ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ತುಂಬೆ ಸಮೀಪದ ನೇತ್ರಾವತಿ ನದಿ ಸಂಪರ್ಕಿಸುವ ಖಾಸಗಿ ಜಮೀನಿನಲ್ಲಿ ಬೇಸಿಗೆಯಲ್ಲಿ ಸಂಗ್ರಹಿಸಿದ್ದ ಮರಳನ್ನು ಸಾಗಿಸಲು ಯತ್ನಿಸುತ್ತಿದ್ದಾಗ ಇಲ್ಲಿನ ತಹಶೀಲ್ದಾರ್ ಸೂಚನೆಯಂತೆ ಪಿಡಿಒ ಶಿವಾನಂದ ಮತ್ತು ಗ್ರಾಮ ಲೆಕ್ಕಾಧಿಕಾರಿ ಪ್ರದೀಪ್ ತಡೆದು ನಿಲ್ಲಿಸಿದ ಘಟನೆ ಮಂಗಳವಾರ ನಡೆದಿದೆ.
ಇಲ್ಲಿನ ಖಾಸಗಿ ವ್ಯಕ್ತಿಯೊಬ್ಬರ ಜಮೀನಿನಲ್ಲಿ ಮರಳನ್ನು ಸಂಗ್ರಹಿಸಲಾಗಿದ್ದು, ಮಂಗಳೂರಿನ ಬಿಲ್ಡರ್ಗಳಿಗೆ ಮಂಗಳವಾರ ಟಿಪ್ಪರ್ ಮೂಲಕ ಸಾಗಿಸಲು ಯತ್ನಿಸಲಾಗಿತ್ತು. ಇದೇ ವೇಳೆ ತಹಶೀಲ್ದಾರ್ ಪುರಂದರ ಹೆಗ್ಡೆ ಸೂಚನೆಯಂತೆ ಈ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುವಷ್ಟರಲ್ಲಿ ಒಂದು ಲೋಡ್ ಮರಳು ಸಾಗಾಟ ಆಗಿತ್ತು. ಇನ್ನೊಂದು ಟಿಪ್ಪರ್ನಲ್ಲಿ ಮರಳು ತುಂಬಿಸುತ್ತಿರುವ ವೇಳೆ ಅದನ್ನು ತಡೆಯಲಾಯಿತು ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *