ಬಂಟ್ವಾಳ: ನಮೋ ಪ್ರೆಂಡ್ಸ್ ಬಂಟ್ವಾಳ ಇವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಒಂದು ವರ್ಷದ ಸ್ವಚ್ಛ ಜನಪ್ರಿಯ ಆಡಳಿತದ ವರ್ಷಾಚರಣೆಯ ಸಲುವಾಗಿ ಬಂಟ್ವಾಳ ಬೈಪಾಸ್ ರಾಮನಗರದ ಉಮೇಶ್ ಪೂಜಾರಿಯವರ ಮಗಳಾದ ಕುಮಾರಿ ಪ್ರತೀಕ್ಷಾ ಎಂಬ ವಿದ್ಯಾರ್ಥಿನಿಗೆ ಶಿಕ್ಷಣ ಮುಂದುವರಿಕೆಗೆ ರೂ.10,000 ಸಹಾಯಧನವನ್ನು ಮಾಜಿ ಪುರಸಭಾ ಅಧ್ಯಕ್ಷರಾದ ಶ್ರೀ ಬಿ.ದಿನೇಶ್ ಭಂಡಾರಿಯವರ ಉಪಸ್ಥಿತಿ ಮತ್ತು ನಮೋ ಪ್ರೆಂಡ್ಸ್ ಕಾರ್ಯಕರ್ತರ ಸಮ್ಮುಖದಲ್ಲಿ ನೀಡಲಾಯಿತು.

