ಗುರುಪುರ ವಲಯದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಂಗಳೂರು ತಾಲೂಕಿನ ಗುರುಪುರ ವಲಯದ ಪ್ರಗತಿಬಂದು ಸ್ವ-ಸಹಾಯ ಸಂಘಗಳ ಒಕ್ಕೂಟ ಹಾಗೂ ಜೌನವಿಕಾಸ ಕೇಂದ್ರ ಗುರುಪುರ ವಲಯ ಇದರ ಜಂಟಿ ಆಶ್ರಯದಲ್ಲಿ ಆಟಿಡೊಂಜಿದಿನ ಕಾರ್ಯಕ್ರಮವು ಮಂಗಳಜೋತಿ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಇದರ ಉದ್ಘಾಟನೆಯನ್ನು ಸತೀಶ್ ಶೆಟ್ಟಿ ಮೂಡುಜೆಪ್ಪುಗುತ್ತು ಚೆನ್ನೆಮನೆ ಆಡುವ ಮೂಲಕ ಉದ್ಘಾಟಿಸಿದರು.

DSC_0158
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಿರ್ವೈಲ್ ಗ್ರಾಮದ ಕಾರ್ಫೊರೆಟರ್ ಹೇಮಲತಾ ರಘು ಸಾಲ್ಯಾನ್ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಶರತ್ ಶೆಟ್ಟಿ ಪಡ್ಪಲಿ ಮಾತನಾಡಿದರು. ವೇದಿಕೆಯಲ್ಲಿ ಧ.ಗ್ರಾ.ಯೋಜನೆಯ ನಿರ್ದೇ ದಶಕರಾದ ಸುಧೀರ್ ಕುಮಾರ್ ಯೋಜನಾದಿಕಾರಿ ರಾಘವ ಎಂ, ಪ್ರಾಂಶುಪಾಲರಾದ ನರೇಂದ್ರ, ಉಮೇಶ್ ಶೆಟ್ಟಿ ಹೊಸಲಕ್ಕೆ , ಶೇಖರ ಕಡ್ತಲ ಉಪಸ್ಥಿತರಿದ್ದರು.

ಸಮರೋಪ ಸಮಾರಂಭದಲ್ಲಿ ಜಯಪ್ರಕಾಶ್ ಭಂಡಾರಿ, ಯಾಧವ ಕುಂದರ್, ಶಾಲಿನಿ ಶೇಖರ್ ಹಾಗೂ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.,  ಮೇಲ್ವಚಾರಕರಾದ ಕೃಷ್ಣಪ್ಪ ಸ್ವಾಗತಿಸಿ ,  ಸಂದ್ಯ ನಿರೂಪಿಸಿದರು.  ಶಾಲಿನಿ ಧನ್ಯವಾದವಿತ್ತರು.

By Suddi9

Leave a Reply

Your email address will not be published. Required fields are marked *