ಬಂಟ್ವಾಳ ತಾಲೂಕಿನ ಹಾಸನ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಬಿ.ಸಿ.ರೋಡ್ ರಸ್ತೆಗೆ ಹೆಸರಿಡುವ ಕುರಿತು ತಾಲೂಕಿನಲ್ಲಿ ವಿವಿಧ ಸಂಘಟನೆ ಮತ್ತು ಜಾತಿ ಸಮುದಾಯಗಳಿಂದ ತಮ್ಮ ತಮ್ಮ ಮುಖಂಡರ ಹೆಸರಿಡುವ ಬಗ್ಗೆ ಮನವಿಗಳು ಮತ್ತು ಒತ್ತಡಗಳು ಹೆಚ್ಚಾಗುತ್ತಿದ್ದು ಯಾವ ಹೆಸರಿಡಬೇಕೆಂಬ ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ.

ಈ ನಿಟ್ಟಿನಲ್ಲಿ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಪಡೆದ ರಾಷ್ಟ್ರಭಕ್ತ ನಾಯಕನಾದ ಮಾಜಿ ರಾಷ್ಟ್ರಪತಿ ಡಾ|| ಎಪಿಜೆ ಅಬ್ದುಲ್ ಕಲಾಂರವರ ಹೆಸರನ್ನು ಇಡುವುದರ ಮುಖಾಂತರ ರಾಷ್ಟ್ರಭಕ್ತನಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಸಂಗಬೆಟ್ಟು ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಭಾಕರ ಪ್ರಭುರವರು ಪತ್ರಿಕಾ ಪ್ರಕಟಣೆಯ ಮುಖಾಂತರ ರಾಜಕೀಯ ಹಾಗೂ ಸಂಘಟಕರ ಮುಖಂಡರನ್ನು ಈ ಮೂಲಕ ಒತ್ತಾಯಿಸಿದ್ದಾರೆ
