ಮೂಡುಬಿದಿರೆ : ನಿರ್ದಿಷ್ಟ ಗುರಿ ಮತ್ತು ಕಠಿಣ ಪರಿಶ್ರಮದಿಂದ ಮಾತ್ರ ಯಾವುದೇ ಸಾಧನೆ ಮಾಡಲು ಸಾಧ್ಯ. ಇದೇ ನಿಲುವಿನೊಂದಿಗೆ ನಿರಂತರ ಕಠಿಣ ಪರಿಶ್ರಮದಿಂದ ಸಾಧನೆಯ ಹಾದಿಯಲ್ಲಿ ಈ ಹಂತಕ್ಕೆ ಮುಟ್ಟಿದ್ದೇನೆ ಮುಂದಿನ ಹಾದಿ ಬಹಳ ಕಠಿಣವಿದೆ ಆದರೂ ನಿಮ್ಮೆಲ್ಲರ ಆಶೀರ್ವಾದದಿಂದ ಮುಂಬರುವ ಓಲಂಪಿಕ್ಸ್‍ನಲ್ಲಿ ಶಾಟ್‍ಪುಟ್‍ನಲ್ಲಿ ಚಿನ್ನದ ಪದಕಗೆಲ್ಲುವ ಗುರಿ ಹೊಂದಿದ್ದೇನೆ ಎಂದು ಅಂತರಾಷ್ಟ್ರೀಯ ಅಥ್ಲೀಟ್ ಇಂದ್ರಜಿತ್ ಸಿಂಗ್ ಹೇಳಿದರು.

ಕ್ರೀಡಾರಂಗದಲ್ಲಿ ತನ್ನನ್ನು ಪ್ರಾಯೋಜಿಸುತ್ತಿರುವ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಗುರುವಾರ ಅಪರಾಹ್ನ ವಿದ್ಯಾಗಿರಿಯ ನುಡಿಸಿರಿ ವೇದಿಕೆಯಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಆಳ್ವಾಸ್ ಶಿಕ್ಷಣ ಸಂಸ್ಥೆಯ ಡಾ.ಎಂ.ಮೋಹನ ಆಳ್ವರು ಸಾಧನೆಗೆ ಪ್ರೋತ್ಸಾಹ ನೀಡುತ್ತಿರುವುದಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು.
16 mood indrajith sing sanmana (2)

16 mood indrajith sing sanmana (1)

ಸನ್ಮಾನ : ದ.ಕ. ಕೊರಿಯಾದಲ್ಲಿ ನಡೆದ ವಿಶ್ವ ಮಟ್ಟದ ಅಂತರ್ ವಿವಿ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿ 75 ವರ್ಷಗಳ ಬಳಿಕ ದೇಶಕ್ಕೆ ಚಿನ್ನವನ್ನು ತಂದು ಕೊಟ್ಟ ಹಿನ್ನಲೆಯಲ್ಲಿ ಕ್ರೀಡಾಭಿಮಾನಿಗಳ ಸಹಕಾರದೊಂದಿಗೆ ಆಳ್ವಾಸ್ ವತಿಯಿಂದ ರೂ 5 ಲಕ್ಷ ನಗದು ಸಹಿತ ಶಾಲು-ಹಾರ ಸ್ಮರಣಿಕೆಗಳೊಂದಿಗೆ ಇಂದ್ರಜಿತ್ ಸಿಂಗ್ ಮತ್ತು ತರಬೇತುದಾರ ಪ್ರೀತಮ್ ಸಿಂಗ್ ಅವರನ್ನು ಡಾ.ಎಂ.ಮೋಹನ್ ಆಳ್ವ ಸಹಿತ ಗಣ್ಯರು ಸನ್ಮಾನಿಸಿದರು.

ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ, ಪುರಸಭಾಧ್ಯಕ್ಷೆ ರೂಪಾ.ಎಸ್.ಶೆಟ್ಟಿ, ಅಂತರಾಷ್ಟ್ರೀಯ ಕ್ರೀಡಾಪಟು ರೋಹಿತ್ ಕುಮಾರ್ ಕಟೀಲ್, ಉದ್ಯಮಿಗಳಾದ ಶ್ರೀಪತಿ ಭಟ್ ಮತ್ತು ನಾರಾಯಣ ಪಿ.ಎಂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಇಂದ್ರಜಿತ್ ಸಿಂಗ್ ಅವರು ಅಖಿಲ ಭಾರತ ವಿವಿ ಕ್ರೀಡಾಕೂಟದಲ್ಲಿ ಸ್ಪರ್ಧಿಸಲು ತೆರಳಿದ್ದಾಗಲೂ ಸಹಕಾರ ನೀಡಲಾಗಿದೆ ಮತ್ತು ಸನ್ಮಾನಿಸಲಾಗಿದೆ. ಮುಂದೆ ನಡೆಯುವ ಓಲಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಸಹಕಾರ ನೀಡಲಾಗುವುದು ಅಲ್ಲಿ ಪದಕ ಗೆದ್ದು ಬಂದಾಗ ಮೂಡುಬಿದಿರೆಯಲ್ಲಿ ದೊಡ್ಡ ಮಟ್ಟದ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ಹೇಳಿದ ಆಳ್ವರು ಇಂತಹ ಕಾರ್ಯಕ್ರಮಗಳು ಕ್ರೀಡಾಪಟುಗಳಿಗೆ ಸ್ಪೂರ್ತಿಯಾಗಬೇಕು ಎಂದು ಹೇಳಿದರು. ಉಪನ್ಯಾಸಕಿ ದೀಪಾ ರತ್ನಾಕರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

By Suddi9

Leave a Reply

Your email address will not be published. Required fields are marked *