ಬಜ್ಪೆ: ಕುಪ್ಪೆಪದವು ಸಮೀಪದ ಲಿಂಗಪ್ಪ ಕುಂದರ್ ಎಂಬವರ ಪತ್ನಿ ವೀಣಾ ಎಂಬವರು ಜು.26ರಿಂದ ಕಾಣೆಯಾಗಿದ್ದಾರೆ.
ಕಾಣೆಯಾಗುವ ಮುಂಚೆ ವೀಣಾ ಅವರು ನೆರೆಕರೆಯವರ ಪೈಕಿ ಒಬ್ಬರಲ್ಲಿ ಬಿ.ಸಿ.ರೋಡಿಗೆ ಹೋಗಿರುವುದಾಗಿಯೂ ಮತ್ತೊಬ್ಬರಲ್ಲಿ ಸೊರ್ನಾಡಿಗೆ ಹೋಗಿರುವುದಾಗಿಯೂ ತಿಳಿಸಿದ್ದರು. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಇವರು ನಾಪತ್ತೆಯಾಗಿರುವ ಸಾಧ್ಯತೆ ಇದೆ ಎಂದು ಬಜ್ಪೆ ಠಾಣೆ(08242220531) ಯಲ್ಲಿ ಪ್ರಕರಣ ದಾಖಲಾಗಿದೆ
