ಬಂಟ್ವಾಳ:ತುಳುನಾಡಿನಲ್ಲಿ ಕೃಷಿ ಚಟುವಟಿಕೆ ಜೊತೆಗೆ ಆಟಿ ತಿಂಗಳಿನಲ್ಲಿ ಪ್ರಕೃತಿದತ್ತವಾಗಿ ಸಿಗುವ ವಿವಿಧ ಔಷಧೀಯ ಗುಣ ಹೊಂದಿರುವ ಆಹಾರ ಪದಾರ್ಥಗಳನ್ನು ಸೇವಿಸುವ ಮೂಲಕ ಕೃಷಿಕರು ಯುವಜನತೆಗೆ ಸೂಕ್ತ ಮಾರ್ಗದರ್ಶನ ಒದಗಿಸಿದ್ದಾರೆ ಎಂದು ಉಪನ್ಯಾಸಕಿ ಕವಿತಾ ಯಾದವ್ ಅಗ್ರಬೈಲು ಹೇಳಿದ್ದಾರೆ
‘ಆಟಿಡೊಂಜಿ ಗಮ್ಮತ್ತ್’ ಕಾರ್ಯಕ್ರಮದಲ್ಲಿ ಸ್ಥಳೀಯ ಸಾಧಕರನ್ನು ಸನ್ಮಾನಿಸಲಾಯಿತು.
![]()
ಬಂಟ್ವಾಳ ತಾಲ್ಲೂಕಿನ ನೆತ್ರಕೆರೆ ನೇತ್ರಾವತಿ ಮಾತೃ ಮಂಡಳಿ ವತಿಯಿಂದ ಈಚೆಗೆ ನಡೆದ 5 ನೇ ವರ್ಷದ ‘ಆಟಿಡೊಂಜಿ ಗಮ್ಮತ್ತ್’ ಕಾರ್ಯಕ್ರಮದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.
ಸಾಮಾಜಿಕ ಕಾರ್ಯಕರ್ತೆ ಪ್ರತಿಭಾ ಪಿ.ಶೆಟ್ಟಿ ಪಲ್ಲಮಜಲು ಕಾರ್ಯಕ್ರಮ ಉದ್ಘಾಟಿಸಿದರು. ಪ್ರಮುಖರಾದ ಭಾರತಿ ಸೇಸಪ್ಪ ಮೂಲ್ಯ ತುಂಬೆ, ಪಿ.ಕೆ.ಪದ್ಮನಾಭ ಬಿ.ಸಿ.ರೋಡ್, ಮಾತೃ ಮಂಡಳಿ ಅಧ್ಯಕ್ಷೆ ಹರಿಣಾಕ್ಷಿ ಸದಾನಂದ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಭಾಸ್ಕರ್ ಎನ್., ನವೋದಯ ಮಿತೃ ಕಲಾ ವೃಂದ ಅಧ್ಯಕ್ಷ ರವೀಂದ್ರ ಎನ್., ದಾಮೋದರ್ ನೆತ್ರಕೆರೆ, ವಿದ್ಯಾ ಚಂದ್ರ ಶೇಖರ್, ಲಲಿತಾ ಸುಂದರ್ ಮತ್ತಿತರರು ಇದ್ದರು.
