ಮೂಡುಬಿದರೆ: ಪಂಚಾಯಿತಿ ಚುನಾವಣೆಯ ಸಂದರ್ಭದಲ್ಲಿ ಯಾವುದೇ ಪಕ್ಷದವರು ತಾವು ಪ್ರತಿನಿಧಿಸುತ್ತಿರುವ ಪಕ್ಷದ ಚಿಹ್ನೆ ಮತ್ತು ಪಕ್ಷದ ನಾಯಕರುಗಳ ಭಾವಚಿತ್ರವನ್ನು ಹೊಂದಿರುವ ಪ್ರಚಾರ ಕರಪತ್ರವನ್ನು ಮಾಡಬಾರದು ಎಂದು ಜಿಲ್ಲಾಡಳಿತವು ಸೂಚನೆ ನೀಡಿದೆ ಆದರೆ ಬಿಜೆಪಿಗರು ಮೋದಿ ಇರುವ ಕರಪತ್ರಗಳನ್ನು ಮನೆ ಮನೆಗೆ ಹಂಚುವ ಮೂಲಕ ಕಾನೂನಿಗೆ ಅಗೌರವ ತೋರಿಸುತ್ತಿದ್ದಾರೆ. ಕಾನೂನಿಗೆ ತಲೆ ಬಾಗದೆ ಇರುವುದರಿಂದಲೇ ಈ ಹಿಂದೆ ಬಿಜೆಪಿಯಲ್ಲಿದ್ದ ಕೆಲವು ಮಂದಿ ಮಂತ್ರಿಗಳು ಜೈಲು ಪಾಲಾಗಲು ಕಾರಣಕರ್ತರಾಗಿದ್ದಾರೆ ಇದೇ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಕ್ಕಿರುವ ವ್ಯತ್ಯಾಸ ಎಂದು ಸಚಿವ ಅಭಯಚಂದ್ರ ಜೈನ್ ಆರೋಪಿಸಿದ್ದಾರೆ.


ಅವರು ಮೂಡುಬಿದರೆ ಪ್ರೆಸ್‍ಕ್ಲಬ್‍ನಲ್ಲಿ ಸೋಮವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಈ ಬಗ್ಗೆ ಮಾಹಿತಿ ನೀಡಿದರು. ಎಂದು ಹೇಳಿದರು.
ಸಿದ್ದರಾಮಯ್ಯ ಜನಪರ ಆಡಳಿತ
ರಸ್ತೆಗಳ ಅಭಿವೃದ್ಧಿಗೆ ರೂ 20 ಕೋಟಿ ಅನುದಾನ ಮಂಜೂರಾತಿಯಾಗಿ ಕಾಮಗಾರಿಗಳು ನಡೆದಿವೆ. ಬೈಪಾಸ್ ರಸ್ತೆಯ ಕಾಮಗಾರಿ ನಡೆಯುತ್ತಿದೆ, ದೇಶದ ಇತಿಹಾಸದಲ್ಲಿಯೇ ಕ್ರೀಡೆಗೆ ಕರ್ನಾಟಕ ಸರ್ಕಾರವು 2ಕೋಟಿ ರೂವನ್ನು ಬಿಡುಗೊಡೆಗೊಳಿಸಿದ್ದು ಇದರಲ್ಲಿ ಮೂಡುಬಿದರೆಯಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ, ಮೂಡುಬಿದರೆ ಮತ್ತು ಮಂಗಳಾ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಕ್ರೀಡಾಕೂಟಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದ ಅವರು ಕ್ರೀಡೆಗಾಗಿ ಕೇಂದ್ರ ಸರಕಾರದಿಂದ ರಾಜ್ಯ ಸರಕಾರಕ್ಕೆ ಒಂದು ವರ್ಷದಿಂದ ಒಂದು ರೂಪಾಯಿಯ ಅನುದಾನ ಬಂದಿಲ್ಲವೆಂದು ಆರೋಪಿಸಿದರು. ಸಿದ್ದರಾಮಯ್ಯ ಅವರದ್ದು ಜನಪರ ಯೋಜನೆಗಳ ಆಡಳಿತ. ಮೋದಿ ರೀತಿಯ ಪ್ರಚಾರ ಆಡಳಿತವಲ್ಲ ಎಂದಿದ್ದಾರೆ.
ಒಳನಾಡು ಮೀನುಗಾರರಿಗೆ ನ್ಯಾಯ ಸಿಗದ ಕಾರಣ ಮೀನು ಹಿಡಿಯುವವರು ತಾವು ಹಿಡಿದ ಮೀನಿನಲ್ಲಿ ಗುತ್ತಿಗೆದಾರರಿಗೆ 50ಶೇ ಅನುಪಾತದಲ್ಲಿ ಮೀನನ್ನು ಹಂಚಲು ಅವಕಾಶ ಕಲ್ಪಿಸಲಾಗಿದೆ ಮತ್ತು ಬೋಟುಗಳನ್ನು ಹೊಂದಿರುವ 550 ಮಂದಿಯಲ್ಲಿ 1 ಕ್ಕಿಂತ ಹೆಚ್ಚು ಬೋಟ್ ಹೊಂದಿರುವವರಿಗೆ ಡೀಸೆಲ್‍ನಲ್ಲಿ ನಿರ್ಬಂಧ ಮಾಡಲಾಗಿದೆ ಎಂದು ಜೈನ್ ತಿಳಿಸಿದರು.
ಮೂಡುಬಿದರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೇಘನಾಧ ಶೆಟ್ಟಿ, ಉಪಾಧ್ಯಕ್ಷ ಸುರೇಶ್ ಪ್ರಭು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
