಳು ಇದ್ದಾರೆ. ಆ ಬಳಿಕ ಈತನು ತನ್ನ ತಾಯಿಯೊಂದಿಗೆ ಸೇರಿಕೊಂಡು ನಿರಂತರವಾಗಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿ ವರದಕ್ಷಿಣೆ ತರುವಂತೆ ಸತಾಯಿಸುತ್ತಿದ್ದಾನೆ ಎಂದು ಆರೋಪಿಸಲಾಗಿದೆ. ಇದಕ್ಕಾಗಿ ಕಳೆದ ಆರು ವರ್ಷಗಳಿಂದ ಸಫಿಯಾ ಸಿದ್ಧಕಟ್ಟೆ ಸಮೀಪದ ಕಲ್ಕುರಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *