ಬಂಟ್ವಾಳ: ಸಂಸದ ನಳಿನ್ ಕುಮಾರ್ ಕಟೀಲ್ ಅವರು ಬಿಸಿರೋಡುನಲ್ಲಿ ಮೇ.16ರಂದು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ಎರಡು ವರ್ಷಗಳ ಸಾಧನ ಸಮಾವೇಶ ಕರ್ನಾಟಕ ಮಾರಕ ಸಮಾವೇಶ ಎಂದು ಸಂಸದ ನಳೀನ್ ಕುಮಾರ್ ಕಟೀಲು ಟೀಕಿಸಿದರು.
ಬಿ.ಸಿ.ರೋಡಿನ ಟ್ರೇಡ್ ಸೆಂಟರ್ನಲ್ಲಿ ಗ್ರಾಮಪಂಚಾಯತ್ ಚುನಾವಣ ಹಿನ್ನಲೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಚುನವಾಣಾ ಪಕ್ಷದ ಕಛೇರಿಯನ್ನು ಉದ್ಘಾಟಿಸಿದ ಬಳಿಕ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ರಾಜ್ಯ ಸರ್ಕಾರದ ವಿರುದ್ದ ವಾಗ್ದಳಿ ನಡೆಸಿದ ಅವರು ಗೋಹಂತಕರ ರಕ್ಷಣೆ, ಮರಳು ಮಾಫಿಯ, ಭೂ ಮಾಫಿಯಾಕ್ಕೆ ಬೆಂಗಾವಲು, 9/11 ಮೂಲಕ ಬಡಜನರಿಗೆ ಮನೆಕಟ್ಟಲು ತೊಂದರೆ ನೀಡಿರುವುದೇ ರಾಜ್ಯ ಸರ್ಕಾರದ ಸಾಧನೆ ಎಂದರು. ಯಥಾ ರಾಜ ತಥಾ ಪ್ರಜಾ ದ ಬದಲು ರಾಜ್ಯ ಸರ್ಕಾರದ ನಡಾವಳಿಕೆ ಯಥಾ ರಾಜ ತಥಾ ಮಂತ್ರಿಯಾಗಿದೆ. ಸಿದ್ದರಾಮಯ್ಯನವರು ಗೂಂಡಾ ರಾಜಕಾರಣ ಮಾಡುತ್ತಿದ್ದಾರೆ. ಅದನ್ನೇ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ದ.ಕ.ಜಿಲ್ಲೆಯಲ್ಲಿ ಅನುಕರಿಸುತ್ತಿದದಾರೆ ಎಂದು ಲೇವಡಿ ಮಾಡಿದರು.
ಹಾಸನ – ಬಿ.ಸಿ.ರೋಡು ಚತುಷ್ಫಥ ರಸ್ತೆ ನಿರ್ಮಾಣಕ್ಕೆ 1800 ಕೋಟಿ ರುಪಾಯಿ, ಶಿರಾಡಿ ಕಾಮಾಗಾರಿ ಮುಕ್ತಾಯ ಹಂತದಲ್ಲಿದೆ. ಬಿ.ಸಿ.ರೋಡು- ಚಾರ್ಮಾಡಿ ಹೆದ್ದಾರಿ ನಿರ್ಮಾಣಕ್ಕೆ 200 ಕೋಟಿ ರುಪಾಯಿ, ದೀನ್ದಯಳ್ ವಿದ್ಯುದ್ದೀಕರಣ ಯೋಜನೆಯಡಿ 500 ಕೋಟಿ ರುಪಾಯಿ, ಮಂಗಳೂರನ್ನು ಸ್ಮಾರ್ಟ್ ಸಿಟಿ ಮಾಡಲು 400 ಕೋಟಿ ರುಪಾಯ ಅನುದಾನವನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿದೆ ಎಂದು ಅಂಕಿ ಅಂಶ ನೀಡಿದ ಸಂಸ ನಳೀನ್ ಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ರಮನಾಥ ರೈ ಅಲ್ಲಲ್ಲಿ ರಸ್ತೆಗೆ ತೆಂಗಿನ ಕಾಯಿ ಒಡೆದು ರಸ್ತೆ ಉದ್ಘಾಟನೆ ಮಾಡಲು ಕೇಂದ್ರ ಸರ್ಕಾರವೇ ನೆರವು ನೀಡಿರುವುದಾಗಿದೆ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ರೈತರ ಬಗ್ಗೆ ಕಾಳಜಿ ತೋರುತ್ತಿರುವ ರಾಹುಲ್ ಗಾಂಧಿ ಕನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವಾಗಲೇ ಹೆಚಚಿನ ಸಂಖ್ಯೆಯಲ್ಲಿ ರೈತರು ಆತ್ಮಹತ್ಯ ಮಾಡಿಕೊಂಡಿರುವುದು ಗೊತ್ತಿಲ್ಲವೇ? ಎಂದು ಪ್ರಶ್ನಿಸಿದರು.
ತನ್ನ ವಿದೇಶಾಂಗ ನೀತಿಯ ಮೂಲಕ ಪ್ರಧಾನಿ ನರೇಂದ್ರ ಮೋದಿ ಭಾರತವನ್ನು ವಿಶ್ವದ ಶ್ರೇಷ್ಟ ರಾಷ್ಟ್ರವಾಗಿ ರೂಪಿಸುತ್ತಿದ್ದಾರೆ ಎಂದ ಅವರು ಗ್ರಾಮಪಂಚಾಯತ್ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರು ಶ್ರಮಿಸುವಂತೆ ಕರೆ ನೀಡಿದರು.
ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಜಿ. ಆನಂದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ, ಬಿ. ನಾಗಾರಜ ಶೆಟ್ಟಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು. ಜಿ.ಪಂ.ಅಧ್ಯಕ್ಷೆ ಆಶಾ ತಿಮ್ಮಪ್ಪಗೌಡ, ಪಕ್ಷ ಪ್ರಮುಖರಾದ ಮೋನಪ್ಪ ಭಂಡಾರಿ, ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಡೆರಿಕ್, ಪದ್ಮನಾಭ ಕೊಟ್ಟಾರಿ, ಸುಲೋಚನಾ ಭಟ್, ತುಂಗಪ್ಪ ಬಂಗೇರ, ಸಂಜೀವ ಮಠಂದೂರು, ಪೃಥ್ವಿರಾಜ್, ರಾಮದಾಸ ಬಂಟ್ವಾಳ, ದೇವಾದಾಸ್ ಶೆಟ್ಟಿ, ಚೆನ್ನಪ್ಪ ಕೋಟ್ಯಾನ್, ಯಶವಂತ ದೇರಾಜೆ ಇದ್ದರು.
ನಾವೂರು ಗ್ರಾ.ಪಂ.ನ ಮಾಜಿ ಅಧ್ಯಕ್ಷೆ ಕಾಂಗ್ರೆಸ್ನ ಜೆಸಿಂತಾ ವಾಸ್ ಅವರನ್ನು ಈ ಸಂಧರ್ಭ ಪಕ್ಷದ ಬಾವುಟ ನೀಡಿ ಸ್ವಾಗತಿಸಿಕೊಳ್ಳಲಾಯಿತು.



