ಕೈಕಂಬ: ಸುಮಾರು 40 ವರ್ಷಗಳ ಕಾಲ ಪೊಳಲಿ ವಿದ್ಯಾ ವಿಲಾಸ ಶಾಲೆಯಲ್ಲಿ ಸಹಾಯಕ ಅಧ್ಯಾಪಕರಾಗಿ,ಮುಖ್ಯೋಪಧ್ಯಾಯರಾಗಿ ಕರ್ತವ್ಯ ನಿರ್ವಹಿಸಿ ಇದೀಗ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದಲ್ಲಿ ಅನಿರೀಕ್ಷಿತ ಸಂದರ್ಭದಲ್ಲಿ ಅರ್ಚಕರಾಗಿಯೂ, ಅಡ್ಡೂರು ಮುಖ್ಯಪ್ರಾಣ ದೇವಸ್ಥಾನದ ಅರ್ಚಕರಾಗಿ ಯಾವುದೇ ಫಲಾಫೇಕ್ಷೆ ಇಲ್ಲದೇ ಅರ್ಚಕ ವೃತ್ತಿಯನ್ನು ಮಾಡುತ್ತಿದ್ದರು.
ಪೊಳಲಿಯಲ್ಲಿ ಬ್ರಾಹ್ಮಣ ಸಮಾಜವನ್ನು ಒಟ್ಟುಗೂಡಿಸುವಲ್ಲಿ ಕೂಟಜಗತ್ತು ಸಾಮಾಜಿಕ ಕೆಲಸಗಳಲ್ಲಿ ತನ್ನನ್ನು ಸಕ್ರೀಯವಾಗಿ ತೊಡಗಿಸಿಕೊಂಡು ಎಲ್ಲಾ ವೈದಿಕ ವೃತ್ತಿಯನ್ನು ಮಾಡುತ್ತಾ ಸೇವೆ ಗೈದಿದ್ದ ಅಡ್ಡೂರು ನಡುಮನೆ ನಾರಾಯಣ ಭಟ್ಟರು( 79) ಜು.28ರಂದು ಸಾಯಂಕಾಲ 5ಗಂಟೆಗೆ ಹೃದಯಘಾತದಿಂದ ತಮ್ಮ ಸ್ವಗ್ರಹದಲ್ಲಿ ನಿಧನಹೊಂದಿದರು.
ಅವರಿಗೆ ಪತ್ನಿ ಮೂವರು ಪುತ್ತರು ಹಾಗೂ ಒರ್ವ ಪುತ್ರಿಯನ್ನು ಅಗಲಿದ್ದಾರೆ.


