ಪೊಳಲಿ: ಮಹಿಳೆಯರು ತಮ್ಮ ಮನೆಯ ಮಕ್ಕಳಿಗೆ ತಮ್ಮ ಆಚಾರ ವಿಚಾರದ ಬಗ್ಗೆ ತಿಳಿ ಹೇಳಿ ಒಳ್ಳೆಯ ಸಂಸ್ಕೃತಿ ನೀಡಿ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಬೇಕು ಎಂದು ಪೊಳಲಿ ರಾಮಕೃಷ್ಣತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಅವರು ಹೇಳಿದರು.

ನಮ್ಮ ದೇಶದಲ್ಲಿ ಮೊದಲ ಸ್ಥಾನವನ್ನು ಮಹಿಳೆಯರಿಗೆ ನೀಡಿದ್ದೇವೆ ಹಲವು ಮಹಾಪುರುಷರನ್ನು ಹೆತ್ತ ತಾಯಿ ಮಹಿಳೆ. ಗೃಹಿಣಿಯರು ಮನಸ್ಸು ಮಾಡಿದರೆ ನಮ್ಮ ದೇಶದಲ್ಲಿ ಆಗುವಂತಹ ಅತ್ಯಾಚಾರ, ಭ್ರಷ್ಟಾಚಾರ, ಮಧ್ಯಪಾನದಂತಹ ಮಾರಕ ರೋಗಗಳಿಗೆ ತಡೆಗಟ್ಟಲು ಸಾಧ್ಯ ಇದಕ್ಕೆ ಕಡಿವಾಣ ಹಾಕಲು ತಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕಾರದಲ್ಲಿ ಬಾಳ್ವೆ ನಡೆಸಲು ಪ್ರೇರಿಪಿಸಬೇಕು ಎಂದು ಹಿತನುಡಿ ನುಡಿದರು.
ಅವರು ಜು.19ರಂದು ಪೊಳಲಿ ರಾಮಕೃಷ್ಣತಪೋವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ತುಂಬೆ ವಲಯದ ಆಶ್ರಯದಲ್ಲಿ ಜರಗಿದ ಮಹಿಳಾ ಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಥಮವಾಗಿ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಮುಖ್ಕ ದ್ವಾರದಿಂದ ಸವ-ಸಹಾಯ ಸಂಘದ ಮಹಿಳಾ ಕಾರ್ಯಕರ್ತೆಯರು ಘೊಷನೆಗಳನ್ನು ಕೂಗುತ್ತಾ ಮೆರವಣಿಗೆಯಲ್ಲಿ ಆಗಮಿಸಿದರು.
ಜಾತ್ರೆಯ ಸಂದರ್ಭದಲ್ಲಿ ಸಭೆ ಸೇರಲು ಫಿಲ್ಮ್ ಡ್ಯಾನ್ಸ್, ಆರ್ಕೆಸ್ಟ್ರಾ ನಾಟಕದಂತಹ ಕಾರ್ಯಕ್ರಮಗಳನ್ನು ಇಟ್ಟು ಜನರನ್ನು ಸೆಳೆಯುವಂತಹ ಕೆಟ್ಟಚಾಲಿ ಆರಂಭವಾಗಿದೆ ಆದರೆ ಇಲ್ಲಿಯ ಮಹಿಳೆಯರು ಅದನ್ನು ಸುಳ್ಳು ಎಂದೂ ನಿರೂಪಿಸಿದ್ದಿರಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದೀರಿ ತಮ್ಮ ಮಕ್ಕಳನ್ನು ಸಮಾಜದಲ್ಲಿ ಒಳ್ಳೆಯ ರೀತಿಯಲ್ಲಿ ಬಾಳ್ವೆ ನಡೆಸಲು ತಮ್ಮ ಮನೆಯ ಕುಟುಂಬ ವ್ಯವಸ್ಥೆಯಂದ ಸಂಸ್ಕಾರ ಉಳಿಯಲು ಸಾಧ್ಯ ಎಂದು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ನ್ಯಾಯವಾದಿ ಆಶಾಪ್ರಸಾದ್ ರೈ ಹೇಳಿದರು.
ಸಮಾವೇಶದ ಅಧ್ಯಕ್ಷತೆಯನ್ನು ಕರಿಯಂಗಳ ಗ್ರಾಮ ಪಂಚಾಯತಿ ಅಧ್ಯಕ್ಷೆ ಚಂದ್ರಾವತಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ. ಕ್ಷೇ.ಧ,ಗ್ರಾ,ಯೋ. ಯೋಜನಾಧಿಕಾರಿ ಸುನೀತಾ ನಾಯಕ್, ಬಂಟ್ವಾಳ ಜನಜಾಗೃತಿ ವೇದಿಕೆಯ ಅಧ್ಯಕ್ಷ ಕಿರಣ್ ಹೆಗ್ಡೆ, ತುಂಬೆ ವಲಯದ ಅಧ್ಯಕ್ಷ ಮಾಧವ ಎಂ ಪೂಜಾರಿ, ಶ್ರೀ ರಾಜೇಶ್ವರೀ ಮಹಿಳಾ ಮಂಡಳಿ ಅಧ್ಯಕ್ಷೆ ಕಮಾಲಾಕ್ಷಿ ರಾವ್ ಉಪಸ್ಥಿತರಿದ್ದರು. ನಿಶಾ ಸ್ವಾಗತಿಸಿ ರೇಖಾ ಧನ್ಯವಾದವಿತ್ತರು. ವಿನಾಯಕ ನಿರೂಪಿಸಿದರು.












