ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಫರಂಗಿಪೇಟೆಯಲ್ಲಿ ಗುಡ್ಡ ಕುಸಿದು ಮೂವರು ಕಾರ್ಮಿಕರು ಸಾವನ್ನಪ್ಪಿದ ಸ್ಥಳಕ್ಕೆ ಆರೋಗ್ಯ ಸಚಿವ ಯು.ಟಿ.ಖಾದರ್ ಗುರುವಾರ ಭೇಟಿ ನೀಡಿ ಮತ್ತೆ ಭೂ ಕುಸಿತ ಭೀತಿ ಎದುರಿಸುತ್ತಿರುವ ಜುಮಾದಿಗುಡ್ಡೆ ನಿವಾಸಿಗಳನ್ನು ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಮಂಗಳೂರು ಸಹಾಯಕ ಆಯುಕ್ತ ಡಾ. ಅಶೋಕ್, ಜಿ.ಪಂ. ಮಾಜಿ ಸದಸ್ಯ ಉಮ್ಮರ್ ಫಾರೂಕ್, ತಾ.ಪಂ.ಸದಸ್ಯ ಆಸೀಫ್ ಇಕ್ಬಾಲ್, ಗ್ರಾ.ಪಂ.ಅಧ್ಯಕ್ಷೆ ಲಕ್ಷ್ಮೀ, ಉಪಾಧ್ಯಕ್ಷ ಮಹಮ್ಮದ್ ಶರೀಫ್, ಎಂಜಿನಿಯರ್ ನರೇಂದ್ರ ಬಾಬು, ಗ್ರಾಮಕರಣಿಕ ಪ್ರದೀಪ್ ಮತ್ತಿತರರು ಇದ್ದರು.
