ವಿಟ್ಲ: ಖಾಸಗೀ ಜಮೀನಿನಲ್ಲಿ ಅಕ್ರಮವಾಗಿ ಮರಳು ದಾಸ್ತಾನು ಮಾಡಿ, ಯಂತ್ರಗಳನ್ನು ಬಳಸಿ ಸ್ವಚ್ಛ ಮಡಿಸಿ ಮರಳು ಮಾರಾಟ ಮಾಡುತ್ತಿದ್ದ ಘಟಕದ ಮೇಲೆ ಜಿಲ್ಲಾಧಿಕಾರಿ ಆದೇಶದ ಮೇರೆಗೆ ದಾಳಿ ನಡೆಸಿ ಮರಳು ತುಂಬಿದ್ದ ಲಾರಿ, ಮರಳು ಜರಡಿ ಯಂತ್ರ ವಶಕ್ಕೆ ಪಡೆಯುವ ಜೊತೆಗೆ 15 ಲೋಡ್ ಮರಳನ್ನು ಮುಟ್ಟುಗೋಲು ಹಾಕಿಕೊಂಡ ಘಟನೆ ಕುಳ ಗ್ರಾಮದ ಜೇಡರಕೋಡಿಯಲ್ಲಿ ಮಂಗಳವಾರ ನಡೆದಿದೆ.
ಜಿಲ್ಲಾಧಿಕಾರಿಗಳಿಗೆ ಸ್ಥಳೀಯರು ನೀಡಿದ ದೂರಿನ ಮೇರೆಗೆ ಜಿಲ್ಲಾಧಿಕಾರಿ ಎ ಬಿ ಇಬ್ರಾಹಿಂ ಅವರು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ತಕ್ಷಣ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು, ಬಂಟ್ವಾಳ ತಹಸೀಲ್ದಾರ ಸೀನಿ ಮೇರಿ ತೌರೋ ಹಾಗೂ ತಹಸೀಲ್ದಾರ ಪುರಂದರ ಹೆಗ್ಡೆ ಮಾರ್ಗದರ್ಶನದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ವಿಟ್ಲ ಪೋಲೀಸರ ಸಹಕಾರದೊಂದಿಗೆ ದಾಳಿಗೆ ಕಳುಹಿಸಿದ್ದಾರೆ. ಈ ಸಂದರ್ಭ ಸದ್ರಿ ಜಮೀನಿನಲ್ಲಿ ಮರಳು ಜರಡಿ ಯಂತ್ರದ ಮೂಲಕ ಮರಳನ್ನು ಸ್ವಚ್ಛ ಮಾಡಿ ಲಾರಿಗೆ ತುಂಬಲಾಗುತ್ತಿತ್ತು. ಅವರನ್ನು ವಿಚಾರಿಸಿದಾಗ ಜಗದೀಶ್ ಬದನಾಜೆ ಎಂಬವರು ಕೆಲಸ ಮಾಡುತ್ತಿರುವುದೆಂದು ಹೇಳಿದ್ದು, ಅವರನ್ನು ಗಣಿ ಇಲಾಖಾಧಿಕಾರಿಗಳು ದೂರವಾಣಿಯಲ್ಲಿ ಸಂಪರ್ಕಿಸಿದಾಗ ಸದ್ರಿ ಜಮೀನು ಕುಳ ಗ್ರಾಮದ ಸ. ನಂ 22/7 ರಲ್ಲಿ 0.25 ಹಾಗೂ ಸ. ನಂ 22/9 ರಲ್ಲಿ 0.17 ಎಕ್ರೆ ಇದ್ದು, ತನ್ನ ಪತ್ನಿ ಚಿತ್ರಾ ಬದನಾಜೆ ಎಂಬವರ ಹೆಸರಿನಲ್ಲಿದೆ ಎಂದಿದ್ದಾರೆ. ಆದರೆ ಗಣಿ ಇಲಾಖೆಯಿಂದ ನೀಡುವ ಪರವಾನಿಗೆಯನ್ನು ನೀಡುವಲ್ಲಿ ವಿಫಲವಾದ ಹಿನ್ನಲೆಯಲ್ಲಿ ಗಣಿ ಇಲಾಖೆಯ ಅಧಿಕಾರಿಗಳು ಇಲಾಖೆಯ ಪರವಾನಿಗೆ ಇಲ್ಲದೆ ಮರಳು ದಾಸ್ತಾನು ಮತ್ತು ಸಾಗಾಟ ಮಾಡುವುದು ಎಂ ಎಂ(ಡಿ & ಆರ್) ಆ್ಯಕ್ಟ್ – 1957 ಕಾಲಂ 21 ಹಾಗೂ ಕರ್ನಾಖ ಉಪಖನಿಜ ರಿಯಾಯಿತಿ ನಿಯಮಾವಳಿ 1994ರ ನಿಯಮ 42, 44ರ ನೇರ ಉಲ್ಲಂಘನೆಯಾಗಿರುತ್ತದೆ ಎಂದು ಎಲ್ಲವನ್ನೂ ವಶಕ್ಕೆ ಪಡೆದು ವಿಟ್ಲ ಪೆÇಲೀಸರ ವಶಕ್ಕೆ ನೀಡಿದ್ದಾರೆ.
