ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆ ಸಮೀಪದ ಕರ್ಪೆ ಎಂಬಲ್ಲಿ ಭಾನುವಾರ ಸಂಜೆ ತಂಡವೊಂದು ಇಸ್ಪೀಟು ದಂಧೆಯಲ್ಲಿ ನಿರತರಾಗಿದ್ದ ವೇಳೆ ಬಂಟ್ವಾಳ ಗ್ರಾಮಾಂತರ ಠಾಣಾಧಿಕಾರಿ ರಕ್ಷಿತ್ ಕುಮಾರ್ ನೇತೃತ್ವದ ಪೊಲೀಸರು ದಾಳಿ ನಡೆಸಿ ಆರು ಮಂದಿಯನ್ನು ಬಂಧಿಸಿದ ಘಟನೆ ನಡೆದಿದೆ.
ಬಂಧಿತರನ್ನು ಸ್ಥಳೀಯ ನಿವಾಸಿಗಳಾದ ರಾಜೇಶ, ಶ್ರೀಪತಿ, ಸುಂದರ ಶೆಟ್ಟಿ, ತೌಸೀಫ್, ಶಬೀರ್ ಮತ್ತು ದಿಪೀಪ್ ಕುಮಾರ್ ಎಂದು ಗುರುತಿಸಲಾಗಿದ್ದು, ಇವರಿಂದ ರೂ 3,300 ಮೊತ್ತದ ನಗದು ಮತ್ತು ರೂ 5.5ಲಕ್ಷ ಮೌಲ್ಯದ ವಾಹನ ವಶಪಡಿಸಿಕೊಳ್ಳಲಾಗಿದೆ. ಈ ನಡುವೆ ದಾಳಿ ಸಂದರ್ಭದಲ್ಲಿ ಸಿದ್ಧಕಟ್ಟೆ ನಿವಾಸಿ ಮೋಹನ ಮತ್ತು ಮೂಡುಬಿದ್ರೆ ನಿವಾಸಿ ಅನ್ಸಾರ್, ನಿತ್ಯಾನಂದ ಎಂಬವರು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
