ಬಂಟ್ವಾಳ : ಕಲ್ಲಡ್ಕ ರಾಷ್ಟ್ರದ ಆಧಾರಸ್ತಂಭಗಳು ವಿದ್ಯಾರ್ಥಿಗಳು ರಾಷ್ಟ್ರ ಸರಿಯಾದ ದಿಕ್ಕಿನಲ್ಲಿ ಸಾಗಬೇಕಾದರೆ ವಿದ್ಯಾರ್ಥಿಗಳು ಸರಿಯಾದ ಜ್ಞಾನ, ಚಾರಿತ್ರ್ಯವನ್ನು ಹೊಂದಿರಬೇಕು ಎಂದು ಶ್ರೀರಾಮ ಬಾಲಕರ ವಸತಿ ನಿಲಯದ ಪಾಲಕ ರಾಮಚಂದ್ರಪ್ಪ ತಿಳಿಸಿದರು.

ಅವರು ಪದವಿ ಪೂರ್ವ ವಿದ್ಯಾಲಯ ಕಲ್ಲಡ್ಕದ ಅಜಿತಕುಮಾರ ಸಭಾಂಗಣದಲ್ಲಿ ಭಾವನಾ ಸಾಂಸ್ಕೃತಿಕ ಸಂಘದ ವತಿಯಿಂದ ನಡೆದ ವಿದ್ಯಾರ್ಥಿ ದಿನ ಆಚರಣೆ ಮತ್ತು ಪ್ರತಿಭಾ ಅನ್ವೇಷಣೆ ಕಾರ್ಯಕ್ರಮದಲ್ಲಿ ಮಾತನಾಡಿ ಸ್ವಾಮಿ ವಿವೇಕಾನಂದರನ್ನು ಆದರ್ಶವಾಗಿರಿಸಿಕೊಂಡು ವಿದ್ಯಾರ್ಥಿಗಳು ದೇಶಕ್ಕಾಗಿ ಏನಾದರೂ ಮಾಡಬೇಕು, ಸೇವಾ ಕ್ಷೇತ್ರಕ್ಕೆ ಎಲ್ಲರೂ ಧುಮುಕಬೇಕು, ರಾಷ್ಟ್ರ ಪುನರ್ ನಿರ್ಮಾಣದ ಕನಸಿನಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ತರವಾದುದು. ‘ವಿದ್ಯಾರ್ಥಿ ಶಕ್ತಿ ರಾಷ್ಟ್ರ ಶಕ್ತಿ’ ಎಂದು ವಿದ್ಯಾರ್ಥಿಗಳ ಜೊತೆಗೂಡಿ ಘೋಷಣೆ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಉಪಪ್ರಾಂಶುಪಾಲ ರಾಜಾರಾಮವರ್ಮ ವಹಿಸಿದ್ದರು. ‘ಪ್ರತಿಭಾ ಅನ್ವೇಷಣೆ ಕಾರ್ಯಕ್ರಮದ ಸಲುವಾಗಿ ನೃತ್ಯ ಮತ್ತು ಸಂಗೀತದ ಮೂಲಕ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.
ಸಾಂಸ್ಕೃತಿಕ ಸಂಘದ ನಿರ್ದೇಶಕಿ ಶೋಭಾ ವಿ.ಶೆಟ್ಟಿ ಕಾರ್ಯಕ್ರಮ ಸಂಯೋಜಿಸಿದರು. ಸಾಂಸ್ಕೃತಿಕ ಸಂಘದ ಕಾರ್ಯದ
ಸುಪ್ರೀತಾ ಕಾರ್ಯಕ್ರಮ ನಿರ್ವಹಿಸಿದರು.