ಮಂಗಳೂರು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ಸೋಮಶೇಖರ್, ವಿಟ್ಲ ಕಂದಾಯ ನಿರೀಕ್ಷಕ ದಿವಾಕರ್, ಕಂದಾಯ ಸಹಾಯಕ ಗಿರೀಶ್, ಗ್ರಾಮ ಸಹಾಯಕ ರಾಘವ ಗೌಡ, ತಿಲಕ್‍ರಾಜ್, ವಿಟ್ಲ ಪೋಲೀಸ್ ಠಾಣೆಯ ಉಪನಿರೀಕ್ಷಕ ಪ್ರಕಾಶ್ ದೇವಾಡಿ, ಪೋಲೀಸ್ ಸಿಬ್ಬಂದಿಗಳಾದ ಪ್ರವೀಣ್ ರೈ, ರಕ್ಷಿತ್ ರೈ, ಪ್ರಕಾಶ್ ಭಾಗವಹಿಸಿದ್ದರು.
ನಿಲ್ಲದ ಧಂದೆ:
ಇದೇ ಜಾಗಕ್ಕೆ 2014ರ ನ.7ರಂದು ಸ್ಥಳೀಯರ ಮಾಹಿತಿ ಮೇರೆಗೆ ಆಗಿ ತಹಸೀಲ್ದಾರ ಮಲ್ಲೇಸ್ವಾಮಿ ದಾಳಿಗೆ ಆದೇಶ ನೀಡಿ, ವಿಟ್ಲ ಕಂದಾಯ ನಿರೀಕ್ಷಕ ದಿವಾಕರ್ ದಾಳಿ ನಡೆಸಿದ್ದರು. ಈ ಸಂದರ್ಭ 15 ಲೋಡು ಅಕ್ರಮ ಮರಳು, 10 ಲೋಡು ಕಪ್ಪುಕಲ್ಲು ಸಂಗ್ರಹ ಮಾಡಿದ್ದು, ಕಂಡು ಬಂದಿದ್ದು, ಅದನ್ನು ಮುಟ್ಟುಗೋಲು ಹಾಕಿಕೊಳ್ಳುವ ಜೊತೆಗೆ ಜನರೇಟರ್, 3 ಮರಳು ಬೀಸುವ ಯಂತ್ರಗಳನ್ನು ವಶಕ್ಕೆ ಪಡೆಕೊಂಡು ಪ್ರಕರನವನ್ನು ಗಣಿ ಇಲಾಖೆಗೆ ಹಸ್ತಾಂತರಿಸಲಾಗಿತ್ತು. ಗಣಿ ಇಲಾಖೆ ಪರಿಶೀಲನೆ ನಡೆಸಿಸುಮಾರು 58ಸಾವಿರದಂಡ ವಿಧಿಸಿತ್ತು. ಈಗ ಮತ್ತೆ ದಂಧೆಗೆ ಮುಂದಾಗಿರುವುದು ಇಲಾಖಾ ಅಧಿಕಾರಿಗಳನ್ನೂ ಅಚ್ಚರಿಗೊಳಿಸಿದೆ.
