ಬಂಟ್ವಾಳ; ಚಾಲಕನ ನಿಯಂತ್ರಣ ತಪ್ಪಿದ ಕಬ್ಬುಸಾಗಾಟದ ಲಾರಿಯೊಂದು ರಸ್ತೆ ಪಕ್ಕದ ಕಮರಿಗೆ ಮಗುಚಿ ಬಿದ್ದ ಘಟನೆ ಬಿ.ಸಿ.ರೋಡು ಕಡೂರು ರಾಷ್ಟ್ರೀಯ ಹೆದ್ದಾರಿಯ ಬಂಟ್ವಾಳ ಜಕ್ರಿಬೆಟ್ಟು ಎಂಬಲ್ಲಿ ನಡೆದಿದೆ. ಶುಕ್ರವಾರ ಬೆಳಗಿನ ಜಾವ ಈ ದುರ್ಘಟನೆ ಸಂಭವಿಸಿದ್ದು, ಚಾಲಕ ಜಗದೀಶ್, ನಿರ್ವಾಹಕ ಚಂದ್ರಶೇಖರ್ ಎಂಬವರಿಗೆ ಗಾಯಗಳಾಗಿದೆ.

5

ಹಾಸನದ ಹೊಳೆನರಸೀಪುರ ಎಂಬಲ್ಲಿಂದ ಮಂಗಳೂರಿಗೆ ಕಬ್ಬು ಸಾಗಾಟ ನಡೆಸುತ್ತಿದ್ದ ಸಂದರ್ಭ ಈ ಅವಘಡ ಸಂಭವಿಸಿದ್ದು, ಚಾಲಕ ಹಾಗೂ ಕಂಡಕ್ಟರ್ ಚಿಕ್ಕಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಬಂಟ್ವಾಳ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ

By Suddi9

Leave a Reply

Your email address will not be published. Required fields are marked *