ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಪುದು ಗ್ರಾಮದ ಕುಂಜತ್ಕಲ ಎಂಬಲ್ಲಿ ಗುರುವಾರ ರಾತ್ರಿ ಸುರಿದ ಭಾರೀ ಮಳೆಗೆ ಮನೆಯೊಂದಕ್ಕೆ ಗುಡ್ಡ ಕುಸಿದು ಬಿದ್ದ ಪರಿಣಾಮ ಬಾಲಕರೊಬ್ಬರು ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ಇಲ್ಲಿನ ನಿವಾಸಿ ಮಹಮ್ಮದ್ ಹನೀಫ್ ಎಂಬವರ ಪುತ್ರ ಮೊಹಮ್ಮದ್ ಹರ್ಷದ್(7) ಎಂದು ಗುರುತಿಸಲಾಗಿದೆ. ಗುರುವಾರ ರಾತ್ರಿ ಸುಮಾರು ಎಂಟೂವರೆ ಗಂಟೆಗೆ ಹೊರಗೆ ಭಾರೀ ಮಳೆಯಾಗುತ್ತಿದ್ದಂತೆಯೇ ಬಾಲಕ ಹರ್ಷದ್ ಮನೆಯೊಳಗೆ ಹಿಂಬದಿ ಶೌಚಾಲಯಕ್ಕೆ ತೆರಳಿದ್ದನು ಎನ್ನಲಾಗಿದ್ದು,
10btl-Mohmd Harshad

10btl-pudu (1)

10btl-pudu-1

10btl-pudu
ಇದೇ ವೇಳೆ ಮನೆ ಪಕ್ಕದ ಗುಡ್ಡವೊಂದು ದಿಢೀರನೆ ಮನೆಯ ಗೋಡೆ ಮೇಲೆ ಬಲವಾಗಿ ಬಿದ್ದಿದೆ. ಇದರಿಂದಾಗಿ ಮನೆಯ ಒಂದು ಭಾಗದ ಸಂಪೂರ್ಣ ಗೋಡೆ ಈತನ ಮೇಲೆ ಕುಸಿದು ಬೀಳುತ್ತಿದ್ದಂತೆಯೇ ಹೆಂಚಿನ ಮಾಡು ಅದರ ಮೇಲೆ ಉರಳಿದೆ. ಈ ಗೋಡೆ ಮತ್ತು ಮನೆ ಮಾಡು ಕುಸಿತದ ಭಾರೀ ಸದ್ದಿನ ಜೊತೆಗೆ ಮನೆಯಲ್ಲಿದ್ದ ಇತರರು ಬೊಬ್ಬೆ ಹಾಕುತ್ತಾ ಹೊರಗೆ ಓಡಿ ಹರ್ಷದ್ ನನ್ನು ಹುಡುಕಾಡಿದ್ದಾರೆ. ತಕ್ಷಣವೇ ಮನೆ ಸಮೀಪದ ಮಹಮ್ಮದ್ ಸಾಲಿ, ರಹೀಂ, ಯೂಸುಫ್, ಸ್ಥಳೀಯ ಗ್ರಾ.ಪಂ.ಉಪಾಧ್ಯಕ್ಷ ಮಹಮ್ಮದ್ ಶರೀಫ್, ಸದಸ್ಯ ಅಬ್ದುಲ್ ಲತೀಫ್, ಜಿ.ಪಂ.ಮಾಜಿ ಉಪಾಧ್ಯಕ್ಷ ಉಮ್ಮರ್ ಫಾರೂಕ್ ಮತ್ತಿತರರು ಧಾವಿಸಿ ಬಂದು ಸುಮಾರು ಅರ್ಧ ತಾಸಿನಲ್ಲಿ ಮಣ್ಣು ತೆರವುಗೊಳಿಸಿ ಬಾಲಕನನ್ನು ಸ್ಥಳೀಯ ತುಂಬೆ ಖಾಸಗಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಆತನು ಸಾವನ್ನಪ್ಪಿರುವುದು ಕಂಡು ಬಂದಿದೆ.