ಸಾರ್ವಜನಿಕರಿಂದ ಪ್ರತಿಭಟನೆ:
ಕುಳ ಗ್ರಾಮದ ಅಡ್ಯಾಲುನಿಂದ ಕುಳ ಸಂಪರ್ಕದ ಮಣ್ಣಿನ ರಸ್ತೆಯಲ್ಲಿ ನಿರಂತರವಾಗಿ ಕೆಂಪು ಕಲ್ಲು ಹೇರಿಕೊಂಡು ಘನ ಭಾರದ ಲಾರಿಗಳು ಪ್ರತೀ ದಿನ ದಿವಸಕ್ಕೆ 20 ಬಾರಿ ಸಂಚರಿಸಿದ ಪರಿಣಾಮ ಸುಮಾರು ಐದು ದಶಕಗಳಿಂದ ಸುಂದರವಾಗಿದ್ದ ಮಣ್ಣಿನ ರಸ್ತೆ ಐದಾರು ತಿಂಗಳುಗಳಲ್ಲಿ ಹದಗೆಟ್ಟು ಹೋಗಿತ್ತು. ಮಳೆಗಾಲದಲ್ಲಿಯೂ ಇವರ ಲಾರಿಗಳಿ ನಿರಂತರ ಸಂಚರಿಸಿದ ಕಾರಣ ಅಡ್ಯಾಲು, ಕರ್ಗಲ್ಲು, ಪೆಲತ್ತಿಂಜ, ಜೇಡರಕೋಡಿ, ಗುರ್ಜಿನಡ್ಕ ಪರಿಸರದ ನಿತ್ಯ ಸಂಚಾರಿಗಳಿಗೆ ನಡೆದು ಹೋಗಲೂ ಸಹ ಅಸಾಧ್ಯವಾಗಿದ್ದು ಈ ನಿಟ್ಟಿನಲ್ಲಿ ಘನ ಭಾರದ ಲಾರಿಗಳ ಸಂಚಾರವನ್ನು ತಕ್ಷಣದಿಂದ ನಿರ್ಬಂಧಿಸಬೇಕು, ಪಂಚಾಯಿತಿ ವತಿಯಿಂದ ಸಮರ್ಪಕ ಒಳ ಚರಂಡಿ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿ ಈ ವ್ಯಾಪ್ತಿಯ ಮೂವತ್ತಕ್ಕಿಂತಲೂ ಹೆಚ್ಚಿನ ಮನೆ ಮಂದಿ ರಸ್ತೆತಡೆ, ಪ್ರತಿಭಟನೆ ನಡೆಸಿದರು. ಪಿಡಿಒ ಭರವಸೆಯ ಬಳಿಕ ಪ್ರತಿಭಟನೆ ಹಿಂತೆಗೆದುಕೊಂಡಿದ್ದರು. ಆ ಬಳಿಕ ಕಣ್ಣಿಗೆ ಮಣ್ಣೆರಚುವಂತೆ ಹೊಂಡಗಳಿಗೆ ಕಲ್ಲು ಹುಡಿ ಹರಡಲಾಗಿತ್ತು.
ಹೊಸ ಕಾಂಕ್ರೀಟ್ ರಸ್ತೆ ಧ್ವಂಸ:
ಶಾಸಕರ ಅನುದಾನದಿಂದ ಕುಳ ಸಂಪರ್ಕ ರಸ್ತೆಗೆ 5 ಲಕ್ಷ ಕಾಂಕ್ರೀಟಿಕರಣಕ್ಕೆ ಅನುದಾನ ದೊರಕಿದ್ದು, ಇತ್ತೀಚೆಗಷ್ಟೇ 100 ಮೀ. ರಸ್ತೆ ನಿರ್ಮಾಣಗೊಂಡಿದೆ. ಆ ರಸ್ತೆಯ ಮೇಲೆ ಮಿತಿಮೀರಿ ಭಾರವನ್ನು ಹೇರಿಕೊಂಡು ಸಂಚರಿಸಿದ ಲಾರಿಯಿಂದಾಗಿ ಕಾಂಕ್ರೀಟ್ ರಸ್ತೆ ಧ್ವಂಸಗೊಂಡಿದೆ. ಮಣ್ಣಿನ ರಸ್ತೆಯ ಮೇಲೆ ನಿರಂತರ ಸಾಂಚಾರದಿಂದ ರಸ್ತೆ ಹೊಂಡಮಯವಾಗಿದೆ.
ಚಿತ್ರ ಇದೆ:
ವಿಐಎಲ್_19ಮೇ_1, ವಿಐಎಲ್_19 ಮೇ_2, ವಿಐಎಲ್_19 ಮೇ_3 : ಗಣಿ ಇಲಾಖೆ ಪೆÇಲೀಸ್ ಇಲಾಖೆಗೆ ನೀಡಿದ ವರದಿ ಹಾಗೂ ಮಹಜರು ಪ್ರತಿ (ದಾಖಲೆಯ ನಿಟ್ಟಿನಲ್ಲಿ)
ವಿಐಎಲ್_19 ಮೇ_4: ಗಣಿ ಇಲಾಖೆ ಅಧಿಕಾರಿಗಳು ಮರಳು ಲಾರಿ ಮತ್ತು ಯಂತ್ರವನ್ನು ವಶಕ್ಕೆ ಪಡೆಯುತ್ತಿರುವುದು.
ವಿಐಎಲ್_19 ಮೇ_5 : ಪೆÇಲೀಸರು ವಶಕ್ಕೆ ಪಡೆದ ಯಂತ್ರವನ್ನು ಠಾಣೆಗೆ ವರ್ಗಾಯಿಸುತ್ತಿರುವುದು.





