ಬಂಟ್ವಾಳ: ಪರಸ್ಪರ ಪ್ರೀತಿಸುತ್ತಿದ್ದು, ಮನೆಮಂದಿಗೆ ಅಂಜಿ ಮನೆ ಬಿಟ್ಟು ತೆರಳಿದ್ದ ಯುವ ಜೋಡಿಯನ್ನು ಪತ್ತಹಚ್ಚಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರು ಬುಧವಾರ ವಿವಾಹ ಭಾಗ್ಯ ಒದಗಿಸಿದ್ದಾರೆ.
BTW_JUNE17_10
ಪಂಜದ ಯುವಕ ಹರಿಪ್ರಸಾದ್ ಹಾಗೂ ಬಾಳ್ತಿಲದ ಯುವತಿ ಮಮತಾ ಪರಸ್ಪರ ಪ್ರೀತಿಸುತ್ತಿದ್ದರು. ಇದನ್ನು ಮನೆಮಂದಿಗೆ ತಿಳಿಸಲು ಅಂಜಿದ ಜೋಡಿ ಮನೆಬಿಟ್ಟು ಮಂಜೇಶ್ವರಕ್ಕೆ ತೆರಳಿದ್ದರು. ಈ ಬಗ್ಗೆ ಮಾಹಿತಿ ಪಡೆದ ವಿಶ್ವಹಿಂದು ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರು ಅವರನ್ನು ಪತ್ತೆಹಚ್ಚಿ ಮತ್ತೆ ಊರಿಗೆ ಕರೆತಂದು ಉಭಯ ಮನೆಯವರನ್ನು ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬುಧವಾರ ಬೆಳಿಗ್ಗೆ ದಾಸಕೋಡಿಯ ಕಲಾಶ್ರಯದಲ್ಲಿ ಕಶೆಕೋಡಿ ಸೂರ್ಯನಾರಾಯಣ ಭಟ್ಟರ ನೇತೃತ್ವದಲ್ಲಿ ಅವರಿಗೆ ಕಂಕಣ ಭಾಗ್ಯ ಒದಗಿಸಿದ್ದಾರೆ.
ಈ ಸಂದರ್ಭ ಜಿ.ಪಂ.ಸದಸ್ಯ ಚೆನ್ನಪ್ಪ ಕೋಟ್ಯಾನ್, ತಾ.ಪಂ.ಸದಸ್ಯ ದಿನೇಶ್ ಅಮ್ಟೂರು, ಗ್ರಾ.ಪಂ.ಸದಸ್ಯ ಪಿ.ಎಸ್.ಮೋಹನ್, ಬಜರಂಗದಳದ ಸಂಚಾಲಕ ಗುರುರಾಜ್ ಬಂಟ್ವಾಳ್, ಪ್ರಮುಖರಾದ ಶರತ್ ನೀರಪಾದೆ, ಪ್ರದೀಪ್ ಅಜ್ಜಿಬೆಟ್ಟು, ಶಿವರಾಜ್ ಕಾಂದಿಲ, ವಿಶ್ವನಾಥ ನೀರಪಾದೆ, ಮತ್ತಿತರರು ಹಾಜರಿದ್ದರು.

By Suddi9

Leave a Reply

Your email address will not be published. Required fields are marked *