ಇಲ್ಲಿನ ಗುಡ್ಡ ಕುಸಿತದ ರಭಸದಲ್ಲಿ ಮನೆ ಪಕ್ಕದ ವಿದ್ಯುತ್ ಕಂಬವೊಂದು ತಂತಿ ಸಹಿತ ಮುರಿದು ಬಿದ್ದ ಪರಿಣಾಮ ಇಲ್ಲಿನ ಹಲವು ಮನೆಗಳಿಗೆ ವಿದ್ಯುತ್ ಸಂಪರ್ಕವೂ ಕಡಿತಗೊಂಡಿದೆ. ಈ ಗುಡ್ಡ ಕುಸಿತದಿಂದಾಗಿ ಇಲ್ಲಿನ ಐದಾರು ಮನೆಗಳು ಮತ್ತೆ ಕುಸಿತದ ಭೀತಿ ಎದುರಿಸುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಇದೇ ವೇಳೆ ಬಂಟ್ವಾಳ ಗ್ರಾಮಾಂತರ ಠಾಣಾಧಿಕಾರಿ ರಕ್ಷಿತ್ ಕುಮಾರ್ ನೇತೃತ್ವದ ಪೊಲೀಸರು ಮತ್ತು ತಹಶೀಲ್ದಾರ್ ಪುರಂದರ ಹೆಗ್ಡೆ, ಕಂದಾಯ ನಿರೀಕ್ಷಕ ನಾರಾಯಣ ಪೂಜಾರಿ, ಗ್ರಾಮಕರಣಿಕ ಪ್ರದೀಪ್ ಕೆ. ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪರಿಹಾರಕ್ಕೆ ಆಗ್ರಹ:
ತೀರಾ ಬಡತನ ಹೊಂದಿರುವ ಮಹಮ್ಮದ್ ಹನೀಫ್ ಅವರು ಕೂಲಿ ಕೆಲಸ ಮಾಡಿಕೊಂಡು ಪತ್ನಿ ಮತ್ತು ಆರು ಮಂದಿ ಮಕ್ಕಳೊಂದಿಗೆ ಜೀವಿಸುತ್ತಿದ್ದು, ಈ ಪೈಕಿ ನಾಲ್ವರು ಪುತ್ರರು ಮತ್ತು ಇಬ್ಬರು ಪುತ್ರಿಯರು ಇದ್ದಾರೆ. ಇವರಲ್ಲಿ ಮೃತಪಟ್ಟ ಹರ್ಷದ್ ಐದನೇಯವನಾಗಿದ್ದು, ಈತನ ಬಳಿಕ ಸಹೋದರಿ ಇದ್ದಾರೆ. ಈತನು ಸ್ಥಳೀಯ ಅಮ್ಮೆಮಾರ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡನೇ ತರಗತಿ ವಿದ್ಯಾರ್ಥಿ.
ಈ ಹಿಂದೆ ಸ್ಥಳೀಯ ಅಮ್ಮೆಮಾರ್ನಲ್ಲಿ ವಾಸವಾಗಿದ್ದ ಮಹಮ್ಮದ್ ಹನೀಫ್ ಕಳೆದ ಮೂರು ವರ್ಷಗಳ ಹಿಂದೆಯಷ್ಟೇ ಇಲ್ಲಿನ ನಿವಾಸಿ ಎಂ.ಎಸ್.ಲತೀಫ್ ಎಂಬವರ ಹೆಂಚಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಮೃತರ ಕುಟುಂಬಕ್ಕೆ ಸಕರ್ಾರದ ಪ್ರಾಕೃತಿಕ ವಿಕೋಪ ಯೋಜನೆಯಡಿ ಸೂಕ್ತ ಪರಿಹಾರ ಜೊತೆಗೆ ಮನೆ ನಿವೇಶನ ಮತ್ತು ವಸತಿ ಸೌಲಭ್ಯ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಭೇಟಿ:
ಆರೋಗ್ಯ ಸಚಿವ ಯು.ಟಿ.ಖಾದರ್, ಜಿ.ಪಂ.ಉಪಾಧ್ಯಕ್ಷ ಸತೀಶ ಕುಂಪಲ, ಸದಸ್ಯೆ ಜಯಶ್ರೀ ಕೆ.ಏ, ಗ್ರಾ.ಪಂ.ಮಾಜಿ ಅಧ್ಯಕ್ಷ ಮಹಮ್ಮದ್ ಹನೀಫ್, ಬಿಜೆಪಿ ಮುಖಂಡ ಮನೋಜ್ ಆಚಾರ್ಯ, ಸೇವಾಂಜಲಿ ಪ್ರತಿಷ್ಠಾನ ಟ್ರಸ್ಟಿ ಕೆ.ಕೆ.ಪೂಂಜ ಮತ್ತಿತರರು ಮೃತರ ಮನೆಗೆ ಶುಕ್ರವಾರ ಭೇಟಿ ಸಾಂತ್ವನ ವ್ಯಕ್ತಪಡಿಸಿದರು.

By Suddi9

Leave a Reply

Your email address will not be published. Required fields are marked *