ಬಂಟ್ವಾಳ: ಯುವಕಾಂಗ್ರೆಸ್ ಮುಖಂಡ ದಿ. ಬೊಂಡಾಲ ಜಗನ್ನಾಥ ಶೆಟ್ಟಿಯವರ 3ನೇ ಪುಣ್ಯ ತಿಥಿಯ ಪ್ರಯುಕ್ತ ಬಂಟ್ವಾಳ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಅಗ್ರಾಹಾರ್‍ನ ಸರ್ಕಾರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ ನೀರಿನ ಟ್ಯಾಂಕನ್ನು ಕೊಡುಗೆಯಾಗಿ ನೀಡಲಾಯಿತು.
ಈ ಸಂದರ್ಭ ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಮಾತನಾಡಿ ಬೊಂಡಾಲ ಜಗನ್ನಾಥ ಶೆಟ್ಟಿಯವರಿಗೆ ಮಕ್ಕಳ ಮೇಲೆ ಅಪಾರ ಪ್ರೀತಿಯಿತ್ತು. ಶಾಲಾ ಮಕ್ಕಳ ವಿಧ್ಯಾಭ್ಯಾಸಕ್ಕಾಗಿ ಅವರು ನಿರಂತರ ಶ್ರಮವಹಿಸಿದ್ದರು. ಅವರ ಸ್ಮರಣಾರ್ಥ ಯುವಕಾಂಗ್ರೆಸ್ ಶಾಲೆಗೆ ನೀರಿನ ಟ್ಯಾಂಕ್‍ನ ಕೊಡುಗೆ ನೀಡಿರುವುದು ಅಭಿನಂದನೀಯ ಎಂದರು.
BTW_JULY31_15
ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ಬಾಸ್ ಅಲಿ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಪುರಸಭಾಧ್ಯಕ್ಷೆ ವಸಂತಿ ಚಂದಪ್ಪ, ಉಪಾಧ್ಯಕ್ಷೆ ಯಾಸ್ಮೀನ್, ಸದಸ್ಯ ಸದಾಶಿವ ಬಂಗೇರಾ, ಬಂಟ್ವಾಳ ಯುವಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ಕಾರ್ಯದರ್ಶಿ ಆಲ್ವಿನ್ ಪ್ರಶಾಂತ್ ಪಿಂಟೋ, ಮಾಜಿ ಅಧ್ಯಕ್ಷ ವಿಶ್ವನಾಥ ಗೌಡ ಮಣಿ, ಸದಸ್ಯರಾದ ಮಹಮ್ಮದ್ ನಂದಾವರ, ನಿಸಾಫ್ ಝಕಾರಿಯಾ ತುಂಬೆ, ಮುನಾವರ್, ಶಾಲಾ ಮುಖ್ಯ ಶಿಕ್ಷಕಿ ಆಡ್ರಿನ್ ಡಿಸೋಜಾ, ಸಹಶಿಕ್ಷಕಿ ಜೆಸಿಂತಾ ವಾಝ್ ಹಾಜರಿದ್ದರು.
ಯುವಕಾಂಗ್ರಸ್ ಜಿಲ್ಲಾ ಸಮಿತಿ ಉಪಾಧ್ಯಕ್ಷ ಲುಕ್‍ಮನ್ ಬಂಟ್ವಾಳ ಸ್ವಾಗತಿಸಿ, ವಂದಿಸಿ, ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *